ETV Bharat / sitara

'ದ ಫೇಮ್ ಗೇಮ್'ನಲ್ಲಿ ಮಾಧುರಿ ದೀಕ್ಷಿತ್​: ಮೊದಲ ಬಾರಿಗೆ ಒಟಿಟಿ ಸಿರೀಸ್​​ನಲ್ಲಿ ಕಾಣಿಸಿಕೊಳ್ಳಲು ಇದೇ ಕಾರಣ.. - ದಿ ಫೇಮ್ ಗೇಮ್​ ಬಿಡುಗಡೆ ದಿನಾಂಕ

ನಟಿಯ ಖ್ಯಾತಿ, ಕೆಲವೊಂದು ಯಡವಟ್ಟುಗಳು, ನಟಿಯ ಕುಟುಂಬದ ಬಗ್ಗೆ ಹೇಳುವಾಗ ಮಹಿಳೆಯೊಬ್ಬಳ ಕುಟುಂಬ ಮೇಲ್ನೋಟಕ್ಕೆ ಸುಂದರವಾಗಿದ್ದಂತೆ ಕಂಡರೂ ಅಷ್ಟೇನೂ ಸುಂದರವಾಗಿರುವುದಿಲ್ಲ ಎಂಬುದನ್ನೇ ಈ ಸರಣಿಯಲ್ಲಿ ತೋರಿಸಲಾಗಿದೆ ಎಂದು ಮಾಧುರಿ ದೀಕ್ಷಿತ್ ಹೇಳಿದ್ದಾರೆ.

Madhuri Dixit reveals why she chose 'The Fame Game' as her digital debut
'ದ ಫೇಮ್ ಗೇಮ್'ನಲ್ಲಿ ಮಾಧುರಿ ದೀಕ್ಷಿತ್​: ಮೊದಲ ಬಾರಿಗೆ ಒಟಿಟಿ ಸಿರೀಸ್​​ನಲ್ಲಿ ಕಾಣಿಸಿಕೊಳ್ಳಲು ಇದೇ ಕಾರಣ..
author img

By

Published : Feb 12, 2022, 7:13 AM IST

Updated : Feb 12, 2022, 7:52 AM IST

ಧಕ್ ಧಕ್ ಬೆಡಗಿ ಮಾಧುರಿ ದೀಕ್ಷಿತ್ ನೆಟ್​ಫ್ಲಿಕ್ಸ್​ ಸಿರೀಸ್ 'ದಿ ಫೇಮ್ ಗೇಮ್​'ನಲ್ಲಿ ಕಾಣಿಸಿಕೊಳ್ಳುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಈಗ ದಿ ಫೇಮ್ ಗೇಮ್​ನ ಟ್ರೈಲರ್ ಗುರುವಾರ ಬಿಡುಗಡೆ ಮಾಡಲಾಗಿದೆ. ಇದೇ ಮೊದಲ ಬಾರಿಗೆ ಮಾಧುರಿ ದೀಕ್ಷಿತ್ ಒಟಿಟಿ ಪ್ಲಾಟ್​ಫಾರ್ಮ್​​ನ ಸರಣಿಯೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದು,​ ಅವರು ಯಾವ ಕಾರಣಕ್ಕಾಗಿ ಈ ಸಿರೀಸ್ ಅನ್ನು ಆಯ್ಕೆ ಮಾಡಿಕೊಂಡರು ಎಂಬುದನ್ನು ಈಗ ಬಹಿರಂಗಪಡಿಸಿದ್ದಾರೆ.

ನಟಿಯೊಬ್ಬಳ ಜೀವನದ ಕುರಿತು 'ದಿ ಫೇಮ್ ಗೇಮ್​' ಸರಣಿಯಲ್ಲಿ ಹೇಳಲಾಗಿದೆ. ಈ ಸರಣಿಯ ಕತೆ ಅತ್ಯದ್ಭುತವಾಗಿರುವ ಕಾರಣದಿಂದ ಈ ಸರಣಿಗೆ ಒಪ್ಪಿಕೊಂಡಿದ್ದೇನೆ ಎಂದು ಮಾಧುರಿ ದೀಕ್ಷಿತ್ ಹೇಳಿದ್ದಾರೆ. ಇದರ ಜೊತೆಗೆ ನಟಿಯ ಖ್ಯಾತಿ, ಕೆಲವೊಂದು ಯಡವಟ್ಟುಗಳು, ನಟಿಯ ಕುಟುಂಬದ ಬಗ್ಗೆ ಹೇಳುವಾಗ ಮಹಿಳೆಯೊಬ್ಬಳ ಕುಟುಂಬ ಮೇಲ್ನೋಟಕ್ಕೆ ಸುಂದರವಾಗಿದ್ದಂತೆ ಕಂಡರೂ ಅಷ್ಟೇನೂ ಸುಂದರವಾಗಿರುವುದಿಲ್ಲ ಎಂಬುದನ್ನೇ ಈ ಸರಣಿಯಲ್ಲಿ ತೋರಿಸಲಾಗಿದೆ ಎಂದು ಮಾಧುರಿ ದೀಕ್ಷಿತ್ ಹೇಳಿದ್ದಾರೆ.

'ದ ಫೇಮ್ ಗೇಮ್'ನಲ್ಲಿ ಮಾಧುರಿ ದೀಕ್ಷಿತ್​

ಟ್ರೇಲರ್​ನಲ್ಲಿರುವಂತೆ ಮಾಧುರಿ ದೀಕ್ಷಿತ್ ಅವರು ಸೂಪರ್‌ಸ್ಟಾರ್ ಅನಾಮಿಕಾ ಆನಂದ್ ಆಗಿ ಕಾಣಿಸಿಕೊಳ್ಳುತ್ತಿದ್ದು, ಆಕಸ್ಮಿಕವಾಗಿ ಕಣ್ಮರೆಯಾಗುತ್ತಾರೆ. ಈ ವಿಚಾರದಲ್ಲಿ ಪೊಲೀಸರ ತನಿಖೆ ಮುಂದುವರೆಯುತ್ತದೆ. ಈ ವೇಳೆ ಹಲವಾರು ವಿಚಾರಗಳು ಒಂದೊಂದೇ ಬೆಳಕಿಗೆ ಬರುತ್ತವೆ. 'ನನ್ನ ಸುಂದರವಾದ ಕುಟುಂಬದ ಮೇಲೆ ಯಾವುದೇ ಕೆಟ್ಟ ದೃಷ್ಟಿ ಬೀಳಲು ಬಿಡುವುದಿಲ್ಲ' ಎಂದು ಆರಂಭದಲ್ಲಿ ಹಿನ್ನೆಲೆ ಸಂಭಾಷಣೆ ಬರುತ್ತದೆ. ಆದರೆ ಆಕೆ ಕಣ್ಮರೆಯಾದ ಮೇಲೆ ಒಂದೊಂದೇ ವಿಚಾರಗಳು ಬಹಿರಂಗವಾಗುತ್ತವೆ ಎಂಬುದನ್ನು ಸರಣಿಯಲ್ಲಿ ತೋರಿಸಲಾಗಿದೆ.

ಇದನ್ನೂ ಓದಿ: ಶಾನ್ವಿ ಶ್ರೀವಾತ್ಸವ ಅಭಿನಯದ ಮೊದಲ ಮಲಯಾಳಂ ಚಿತ್ರದ ಫಸ್ಟ್​ ಲುಕ್ ಪೋಸ್ಟರ್​​​ ರಿವೀಲ್​!

ಈ ಸರಣಿಯಲ್ಲಿ ಸಂಜಯ್ ಕಪೂರ್, ಮಾನವ್ ಕೌಲ್, ಲಕ್ಷವೀರ್ ಸರನ್, ಸುಹಾಸಿನಿ ಮುಲಾಯ್ ಮತ್ತು ಮುಸ್ಕಾನ್ ಜಾಫೇರಿ ಮುಂತಾದವರು ನಟಿಸಿದ್ದು, ಬಿಜಾಯ್ ನಂಬಿಯಾರ್ ಮತ್ತು ಕರಿಷ್ಮಾ ಕೊಹ್ಲಿ ನಿರ್ದೇಶಿಸಿದ್ದಾರೆ. ಫೆಬ್ರವರಿ 25ರಂದು ಈ ಸರಣಿ ಬಿಡುಗಡೆಯಾಗಲಿದೆ.

Last Updated : Feb 12, 2022, 7:52 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.