ಸಿನಿಮಾ ನಟಿಯರೆಂದರೆ ಯಾವ ದೇವಲೋಕದ ಸುಂದರಿಯರಿಗೂ ಕಡಿಮೆ ಇಲ್ಲ ಎನ್ನುವಂತೆ ತಮ್ಮ ಸೌಂದರ್ಯವನ್ನು ಕಾಪಾಡಿಕೊಂಡಿರುತ್ತಾರೆ. ಮದುವೆಯಾಗಿ ಮಕ್ಕಳಿರುವ ನಟಿಯರು ಕೂಡಾ ಇನ್ನೂ ತಮಗೆ ಮದುವೆ ಆಗಿಲ್ಲವೇನೋ ಎಂಬಂತೆ ಕಾಣಲು ಭಾರೀ ವರ್ಕೌಟ್ ಮಾಡಿ ತಮ್ಮ ಅಂದ ದುಪ್ಟಟಾಗುವಂತೆ ಮಾಡಿಕೊಳ್ಳುವತ್ತ ಗಮನ ನೀಡುತ್ತಾರೆ.
ಇನ್ನು ಸೆಲಬ್ರಿಟಿ ಮಾತ್ರವಲ್ಲ ಯಾವ ಮಹಿಳೆ ಕೂಡಾ ತನ್ನ ನಿಜ ವಯಸ್ಸನ್ನು ಹೇಳಿಕೊಳ್ಳಲು ಇಷ್ಟಪಡುತ್ತಾಳೆ ಹೇಳಿ..? ಒಂದು ವೇಳೆ ಯಾರಾದರೂ ನಿಜವಾದ ವಯಸ್ಸಿಗಿಂತ ಕಡಿಮೆ ವಯಸ್ಸು ಹೇಳಿದರೆ ಮಾತ್ರ ಮುಗಿಯಿತು. ಆಗ ಆಕೆಗೆ ಆಗುವ ಸಂತೋಷ ಅಷ್ಟಿಷ್ಟಲ್ಲ. ಇನ್ನು ಬಾಲಿವುಡ್ ಖ್ಯಾತ ಹಿರಿಯ ನಟಿ ನೀನಾ ಗುಪ್ತಾ, ಗೂಗಲ್ನಲ್ಲಿ ತಮ್ಮ ವಯಸ್ಸನ್ನು ಕಡಿಮೆ ಮಾಡುವಂತೆ ಕೇಳಿಕೊಂಡಿದ್ದಾರೆ. ಹೌದಾ ಎಂದು ಆಶ್ಚರ್ಯ ಪಡಬೇಡಿ. ನೀನಾಗೆ ಈಗ 60 ವರ್ಷ ವಯಸ್ಸು. ಇತ್ತೀಚೆಗೆ ಆಕೆ ಹೊಸ ಹೇರ್ ಸ್ಟೈಲ್ ಮಾಡಿಸಿದ್ದು ಆ ಲುಕ್ನಲ್ಲಿ ನಿಜಕ್ಕೂ ವಯಸ್ಸು ಕಡಿಮೆ ಆದವರಂತೆ ಕಾಣುತ್ತಿದ್ದಾರೆ. ತಮ್ಮ ಪೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿರುವ ನೀನಾ ಗುಪ್ತಾ, 'ಗೂಗಲ್ನವರೇ ಈಗಲಾದರೂ ನನ್ನ ವಯಸ್ಸನ್ನು ತಿದ್ದಿ ಕಡಿಮೆ ಬರೆಯಿರಿ' ಎಂದು ಕ್ಯಾಪ್ಷನ್ ಹಾಕಿದ್ದಾರೆ. ಆದರೆ ಹೀಗೆ ಅವರು ಬರೆದುಕೊಂಡಿರುವುದು ತಮಾಷೆಗಾಗಿ ಮಾತ್ರ. ಹಾಗೇ ತನಗೆ ಹೇರ್ಸ್ಟೈಲ್ ಮಾಡಿದ ಹೇರ್ ಸ್ಟೈಲಿಸ್ಟ್ಗೆ ಕೂಡಾ ಧನ್ಯವಾದ ತಿಳಿಸಿದ್ದಾರೆ.
- View this post on Instagram
Google walo ab toh meri umar kam karke likh do ! 😄 Thank you @kantamotwani for the haircut ♥️
">