ETV Bharat / sitara

2ನೇ ಮಗುವಿನ ನಿರೀಕ್ಷೆಯಲ್ಲಿದೆ ನೇಹಾ ಧೂಪಿಯಾ - ಅಂಗದ್ ಬೇಡಿ ದಂಪತಿ - ನೇಹಾ ಧೂಪಿಯಾ ಸಿನಿಮಾ

ಬಾಲಿವುಡ್ ನಟಿ ನೇಹಾ ಧೂಪಿಯಾ - ಅಂಗದ್ ಬೇಡಿ ದಂಪತಿ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದು, ಕುಟುಂಬ ಸಮೇತರಾಗಿರುವ ಫೋಟೋದಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

Neha Dhupia, Angad Bedi
ನೇಹಾ ಧೂಪಿಯಾ-ಅಂಗದ್ ಬೇಡಿ
author img

By

Published : Jul 20, 2021, 9:08 AM IST

ನವದೆಹಲಿ: ಬಾಲಿವುಡ್ ನಟಿ ನೇಹಾ ಧೂಪಿಯಾ - ಅಂಗದ್ ಬೇಡಿ ದಂಪತಿ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ತಾನು ಗರ್ಭಿಣಿಯಾಗಿರುವ ವಿಷಯವನ್ನು ನೇಹಾ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಕುಟುಂಬ ಸಮೇತರಾಗಿರುವ ಫೋಟೋದಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ ನೇಹಾ.

ಇನ್ನು ತಮ್ಮ ಗರ್ಭಧಾರಣೆಯ ಆರಂಭಿಕ ದಿನಗಳಲ್ಲಿ ತಾನು ಅನುಭವಿಸಿದ ಕಷ್ಟಗಳ ಬಗ್ಗೆ ನೇಹಾ ಮಾತನಾಡಿದ್ದಾರೆ. ಪತಿ ಅಂಗದ್ ಬೇಡಿ ಗರ್ಭಧಾರಣೆಯ ಆರಂಭಿಕ ತಿಂಗಳಲ್ಲಿ ಕೊರೊನಾಗೆ ತುತ್ತಾದರು. ಈ ಸಂದರ್ಭದಲ್ಲಿ ಸಂಕಷ್ಟ ಅನುಭವಿಸಿದೆ ಎಂದು ಮನದಾಳದ ಮಾತನ್ನು ಹಂಚಿಕೊಂಡಿದ್ದಾರೆ.

ಎರಡನೇ ಮಗುವಿನ ನಿರೀಕ್ಷೆಯಲ್ಲಿರುವ ಅವರು, ತನ್ನ ಈ ಅವಧಿಯ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. "ಎರಡನೇ ಗರ್ಭಧಾರಣೆಯ ಅನುಭವವು ವಿಭಿನ್ನವಾಗಿದೆ. ನನ್ನ ಮನಸ್ಸಿನಲ್ಲಿ ಕಂದನ ಬಡಿತಗಳು ತಿಳಿಯುತ್ತಿದೆ. ಮನಸ್ಸು ಮತ್ತು ದೇಹವು ಪ್ರತಿಕ್ರಿಯಿಸುತ್ತದೆ” ಎಂದರು.

ನೇಹಾ ಧೂಪಿಯಾ ಅವರು ಮೇ 2018ರಲ್ಲಿ ಅಂಗದ್ ಬೇಡಿಯನ್ನು ವಿವಾಹವಾದರು. ಈ ಜೋಡಿಗೆ ಮೆಹರ್ ಧುಪಿಯಾ ಬೇಡಿ ಎಂಬ ಮಗಳಿದ್ದಾಳೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.