ಮುಂಬೈ: ಗರ್ಮಿ, ಆಂಖ್ ಮೇರಿ, ಒ ಸಾಕಿ, ದಿಲ್ಬಾರ್ ಮತ್ತು ಕಲಾ ಚಾಷ್ಮಾ ಸೇರಿದಂತೆ ಹಲವು ಹಿಟ್‌ಗಳನ್ನು ನೀಡಿರುವ ನೇಹಾ ಕಕ್ಕರ್ ಬಾಲಿವುಡ್‌ನಲ್ಲಿ ಜನಪ್ರಿಯತೆ ಗಳಿಸಿದ್ದಾರೆ. ಆದರೂ, ಸಿಂಗರ್ಸ್ ಸಿನಿಮಾ ರಂಗದಿಂದ ಸಂಬಳ ಪಡೆಯುವುದಯ ಬಹಳ ಕಡಿಮೆ ಎಂದು ನೇಹಾ ಹೇಳಿದ್ದಾರೆ.
"ಬಾಲಿವುಡ್‌ನಲ್ಲಿ ಹಾಡಲು ನಾವು ಯಾವುದೇ ರೀತಿಯ ಹಣ ಪಡೆಯುವುದಿಲ್ಲ. ನಾವು ಸೂಪರ್ಹಿಟ್ ಹಾಡನ್ನು ನೀಡಿದರೆ, ಸಿಂಗಿಂಗ್ ಶೋಗಳ ಮೂಲಕ ಹಣ ಗಳಿಸುತ್ತೇವೆ ಎಂದು ಭಾವಿಸಲಾಗುತ್ತದೆ" ಎಂದು ನೇಹಾ ತಿಳಿಸಿದ್ದಾರೆ
"ನಾನು ಸಂಗೀತ ಕಚೇರಿಗಳಿಂದ ಉತ್ತಮ ಸಂಭಾವನೆ ಪಡೆಯುತ್ತೇನೆ, ಆದರೆ ಬಾಲಿವುಡ್‌ನಲ್ಲಿ ಹಾಡಲು ಅವರು ಪಾವತಿಸುವುದಿಲ್ಲ" ಎಂದು ನೇಹಾ ಹೇಳಿದ್ದಾರೆ.
ನೇಹಾ ಪಂಜಾಬಿ ಮತ್ತು ರಷ್ಯನ್ ಭಾಷೆಯ 'ಮಾಸ್ಕೋ ಸುಕಾ' ಎಂಬ ಹಾಡಿನಲ್ಲಿ ರ್ಯಾಪರ್ ಯೋ ಯೋ ಹನಿ ಸಿಂಗ್ ಅವರೊಂದಿಗೆ ಕಾಣಿಸಿಕೊಳ್ಳಲಿದ್ದಾರೆ.