ನವದೆಹಲಿ: ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ ಮತ್ತು ನಟಿ ಕೃತಿ ಸನೋನ್ ಡೇಟಿಂಗ್ ಮಾಡುವುದನ್ನು ನಿರಾಕರಿಸಿರಬಹುದು, ಆದರೆ ಅವರ ಸಂಬಂಧ ತುಂಬಾ ಗಟ್ಟಿಯಾಗಿತ್ತು ಮತ್ತು ಜೊತೆಯಲ್ಲಿದ್ದಾಗ ಸಂತೋಷದಿಂದಿರುತ್ತಿದ್ದರು ಎಂದು ನಟಿ ಲೀಜಾ ಮಲಿಕ್ ಹೇಳಿದ್ದಾರೆ.
ಲಿಜಾ ಸುಶಾಂತ್ ಅವರೊಂದಿಗೆ ವೃತ್ತಿಪರ ಸಂಬಂಧ ಹೊಂದಿದ್ದರು. ಬರ್ತ್ಡೇ ಪಾರ್ಟಿಯೊಂದರಲ್ಲಿ ಕೃತಿ ಹಾಗೂ ಸುಶಾಂತ್ ತಮ್ಮ ಸಂಬಂಧದಿಂದ ಸಂತೋಷವಾಗಿ ಇರುವುದನ್ನು ನಾನು ನೋಡಿದ್ದೆ ಎಂದು ಲೀಜಾ ಹೇಳಿದ್ದಾರೆ.
"ನಾನು ಸುಶಾಂತ್ನನ್ನು ಕೊನೆಯ ಬಾರಿಗೆ ಎರಡೂವರೆ ವರ್ಷಗಳ ಹಿಂದೆ ಭೇಟಿಯಾದಾಗ ಅವರು ಕೃತಿಯೊಂದಿಗೆ ಇದ್ದರು. ಬಾಂದ್ರಾ ಕ್ಲಬ್‌ನಲ್ಲಿ ಕೃತಿ ಜನ್ಮದಿನಾಚರಣೆಯ ಸಂದರ್ಭದಲ್ಲಿ ಭೇಟಿಯಾಗಿದ್ದೆ. ಸುಶಾಂತ್ ಉತ್ತಮ ವ್ಯಕ್ತಿತ್ವ ಹೊಂದಿದ್ದ ವ್ಯಕ್ತಿಯಾಗಿದ್ದು, ತಾನು ಬರುತ್ತಿದ್ದ ಪಾರ್ಟಿಗಳಲ್ಲಿ ಮತ್ತು ಜನರ ಮುಖದಲ್ಲಿ ಮಂದಹಾಸ ಮೂಡಿಸುತ್ತಿದ್ದರು. ಮಹೇಶ್ ಶೆಟ್ಟಿಯಂತಹ ಸಾಮಾನ್ಯ ಸ್ನೇಹಿತರನ್ನು ಕೂಡ ನಾವು ಹೊಂದಿದ್ದೇವೆ "ಎಂದು ಲಿಜಾ ತಿಳಿಸಿದರು.
ಕೃತಿ ಮತ್ತು ಸುಶಾಂತ್ ತಾವು ಡೇಟಿಂಗ್ ಮಾಡುತ್ತಿರುವ ಸುದ್ದಿಯನ್ನು ಎಂದಿಗೂ ದೃಢಪಡಿಸಿರಲಿಲ್ಲ ಅಥವಾ ನಿರಾಕರಿಸಲಿಲ್ಲ. ಇಬ್ಬರೂ 2017ರಲ್ಲಿ ರಾಬ್ತಾ ಚಿತ್ರದಲ್ಲಿ ಜೊತೆಯಾಗಿ ನಟಿಸಿದ್ದರು.