ಕಳೆದ ಗುರುವಾರ ಬಾಲಿವುಡ್ ನಟ ರಿಷಿ ಕಪೂರ್ ನಮ್ಮೆಲ್ಲರನ್ನೂ ಅಗಲಿದ ದಿನ. ಕ್ಯಾನ್ಸರ್ನಿಂದ ಬಳಲುತ್ತಿದ್ದ ರಿಷಿ ಕಪೂರ್ ಆರೋಗ್ಯದಲ್ಲಿ ವ್ಯತ್ಯಾಸವಾಗಿದ್ದರಿಂದ ಮುಂಬೈನ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದರು.
- " class="align-text-top noRightClick twitterSection" data="
">
ರಿಷಿ ಕಪೂರ್ ನಿಧನದ ನಂತರ ಬಾಲಿವುಡ್ ಗಣ್ಯರೆಲ್ಲಾ ಅವರಿಗೆ ಶ್ರದ್ಧಾಂಜಲಿ ಅರ್ಪಿಸಿದ್ದರು. ಇದೀಗ ನಟಿ ರವೀನಾ ಟಂಡನ್ ರಿಷಿ ಕಪೂರ್ ಅವರ ಹಿಂದಿನ ವಿಡಿಯೋವೊಂದನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ರಿಷಿ ಕಪೂರ್ ಅವರು ರವೀನಾ ಟಂಡನ್ ತಂದೆ ರವಿ ಟಂಡನ್ ಅವರ ಹುಟ್ಟುಹಬ್ಬಕ್ಕೆ ವಿಶ್ ಮಾಡಿ ಸೆಲ್ಫಿ ವಿಡಿಯೋವೊಂದನ್ನು ರೆಕಾರ್ಡ್ ಮಾಡಿ ಕಳಿಸಿದ್ದ ವಿಡಿಯೋವನ್ನು ರವಿನಾ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ.
ಈ ವಿಡಿಯೋದೊಂದಿಗೆ 'ಪ್ರೀತಿಯ ಚಿಂಟು ಅಂಕಲ್, ನಿಮ್ಮನ್ನು ಪ್ರತಿದಿನವೂ ಮಿಸ್ ಮಾಡಿಕೊಳ್ಳುತ್ತಿದ್ದೇವೆ... ನ್ಯೂಯಾರ್ಕಿಗೆ ಕ್ಯಾನ್ಸರ್ ಟ್ರೀಟ್ಮೆಂಟ್ಗೆ ಹೋಗುವ ಹಿಂದಿನ ದಿನ ಅಪ್ಪನ ಬರ್ತಡೇ ಇತ್ತು. ಆ ದಿನ ಅಪ್ಪನಿಗಾಗಿ ಈ ವಿಡಿಯೋ ರೆಕಾರ್ಡ್ ಮಾಡಿ ಕಳಿಸಿ ನಮಗೆ ಸರ್ಪೈಸ್ ನೀಡಿದ್ದರು....ನೀವು ನಮ್ಮ ಮನೆ ಹಾಗೂ ಮನದಲ್ಲಿ ಸದಾ ಇರುತ್ತೀರಿ ಚಿಂಟು ಅಂಕಲ್, ವಿ ಲವ್ ಯೂ' ಎಂದು ಭಾವಪೂರ್ಣವಾಗಿ ಬರೆದುಕೊಂಡಿದ್ದಾರೆ ರವೀನಾ.