ETV Bharat / sitara

ಜೈಲಲ್ಲಿ ಪುತ್ರನ ಭೇಟಿ ಮುಗಿಸಿ ಬರ್ತಿದ್ದಂತೆ ಶಾರುಖ್‌ಗೆ ಎನ್‌ಸಿಬಿ ಬಿಸಿ; ವಿಚಾರಣೆಗೆ ಬರುವಂತೆ ಅನನ್ಯಾ ಪಾಂಡೆಗೂ ಸಮನ್ಸ್‌ - ಆರ್ಯಖಾನ್ ಪ್ರಕರಣ 2021

ಬಾಲಿವುಡ್ ನಟ ಶಾರುಖ್ ಖಾನ್ ಮತ್ತು ನಟಿ ಅನನ್ಯಾ ಪಾಂಡೆ ಅವರ ಮುಂಬೈ ನಿವಾಸಗಳ ಮೇಲೆ ರಾಷ್ಟ್ರೀಯ ಮಾದಕ ವಸ್ತು ನಿಯಂತ್ರಣ ದಳ (ಎನ್​ಸಿಬಿ) ಅಧಿಕಾರಿಗಳು ಇಂದು ದಾಳಿ ನಡೆಸಿದ್ದಾರೆ.

NCB attack on Shah Rukh Khan's residence

author img

By

Published : Oct 21, 2021, 1:25 PM IST

Updated : Oct 21, 2021, 2:00 PM IST

ಮುಂಬೈ (ಮಹಾರಾಷ್ಟ್ರ): ಬಾಲಿವುಡ್​ ನಟ ಶಾರುಖ್​ ಖಾನ್ ತಮ್ಮ ಪುತ್ರ ಆರ್ಯನ್‌ ಖಾನ್‌ ಅವರನ್ನು ಆರ್ಥರ್‌ ರೋಡ್‌ ಜೈಲಲ್ಲಿ ಭೇಟಿ ಮಾಡಿ ಬರುತ್ತಿದ್ದಂತೆ ಅವರ​ ನಿವಾಸದ ಮೇಲೆ ಎನ್​ಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇನ್ನೊಂದೆಡೆ, ನಟಿ ಅನನ್ಯಾ ಪಾಂಡೆ ಮನೆಯ ಮೇಲೂ ಅಧಿಕಾರಿಗಳು ದಾಳಿ ನಡೆಸಿದ್ದು, ವಿಚಾರಣೆಗೆ ಹಾಜರಾಗುವಂತೆ ಸಮನ್ಸ್‌ ನೀಡಿದ್ದಾರೆ.

  • Mumbai | A team of Narcotics Control Bureau arrives at the residence of actor Ananya Pandey. A team of NCB is also present at Shah Rukh Khan's residence

    Visuals from Ananya Pandey's residence pic.twitter.com/U5ssrIxpph

    — ANI (@ANI) October 21, 2021 " class="align-text-top noRightClick twitterSection" data=" ">

ಶಾರುಖ್‌ ನಿವಾಸ ಮನ್ನತ್‌ನಲ್ಲಿ ಎನ್​ಸಿಬಿ ಅಧಿಕಾರಿಗಳು ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ನಟಿ ಅನನ್ಯಾ ಪಾಂಡೆ ಅವರು ಆರ್ಯಖಾನ್​ ಜೊತೆ ವಾಟ್ಸಪ್​ ಚಾಟ್​ ಮಾಡಿದ್ದಾರೆ ಎಂದು ಹೇಳಲಾಗುತ್ತಿದ್ದು ಅಧಿಕಾರಿಗಳು ಈ ಬಗ್ಗೆ ಶೋಧ ಕಾರ್ಯ ನಡೆಸಿದ್ದಾರೆ.

ಇಂದು ಬೆಳಗ್ಗೆ ಅರ್ಥರ್​ ರೋಡ್​ನಲ್ಲಿರುವ ಜೈಲಿಗೆ ಆಗಮಿಸಿದ್ದ ಶಾರುಖ್​ ಖಾನ್​ ಮಗನನ್ನು ಭೇಟಿ ಮಾಡಿದ್ದರು. ಪುತ್ರನ ಭೇಟಿ ಮುಗಿಸಿ ಮನೆಗೆ ಬರುತ್ತಿದ್ದಂತೆ ಎನ್‌ಸಿಬಿ ಅಧಿಕಾರಿಗಳು ಶಾರುಖ್‌ ಖಾನ್​ಗೆ ಶಾಕ್​ ನೀಡಿದ್ದಾರೆ.

  • Mumbai | A team of Narcotics Control Bureau (NCB) is currently present at actor Shah Rukh Khan's residence 'Mannat'

    Earlier today, Shah Rukh Khan met son Aryan at Arthur Road Jail

    Bombay High Court to hear Aryan Khan's bail application on 26th October pic.twitter.com/SyzoWVi9UL

ಕ್ರೂಸ್​​ನಲ್ಲಿ ಡ್ರಗ್ಸ್​ ಪಾರ್ಟಿ ಮಾಡಿರುವ ಹಿನ್ನೆಲೆ ಅ.3 ರಂದು ಆರ್ಯನ್‌ ಖಾನ್​ನನ್ನು ಎನ್​ಸಿಬಿ ಬಂಧಿಸಿತ್ತು. ಇದೀಗ ಅರ್ಥರ್​ ರೋಡ್​ ಜೈಲಿನಲ್ಲಿರುವ ಆರ್ಯನ್‌ ಖಾನ್ ಬುಧವಾರ ಜಾಮೀನಿಗಾಗಿ ಅರ್ಜಿ ಸಲ್ಲಿದ್ದರು. ಎನ್​ಡಿಪಿಎಸ್​ ವಿಶೇಷ ಕೋರ್ಟ್ ಅವರ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ.

ಪರಿಶೀಲನೆಯಲ್ಲಿ ತೊಡಗಿರುವ ಎನ್‌ಸಿಬಿ ಅಧಿಕಾರಿಗಳು

Last Updated : Oct 21, 2021, 2:00 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.