ETV Bharat / sitara

ನವಾಜುದ್ದೀನ್ ಸಿದ್ದಿಕಿ ಮನೆಯವರಿಂದ ಮಾನಸಿಕ, ದೈಹಿಕ ಹಿಂಸೆ: ಆಲಿಯಾ ಸಿದ್ದಿಕಿ ಆರೋಪ - ನವಾಜುದ್ದೀನ್ ಸಿದ್ದಿಕಿ ಮನೆಯವರು ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿದ್ದಾರೆ

ನಟ ನವಾಜುದ್ದೀನ್ ಸಿದ್ದಿಕಿಗೆ ವಿಚ್ಛೇದನ ಕೋರಿ ಲೀಗಲ್ ನೊಟೀಸ್ ಕಳುಹಿಸಿರುವ ಪತ್ನಿ ಆಲಿಯಾ ಸಿದ್ದಿಕಿ, ತನ್ನ ಪತಿಯ ಮನೆಯವರು ಮಾನಸಿಕವಾಗಿ ಮತ್ತು ದೈಹಿಕವಾಗಿ ಹಿಂಸಿಸಿದ್ದಾರೆ ಎಂದು ಆರೋಪಿಸಿದ್ದಾರೆ.

siddiqui
siddiqui
author img

By

Published : May 20, 2020, 12:00 PM IST

ಮುಂಬೈ: ವಿಚ್ಛೇದನ ಕೋರಿ ನಟ ನವಾಜುದ್ದೀನ್ ಸಿದ್ದಿಕಿಗೆ ಲೀಗಲ್ ನೊಟೀಸ್ ಕಳುಹಿಸಿರುವ ಪತ್ನಿ ಆಲಿಯಾ ಸಿದ್ದಿಕಿ, ನಟನ ಮನೆಯವರು ಮಾನಸಿಕವಾಗಿ ಮತ್ತು ದೈಹಿಕವಾಗಿ ಹಿಂಸಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ತನ್ನ ವೈವಾಹಿಕ ಸಮಸ್ಯೆಗಳ ಕುರಿತು ಇತ್ತೀಚೆಗೆ ಹೇಳಿಕೊಂಡಿದ್ದ ಆಲಿಯಾ ಸಿದ್ಧಿಕಿ, ನಾನು ಮದುವೆಯಾದ ಸಮಯದಿಂದಲೇ ಸಮಸ್ಯೆಗಳು ಪ್ರಾರಂಭವಾಗಿದ್ದವು. ಆದರೆ ನಾನು ಅವುಗಳನ್ನು ಪರಿಹರಿಸಲು ಪ್ರಯತ್ನಿಸುತ್ತಿದ್ದೆ. ಇದೀಗ ಬೇರೆ ದಾರಿಲ್ಲದೇ ವಿಚ್ಛೇದನದ ನಿರ್ಧಾರಕ್ಕೆ ಬಂದಿದ್ದೇನೆ ಎಂದರು.

ನನ್ನ ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ. ನನ್ನ ಧರ್ಮ ಬದಲಾಯಿಸಲು ಹೇಳಿದಾಗ ನಾನು ಅದನ್ನು ಒಪ್ಪಿ ಅವರು ಹೇಳಿದಂತೆ ಮಾಡಿದ್ದೆ, ಆದರೆ ಕ್ರಮೇಣವಾಗಿ ನಾನು ಒಂಟಿಯಾದೆ. ನಾನೊಬ್ಬಳೇ ಮಕ್ಕಳನ್ನು ನೋಡಿಕೊಳ್ಳಬೇಕಾದ ಪರಿಸ್ಥತಿ ಎದುರಾಯಿತು. ಹೀಗಾಗಿ ನಾನು ನಾವಾಜುದ್ದೀನ್​ನಿಂದ ದೂರವಾಗಲು ಬಯಸುತ್ತೇನ ಎಂದು ಆಲಿಯಾ ಸಿದ್ದಿಕಿ ಹೇಳಿದರು.

ನವಾಜ್ ನನಗೆ ಹೊಡೆದಿಲ್ಲ, ಆದರೆ ನಮ್ಮ ನಡುವೆ ಮಾತಿನ ಜಗಳ ಯಾವತ್ತೂ ನಡೆಯುತ್ತಿತ್ತು. ಅವರ ಕುಟುಂಬದವರು ನನಗೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಹಿಂಸೆ ನಿಡಿದ್ದಾರೆ. ಅವರ ಸಹೋದರ ಕೂಡಾ ನನಗೆ ಹೊಡೆದಿದ್ದಾರೆ. ಅವರ ತಾಯಿ, ಸಹೋದರರು ಮತ್ತು ಅತ್ತಿಗೆಯಂದಿರು ನಮ್ಮೊಂದಿಗೆ ಮುಂಬೈನಲ್ಲಿ ಹಲವಾರು ವರ್ಷಗಳಿಂದ ಇದ್ದರು. ಆದರೂ ನಾನು ಸಹಕರಿಸುತ್ತಿದ್ದೆ ಎಂದು ಆಲಿಯಾ ಹೇಳಿದರು.

ತಂದೆಯನ್ನು ಕೊನೆಯ ಬಾರಿ ಯಾವಾಗ ಭೇಟಿಯಾಗಿದ್ದೇವೆ ಎಂದು ಮಕ್ಕಳಿಗೆ ನೆನಪಿಲ್ಲ. ಕಳೆದ 3-4 ತಿಂಗಳಿನಿಂದ ನವಾಜ್ ಮಕ್ಕಳನ್ನು ಭೇಟಿಯಾಗಲೇ ಇಲ್ಲ. ಹೀಗಾಗಿ ಮಕ್ಕಳ ಕಸ್ಟಡಿ ಕೂಡಾ ನನಗೆ ಸಿಗಬೇಕು ಎಂದು ಆಲಿಯಾ ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.