ಕೊರೊನಾ ಲಾಕ್ಡೌನ್ನಿಂದ ಬಹಳಷ್ಟು ಜನರು ತೊಂದರೆಗೆ ಸಿಲುಕಿದ್ದು ಕೆಲವರು ಇದ್ದ ಕೆಲಸವನ್ನು ಕೂಡಾ ಕಳೆದುಕೊಂಡಿದ್ದಾರೆ. ಜೀವನ ನಿರ್ವಹಣೆಗೆ ರಸ್ತೆ ಬದಿಯಲ್ಲಿ ಹಣ್ಣು, ತರಕಾರಿಗಳನ್ನು ಮಾರಾಟ ಮಾಡುತ್ತಿದ್ದಾರೆ. ಸಿನಿಮಾದಲ್ಲಿ ಸಣ್ಣ ಪುಟ್ಟ ಪಾತ್ರದಲ್ಲಿ ನಟಿಸುತ್ತಿದ್ದವರು ಕೂಡಾ ಏನಾದರೊಂದು ಕೆಲಸ ದೊರೆತರೆ ಸಾಕು ಎಂದು ಕಾಯುತ್ತಿರುವ ಪರಿಸ್ಥಿತಿ ನಿರ್ಮಾಣವಾಗಿದೆ.
-
He is an actor aaj woh sabzi bech raha hain javed hyder pic.twitter.com/4Hk0ICr7Md
— Dolly Bindra (@DollyBindra) June 24, 2020 " class="align-text-top noRightClick twitterSection" data="
">He is an actor aaj woh sabzi bech raha hain javed hyder pic.twitter.com/4Hk0ICr7Md
— Dolly Bindra (@DollyBindra) June 24, 2020He is an actor aaj woh sabzi bech raha hain javed hyder pic.twitter.com/4Hk0ICr7Md
— Dolly Bindra (@DollyBindra) June 24, 2020
ಆಮೀರ್ ಖಾನ್ ಹಾಗೂ ರಾಣಿ ಮುಖರ್ಜಿ ಜೊತೆ 'ಗುಲಾಮ್' ಚಿತ್ರದಲ್ಲಿ ನಟಿಸಿದ್ದ ಜಾವೆದ್ ಹೈದರ್ ಮುಂಬೈನಲ್ಲಿ ತಳ್ಳುವ ಗಾಡಿಯಲ್ಲಿ ತರಕಾರಿ ಮಾರುತ್ತಿದ್ದಾರೆ ಎಂಬ ಸುದ್ದಿ ವೈರಲ್ ಆಗಿತ್ತು. ಇದಕ್ಕೆ ಸಾಕ್ಷಿ ಎಂಬಂತೆ ಜಾವೆದ್ ಟೊಮ್ಯಾಟೋ ಮಾರುತ್ತಾ ಚಿತ್ರವೊಂದರ ಹಾಡಿಗೆ ಧ್ವನಿಗೂಡಿಸಿರುವ ಟಿಕ್ಟಾಕ್ ವಿಡಿಯೋವೊಂದನ್ನು ಹಾಸ್ಯನಟಿ, ಮಾಜಿ ಬಿಗ್ಬಾಸ್ ಸ್ಪರ್ಧಿ ಡಾಲಿ ಬಿಂದ್ರಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಈ ವಿಡಿಯೋ ನೋಡಿದ ನೆಟಿಜನ್ಸ್ ನಾನಾ ಕಮೆಂಟ್ಗಳನ್ನು ಮಾಡಿದ್ದರು. ಕೆಲವರು ಜಾವೆದ್ಗೆ ಇಂತ ಪರಿಸ್ಥಿತಿ ಬರಬಾರದಿತ್ತು ಎಂದು ಮರುಕ ಕೂಡಾ ವ್ಯಕ್ತಪಡಿಸಿದ್ದರು.
- " class="align-text-top noRightClick twitterSection" data="
">
ಆದರೆ ಈ ವಿಡಿಯೋ ಬಗ್ಗೆ ಜಾವೆದ್ ಹೈದರ್ ಸ್ಪಷ್ಟನೆ ನೀಡಿದ್ದಾರೆ. 'ನಾನು ತರಕಾರಿ ವ್ಯಾಪಾರಿ ಅಲ್ಲ, ಇಂದಿಗೂ ನಾನು ಸಿನಿಮಾಗಳಲ್ಲಿ ನಟಿಸುತ್ತಿದ್ದೇನೆ. ತರಕಾರಿ ಮಾರುವ ವಿಡಿಯೋ ಟಿಕ್ಟಾಕ್ ಅಷ್ಟೇ. ಕೊರೊನಾ ಸಮಯದಲ್ಲಿ ಕಷ್ಟ ಪಡುತ್ತಿರುವ ಜನರನ್ನು ಪ್ರೇರೇಪಿಸುವ ಉದ್ದೇಶದಿಂದ ನಾನು ಆ ಟಿಕ್ಟಾಕ್ ಮಾಡಿದ್ದೆ' ಎಂದು ಹೈದರ್ ಸ್ಪಷ್ಟನೆ ನೀಡಿದ್ದಾರೆ.
'ಕೊರೊನಾದಿಂದ ಸಾವಿರಾರು ಸಿನಿ ಕಾರ್ಮಿಕರ ಬದುಕು ಅಂತಂತ್ರವಾಗಿರುವುದು ನಿಜ. ಆದರೆ ನನಗೆ ದೇವರ ದಯೆಯಿಂದ ಯಾವುದೇ ತೊಂದರೆಯಾಗಿಲ್ಲ. ನಾನು ಮೊದಲು ಹೇಗೆ ಬದುಕುತ್ತಿದ್ದೆನೋ ಈಗಲೂ ಹಾಗೇ ಇದ್ದೇನೆ. ಈ ಒಂದು ವಿಡಿಯೋ ಇಷ್ಟರ ಮಟ್ಟಿಗೆ ವೈರಲ್ ಆಗುತ್ತದೆ ಎಂದು ನಾನು ಊಹಿಸಿರಲಿಲ್ಲ ' ಎಂದು ಜಾವೆದ್ ಹೈದರ್ ಹೇಳಿದ್ದಾರೆ. ಜಾವೆದ್ 1987 ರಲ್ಲಿ 'ಖುದ್ಗರ್ಜ್ ' ಚಿತ್ರದ ಮೂಲಕ ಬಾಲಿವುಡ್ಗೆ ಎಂಟ್ರಿ ಕೊಟ್ಟರು. ಇದುವರೆಗೂ ಸುಮಾರು 300 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಜಾವೆದ್ ನಟಿಸಿದ್ದಾರೆ.