ETV Bharat / sitara

ಕ್ಯಾನ್ಸರ್​ ರೋಗಿಗಳಿಗೆ ನೆರವು: ಕೂದಲು ದಾನ ಮಾಡಿದ ಮಾಧುರಿ ದೀಕ್ಷಿತ್​ರ ಪುತ್ರ - ನೆಟ್ಟಿಗರಿಂದ ಪ್ರಶಂಸೆ

ಬಾಲಿವುಡ್​ ನಟಿ ಮಾಧುರಿ ದೀಕ್ಷಿತ್​ ಅವರ ಕಿರಿಯ ಪುತ್ರ ರಿಯಾನ್​ ಕ್ಯಾನ್ಸರ್​ ಜಾಗೃತಿ ದಿನದ ಅಂಗವಾಗಿ ತಮ್ಮ ತಲೆ ಕೂದಲನ್ನು ದಾನ ಮಾಡಿ ಕ್ಯಾನ್ಸರ್​ ರೋಗಿಗಳಿಗೆ ನೆರವಾಗಿದ್ದಾರೆ. ರಿಯಾನ್​ರ ಈ ಕಾರ್ಯಕ್ಕೆ ನೆಟ್ಟಿಗರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

madhuri dixits son ryan
ಕೂದಲು ದಾನ ಮಾಡಿದ ಬಾಲಿವುಡ್​ ನಟಿ ಮಾಧುರಿ ದೀಕ್ಷಿತ್​ರ ಪುತ್ರ ರಿಯಾನ್
author img

By

Published : Nov 9, 2021, 4:51 PM IST

ನವದೆಹಲಿ: ಬಾಲಿವುಡ್‌ನ ಜನಪ್ರಿಯ​ ನಟಿ ಮಾಧುರಿ ದೀಕ್ಷಿತ್​ ಅವರ ಕಿರಿಯ ಪುತ್ರ ರಿಯಾನ್​ ಕ್ಯಾನ್ಸರ್​ ಜಾಗೃತಿ ದಿನದ ಅಂಗವಾಗಿ ತಮ್ಮ ತಲೆ ಕೂದಲನ್ನು ದಾನ ಮಾಡಿ ಕ್ಯಾನ್ಸರ್​ ರೋಗಿಗಳಿಗೆ ನೆರವಾಗಿದ್ದಾರೆ. ರಿಯಾನ್​ ಕಾರ್ಯಕ್ಕೆ ನೆಟ್ಟಿಗರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಮಾಧುರಿ ದೀಕ್ಷಿತ್​ ಅವರು ಪುತ್ರ ರಿಯಾನ್​ ತಲೆಕೂದಲನ್ನು ದಾನ ಮಾಡಲು ಸಲೂನ್​ನಲ್ಲಿ ಕುಳಿತ ವಿಡಿಯೋವನ್ನು ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ.

ತಮ್ಮ ಮಗನನ್ನು 'ಹೀರೋ' ಎಂದು ಸಂಬೋಧಿಸಿರುವ ಮಾಧುರಿ ಅವರು, ರಾಷ್ಟ್ರೀಯ ಕ್ಯಾನ್ಸರ್​ ದಿನದ ಹಿನ್ನೆಲೆ ನನ್ನ ಮಗ ರಿಯಾನ್​ ತನ್ನ ತಲೆಕೂದಲನ್ನು ದಾನವಾಗಿ ನೀಡಿದ್ದಾರೆ. ಕ್ಯಾನ್ಸರ್​ ಪೀಡಿತರಾಗಿ ಕೀಮೋ ಪಡೆಯುತ್ತಿರುವ ರೋಗಿಗಳಿಗೆ ಅಗತ್ಯವಿರುವ ತಲೆಕೂದಲನ್ನು ನೀಡುವುದಾಗಿ ರಿಯಾನ್​ ಹೇಳಿದಾಗ ಅಚ್ಚರಿಪಟ್ಟಿದ್ದೆವು. ಇದಕ್ಕಾಗಿ 2 ವರ್ಷಗಳಿಂದ ಉದ್ದವಾದ ಕೂದಲನ್ನು ಕತ್ತರಿಸದೇ ಬೆಳೆಸಿದ್ದ. ಈಗ ರಾಷ್ಟ್ರೀಯ ಕ್ಯಾನ್ಸರ್​ ಜಾಗೃತಿ ದಿನದ ಹಿನ್ನೆಲೆ ಕೂದಲನ್ನು ಕ್ಯಾನ್ಸರ್​ ಸಂಸ್ಥೆಗೆ ನೀಡಿದ್ದಾನೆ. ಮಗನ ನಿರ್ಧಾರದ ಬಗ್ಗೆ ಹೆಮ್ಮೆ ಇದೆ ಎಂದು ಬರೆದುಕೊಂಡಿದ್ದಾರೆ.

ಮಾಧುರಿ ದೀಕ್ಷಿತ್​ ಅವರ ಪುತ್ರನ ಈ ಕಾರ್ಯಕ್ಕೆ ನಟಿಯರಾದ ಶಿಲ್ಪಾಶೆಟ್ಟಿ, ಜೆನಿಲಿಯಾ ಡಿಸೋಜಾ, ನಿರ್ಮಾಪಕಿ ಫರಾ ಖಾನ್​, ನಟ ರಿತೇಶ್​ ದೇಶ್​ಮುಖ್​ ಸೇರಿದಂತೆ ನೆಟ್ಟಿಗರಿಂದಲೂ ಪ್ರಶಂಸೆ ವ್ಯಕ್ತವಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.