ETV Bharat / sitara

ಮಹಾರಾಷ್ಟ್ರ ಅನ್​ಲಾಕ್: ಕಂ ಬ್ಯಾಕ್ ಮಾಡಿದ ಜುನೈದ್ ಖಾನ್, ‘ಮಹಾರಾಜ’ನ ದರ್ಬಾರ್​​ ಶುರು..! - ಜುನೈದ್ ಖಾನ್ ಮೊದಲ ಚಿತ್ರ ಮಹಾರಾಜ

ನಟನಾಗಿ ಬಾಲಿವುಡ್​ಗೆ ಪದಾರ್ಪಣೆ ಮಾಡಿರುವ ಜುನೈದ್, ಫೆಬ್ರವರಿ 15 ರಂದು ತಮ್ಮ ಚೊಚ್ಚಲ ಸಿನಿಮಾ ಮಹಾರಾಜ ಚಿತ್ರೀಕರಣ ಆರಂಭಿಸಿದರು. ಮಹಾರಾಷ್ಟ್ರದಲ್ಲಿ ಕೋವಿಡ್ ಹಿನ್ನೆಲೆ ಲಾಕ್​ಡೌನ್ ಘೋಷಿಸಿದ ಹಿನ್ನೆಲೆ ಶೂಟಿಂಗ್ ಅರ್ಧಕ್ಕೆ ನಿಲ್ಲಿಸಬೇಕಾಯಿತು. ಬಳಿಕ ಎರಡನೇ ಅಲೆ ಹಿನ್ನೆಲೆ ಏಪ್ರಿಲ್ 14 ರಿಂದ ಕರ್ಫ್ಯೂ ವಿಧಿಸಿದ್ದರಿಂದ ಚಿತ್ರೀಕರಣ ಸ್ಥಗಿತಗೊಂಡಿತು.

Maharaja
ಮಹಾರಾಜ
author img

By

Published : Jun 8, 2021, 3:22 PM IST

ಹೈದರಾಬಾದ್: ಬಾಲಿವುಡ್ ಸೂಪರ್ ಸ್ಟಾರ್ ಅಮೀರ್ ಖಾನ್ ಪುತ್ರ ಜುನೈದ್ ಖಾನ್ ಮೊದಲ ಚಿತ್ರದ ಚಿತ್ರೀಕರಣ ಪುನಾರಂಭವಾಗಿದೆ.

ನಟನಾಗಿ ಬಾಲಿವುಡ್​ಗೆ ಪದಾರ್ಪಣೆ ಮಾಡಿರುವ ಜುನೈದ್, ಫೆಬ್ರವರಿ 15 ರಂದು ತಮ್ಮ ಚೊಚ್ಚಲ ಸಿನಿಮಾ ಮಹಾರಾಜ ಚಿತ್ರೀಕರಣ ಆರಂಭಿಸಿದರು. ಮಹಾರಾಷ್ಟ್ರದಲ್ಲಿ ಕೋವಿಡ್ ಹಿನ್ನೆಲೆ ಲಾಕ್​ಡೌನ್ ಘೋಷಿಸಿದ ಹಿನ್ನೆಲೆ ಶೂಟಿಂಗ್ ಅರ್ಧಕ್ಕೆ ನಿಲ್ಲಿಸಬೇಕಾಯಿತು. ಬಳಿಕ ಎರಡನೇ ಅಲೆ ಹಿನ್ನೆಲೆ ಏಪ್ರಿಲ್ 14 ರಿಂದ ಕರ್ಫ್ಯೂ ವಿಧಿಸಿದ್ದರಿಂದ ಚಿತ್ರೀಕರಣ ಸ್ಥಗಿತಗೊಂಡಿತು.

ಇದೀಗ ಕೋವಿಡ್​ ನಿಯಮಾನುಸಾರ ಚಿತ್ರತಂಡ ಶೂಟಿಂಗ್ ಆರಂಭಿಸಿದೆ. ಮುಂಬೈನ ಮರೋಲ್​ನಲ್ಲಿ ನಿರ್ಮಿಸಲಾಗಿರುವ ಸೆಟ್​​ನಲ್ಲಿ ಚಿತ್ರೀಕರಣ ಆರಂಭಗೊಂಡಿದ್ದು, ಸಿನಿಮಾಗೆ ಸಿದ್ದಾರ್ಥ್ ಪಿ.ಮಲ್ಹೋತ್ರಾ ಆ್ಯಕ್ಷನ್ ಕಟ್ ಹೇಳಿದ್ದಾರೆ.

ಇದನ್ನೂ ಓದಿ: ಒಂದೇ ದಿನದಲ್ಲಿ ಹೊಸ ದಾಖಲೆ ಬರೆದ '777 ಚಾರ್ಲಿ'

ಇದು 1862ರ ಲಿಬೆಲ್​ ಮಹಾರಾಜನ ಜೀವನಾಧಾರಿತ ಚಿತ್ರವಾಗಿದ್ದು, ಜುನೈದ್ ಮುಲ್ಜಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಟಿ ಶಾಲಿನಿ ಪಾಂಡೆ, ಅರ್ಜುನ್ ರೆಡ್ಡಿ, ಶಾರ್ವಾರಿ ವಾಘ್ ಮತ್ತು ಜೈದೀಪ್ ಅಹ್ಲಾವತ್ ಈ ಚಿತ್ರದ ಪ್ರಮುಖ ತಾರಾಗಣದಲ್ಲಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.