ETV Bharat / sitara

ಅಮ್ಮನಾದ ಖುಷಿ ಹಂಚಿಕೊಂಡ ಬಾಲಿವುಡ್ ಗಾಯಕಿ ನೇಹಾ ಕಕ್ಕರ್...! - Neha kakkar expecting first child

ಬಾಲಿವುಡ್​​ ಗಾಯಕಿ ನೇಹಾ ಕಕ್ಕರ್ ಹಾಗೂ ಗಾಯಕ ರೋಹನ್​​​​​ಪ್ರೀತ್ ಸಿಂಗ್ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಬೇಬಿ ಬಂಪ್ ಫೋಟೋವನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಈ ಜೋಡಿ ಇದೇ ವರ್ಷ ಅಕ್ಟೋಬರ್ 24 ರಂದು ದಾಂಪತ್ಯ ಜೀವನಕ್ಕೆ ಕಾಲಿರಿಸಿತ್ತು.

Neha kakkar
ನೇಹಾ ಕಕ್ಕರ್
author img

By

Published : Dec 18, 2020, 2:29 PM IST

ಇದೇ ವರ್ಷ ಅಕ್ಟೋಬರ್​​​​ 24 ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಾಲಿವುಡ್ ಗಾಯಕಿ ನೇಹಾ ಕಕ್ಕರ್ ಅಮ್ಮನಾದ ಖಷಿಯಲ್ಲಿದ್ದಾರೆ. ಬೇಬಿ ಬಂಪ್ ಫೋಟೋವನ್ನು ನೇಹಾ ಹಾಗೂ ಪತಿ ರೋಹನ್ ಪ್ರೀತ್ ಸಿಂಗ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು ಅಭಿಮಾನಿಗಳು ಹಾಗೂ ಬಾಲಿವುಡ್​ ಗಣ್ಯರು ಈ ದಂಪತಿಗೆ ಶುಭ ಕೋರಿದ್ದಾರೆ.

ನೇಹಾ ಕಕ್ಕರ್ ಬಾಲಿವುಡ್​​ನಲ್ಲಿ ಹಿನ್ನೆಲೆ ಗಾಯಕಿಯಾಗಿ ಗುರುತಿಸಿಕೊಂಡಿದ್ದಾರೆ. 'ಕೆಜಿಎಫ್​​​​ 1' ಹಿಂದಿ ವರ್ಷನ್​​​​​ನಲ್ಲಿ 'ಗಲಿ ಗಲಿ ಮೇ...'ಹಾಡನ್ನು ನೇಹಾ ಹಾಡಿದ್ದಾರೆ. ರೋಹನ್ ಅವರನ್ನು ಮದುವೆಯಾಗುವ ಮುನ್ನ ನೇಹಾ ಕಕ್ಕರ್ ಹಿಮಾಂಶ್ ಕೊಹ್ಲಿ ಅವರೊಂದಿಗೆ ರಿಲೇಶನ್​ಶಿಪ್​​​ನಲ್ಲಿದ್ದರು. ನಂತರ ರೋಹನ್ ಅವರೊಂದಿಗೆ ಡೇಟಿಂಗ್ ಆರಂಭಿಸಿದ ನೇಹಾ ಮದುವೆಯಾಗುವ ಕೆಲವು ದಿನಗಳ ಹಿಂದಷ್ಟೇ ತಮ್ಮ ಸಂಬಂಧದ ಬಗ್ಗೆ ರಿವೀಲ್ ಮಾಡಿ ಇಬ್ಬರೂ ಮದುವೆಯಾಗುತ್ತಿರುವುದಾಗಿ ಹೇಳಿಕೊಂಡಿದ್ದರು. ಅಕ್ಟೋಬರ್​​ 24 ರಂದು ಈ ಜೋಡಿ ದೆಹಲಿಯಲ್ಲಿ ಮದುವೆಯಾಗಿ ಹನಿಮೂನ್​​ಗೆ ದುಬೈಗೆ ತೆರಳಿತ್ತು. ಇದೀಗ ಮದುವೆಯಾಗಿ 2 ತಿಂಗಳ ನಂತರ ಈ ಜೋಡಿ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದೆ.

ಇದನ್ನೂ ಓದಿ: ತೆರೆ ಮೇಲೆ ವಿಶ್ವನಾಥನ್ ಆನಂದ್ ಜೀವನ ಚರಿತ್ರೆ​​​​...ನಿರ್ದೇಶಕ ಯಾರು ಗೊತ್ತಾ..?

ಬೇಬಿ ಬಂಪ್ ಫೋಟೋವನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ನೇಹಾ, "ಕಾಳಜಿಯೊಂದಿಗೆ" ಎಂದು ಕ್ಯಾಪ್ಷನ್ ನೀಡಿದ್ದಾರೆ. "ಈಗ ಇನ್ನಷ್ಟು ಕಾಳಜಿ ವಹಿಸಬೇಕು ನೇಹೂ" ಎಂದು ರೋಹನ್ ನೇಹಾ ಪೋಸ್ಟ್​​​​​​​​​​​​​​​​​​​​​ಗೆ ಕಮೆಂಟ್ ಮಾಡಿದ್ದಾರೆ. ನೇಹಾ ಸಹೋದರ ಟೋನಿ ಕಕ್ಕರ್ ಕಮೆಂಟ್ ಮಾಡಿ "ನಾನು ಮಾಮ ಆಗುತ್ತಿದ್ದೇನೆ" ಎಂದು ಸಂತೋಷ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.