ETV Bharat / sitara

ಅಕ್ಷಯ್ ​ಕುಮಾರ್​​ರ 'ಬಚ್ಚನ್​ಪಾಂಡೆ' ರಗಡ್​ ಲುಕ್​ಗೆ ಅಭಿಮಾನಿಗಳ ಅಸಮಾಧಾನ..ಪೋಸ್ಟರ್​ ವಾಪಸ್​ ಪಡೆದ ಸಿನಿಮಾ ತಂಡ

author img

By

Published : Feb 15, 2022, 5:08 PM IST

ಪೋಸ್ಟರ್​ನಲ್ಲಿ ಅಕ್ಷಯ್​ಕುಮಾರ್​ ಮಾಸ್​ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ. ನೀಲಿ ಕಣ್ಣು, ರೌದ್ರ ಮುಖ, ಕೈಯಲ್ಲಿ ಬಂದೂಕು ಮತ್ತು ತಲೆಗೆ ರುಮಾಲು ಸುತ್ತಿಕೊಂಡಿದ್ದಾರೆ. ಈ ಪೋಸ್ಟರ್​ಗೆ ಅಕ್ಷಯ್​ ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದ್ದರು.

rugged avatar
ರಗಡ್​ ಲುಕ್

ಮುಂಬೈ: ಬಚ್ಚನ್​ಪಾಂಡೆ ಸಿನಿಮಾದಲ್ಲಿ ಬಾಲಿವುಡ್​ ನಟ ಅಕ್ಷಯ್​ಕುಮಾರ್ ಅವ​ರನ್ನು ರೌದ್ರವಾಗಿ ತೋರಿಸಿದ್ದಕ್ಕೆ ವಿರೋಧ ವ್ಯಕ್ತವಾದ ಬೆನ್ನಲ್ಲೇ ಸಿನಿಮಾದ ಟ್ರೇಲರ್​ ಬಿಡುಗಡೆಗೂ ಮುನ್ನ ಪೋಸ್ಟರ್​ ಅನ್ನು ಕೈಬಿಡಲಾಗಿದೆ.

ಪೋಸ್ಟರ್​ನಲ್ಲಿ ಅಕ್ಷಯ್​ಕುಮಾರ್​ ಮಾಸ್​ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ. ನೀಲಿ ಕಣ್ಣು, ರೌದ್ರ ಮುಖ, ಕೈಯಲ್ಲಿ ಬಂದೂಕು ಮತ್ತು ತಲೆಗೆ ರುಮಾಲು ಸುತ್ತಿಕೊಂಡಿದ್ದಾರೆ. ಈ ಪೋಸ್ಟರ್​ಗೆ ಅಕ್ಷಯ್​ ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದ್ದರು. ಇದರಿಂದ ತಕ್ಷಣವೇ ಎಚ್ಚೆತ್ತ ಸಿನಿಮಾ ನಿರ್ದೇಶಕರು, ನಿರ್ಮಾಪಕರು ಈ ಪೋಸ್ಟರ್​ ಅನ್ನು ಕೈಬಿಟ್ಟಿದ್ದಾರೆ.

ಇದಲ್ಲದೇ, ಅಕ್ಷಯ್​ಕುಮಾರ್​ ಕೂಡ ತಮ್ಮ ಬಚ್ಚನ್​ಪಾಂಡೆ ಸಿನಿಮಾದ ಮಾಹಿತಿಯನ್ನು ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದು, 'ಇದು ಎಲ್ಲ ಪಾತ್ರಗಳಿಗಿಂತ ವಿಶೇಷವಾಗಿದೆ. ಬಚ್ಚನ್​ಪಾಂಡೆ ನಿಮ್ಮನ್ನು ನಗಿಸಲು, ಅಳಿಸಲು, ಹೆದರಿಸಲು ಬರುತ್ತಿದ್ದಾನೆ. ಇದೇ 18 ರಂದು ಟ್ರೈಲರ್​ ಬಿಡುಗಡೆಯಾಗಲಿದೆ. ಹರಸಿ ಹಾರೈಸಿ' ಎಂದು ಬರೆದುಕೊಂಡಿದ್ದಾರೆ.

ಬಚ್ಚನ್​ಪಾಂಡೆ ಸಿನಿಮಾದಲ್ಲಿ ಕೃತಿ ಸನೋನ್, ಜಾಕ್ವೆಲಿನ್ ಫರ್ನಾಂಡೀಸ್, ಅರ್ಷದ್ ವಾರ್ಸಿ, ಪಂಕಜ್ ತ್ರಿಪಾಠಿ, ಪ್ರತೀಕ್ ಬಬ್ಬರ್ ಮತ್ತು ಅಭಿಮನ್ಯು ಸಿಂಗ್ ನಟಿಸಿದ್ದಾರೆ.

ಓದಿ: ನಾನು ಭಾರತದ ದೊಡ್ಡ ಅಭಿಮಾನಿ, ತಾಜ್‌ಮಹಲ್ ನೋಡಲು ಬಯಸುತ್ತೇನೆ : ಟಾಮ್ ಹಾಲೆಂಡ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.