ಹೈದರಾಬಾದ್(ತೆಲಂಗಾಣ): ಹಿಂದಿಯ ಬಿಗ್ ಬಾಸ್ ಸೀಸನ್ 15ರ ಸ್ಪರ್ಧಿ ಹಾಗೂ ಬಾಲಿವುಡ್ ಖ್ಯಾತ ನಟಿ ಶಿಲ್ಪಾ ಶೆಟ್ಟಿ ಸಹೋದರಿ ಶಮಿತಾ ಶೆಟ್ಟಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಬಿಗ್ ಬಾಸ್ ಸೀಸನ್ 15ರಲ್ಲಿ ತಮ್ಮ ಆಟದಿಂದಾಗಿ ಹೆಚ್ಚಿನ ಅಭಿಮಾನಿ ಬಳಗ ಹೊಂದಿರೋ ಶಮಿತಾ ಶೆಟ್ಟಿ ಫೈನಲ್ವರೆಗೂ ತಲುಪಿದ್ದರು.
ಲವ್ ಬರ್ಡ್ಸ್ ಎಂದು ಕರೆಯಿಸಿಕೊಂಡಿರುವ ಶಮಿತಾ ಶೆಟ್ಟಿ ಮತ್ತು ರಾಕೇಶ್ ಬಾಪಟ್ ಈಗ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಶಮಿತಾ ಶೆಟ್ಟಿ ಬರ್ತ್ಡೇ ಸೆಲೆಬ್ರೇಶನ್ ನೆಪದಲ್ಲಿ ಇಬ್ಬರೂ ನಿನ್ನೆ ಸಂಜೆ ಒಟ್ಟಿಗೆ ಸಮಯ ಕಳೆದಿದ್ದಾರೆ.
ಆದ್ರೆ, ಬಿಗ್ ಬಾಸ್ 15ರ ಸಹ ಸ್ಪರ್ಧಿ ಮತ್ತು ಗಾಯಕಿ ನೇಹಾ ಭಾಸಿನ್ ಈ ಜೋಡಿಯ ಸಮಯವನ್ನು ಕದ್ದಿದ್ದಾರೆ. ಶಮಿತಾ ಶೆಟ್ಟಿ ಜೊತೆಗಿನ ನೇಹಾ ಭಾಸಿನ್ ಅವ್ರ ಫನ್ನಿ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ಈ ಫನ್ನಿ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿರುವ ನೇಹಾ ಭಾಸಿನ್, ಹುಟ್ಟು ಹಬ್ಬದ ಶುಭಾಶಯಗಳು @shamitashetty_official, ನಿನ್ನನ್ನು ಯಾವಾಗಲು ಇಷ್ಟ ಪಡುತ್ತೇನೆ.
ಹಾಗೆಯೇ, ರಾಕೇಶ್ ಬಾಪಟ್ ಜೊತೆಗಿನ ನಿನ್ನ ಡೇಟಿಂಗ್ ಸಮಯವನ್ನು ಹಾಳು ಮಾಡುತ್ತೇನೆ ಎಂದು ಫನ್ನಿ ಬರಹಗಳನ್ನು ಬರೆಯುವ ಮೂಲಕ ಹುಟ್ಟುಹಬ್ಬಕ್ಕೆ ಶುಭಕೋರಿದ್ದಾರೆ. ಈ ವಿಡಿಯೋದಲ್ಲಿ ಶಮಿತಾ ಶೆಟ್ಟಿ ಮತ್ತು ನೇಹಾ ಭಾಸಿನ್ ಬಹಳಾನೇ ಖುಷಿಯಾಗಿರುವುದನ್ನು ಮತ್ತು ನಗುವುದನ್ನು ಕಾಣಬಹುದು.
ಇದನ್ನೂ ಓದಿ: 'ಟಿಕು ವೆಡ್ಸ್ ಶೇರು'ಚಿತ್ರದ ಫೋಟೋಗಳನ್ನು ಹಂಚಿಕೊಂಡ ಬಾಲಿವುಡ್ ಕ್ವೀನ್ ಕಂಗನಾ
ಲವ್ ಬರ್ಡ್ಸ್ ಶಮಿತಾ ಶೆಟ್ಟಿ ಮತ್ತು ರಾಕೇಶ್ ಬಾಪಟ್ ಬಿಗ್ ಬಾಸ್ ಸೀಸನ್ 15ರ ಗ್ರ್ಯಾಂಡ್ ಫಿನಾಲೆ ಸಂಚಿಕೆಯಲ್ಲಿ 'ಪುಷ್ಪ' ಸಿನಿಮಾದ ಸಾಮಿ ಸಾಮಿ ಹಾಡಿಗೆ ಮಸ್ತ್ ಡ್ಯಾನ್ಸ್ ಮಾಡಿದ್ದರು. ಬಿಗ್ ಬಾಸ್ ಸೀಸನ್ 15ರಲ್ಲಿ ಜೋಡಿಯಾಗಿ ಕಾಣಿಸಿಕೊಂಡು ಮನೋರಂಜನೆ ನೀಡಿದ್ದರು.
ಇವರಿಬ್ಬರು ಶೀಘ್ರದಲ್ಲೇ ನಿಶ್ಚಿತಾರ್ಥ ಮಾಡಿಕೊಂಡು ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಲಿದ್ದಾರೆ ಎಂಬ ಮಾತುಗಳು ಸಹ ಕೇಳಿ ಬಂದಿವೆ. ಇನ್ನು ಶಮಿತಾ ಶೆಟ್ಟಿ ಫಿನಾಲೆವರೆಗೂ ತಲುಪಿ 4ನೇ ಸ್ಥಾನ ಗಳಿಸಿದ್ದಾರೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ