ಹೈದರಾಬಾದ್: ನಟ ಸೈಫ್ ಅಲಿ ಖಾನ್, ಪ್ರಭಾಸ್ ಮತ್ತು ಸನ್ನಿ ಸಿಂಗ್ ಅಭಿನಯದ ಮುಂಬರುವ ಪೌರಾಣಿಕ ಚಿತ್ರ ಆದಿಪುರುಷ್ ಸಿನಿಮಾದ ತಾರಾಗಣಕ್ಕೆ ಬಾಲಿವುಡ್ ನಟಿ ಕೃತಿ ಸನೋನ್ ಸೇರಿಕೊಂಡಿದ್ದಾರೆ.
ಈ ಬಗ್ಗೆ ಕೃತಿ ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿದ್ದು, "ಹೊಸ ಪ್ರಯಾಣ ಪ್ರಾರಂಭವಾಗುತ್ತಿದೆ. #ADIPURUSH. ಇದು ತುಂಬಾ ವಿಶೇಷವಾಗಿದೆ. ಹೆಮ್ಮೆ, ಗೌರವ ಮತ್ತು ಈ ಮಾಂತ್ರಿಕ ಪ್ರಪಂಚದ ಭಾಗವಾಗಲು ಉತ್ಸುಕಳಾಗಿದ್ದೇನೆ." ಎಂದು ಶೀರ್ಷಿಕೆ ನೀಡಿದ್ದಾರೆ.
- " class="align-text-top noRightClick twitterSection" data="
">
ಚಿತ್ರದಲ್ಲಿ ನಿರ್ದೇಶಕ ಓಂ ರೌತ್, ರಾಮ ಪಾತ್ರದಲ್ಲಿ ನಟಿಸಲಿರುವ ಪ್ರಭಾಸ್ ಮತ್ತು ಲಕ್ಷ್ಮಣನಾಗಿ ಕಾಣಿಸಿಕೊಳ್ಳುವ ಸನ್ನಿ ಅವರಿದ್ದಾರೆ. ಇನ್ನು ಅದೇ ಚಿತ್ರವನ್ನು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡ ಪ್ರಭಾಸ್, "ಆದಿಪುರುಷ್ ಕುಟುಂಬಕ್ಕೆ ಕೃತಿ ಸನೋನ್ ಅವರನ್ನು ಸ್ವಾಗತಿಸುತ್ತೇವೆ" ಎಂದು ಬರೆದಿದ್ದಾರೆ.
- " class="align-text-top noRightClick twitterSection" data="
">
ಕೃತಿ ಈ ಚಿತ್ರದಲ್ಲಿ ಸೀತಾ ಪಾತ್ರವನ್ನು ಮಾಡಲಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಸೈಫ್ ಅವರು ರಾವಣ ಪಾತ್ರವನ್ನು ನಿರ್ವಹಿಸಲಿದ್ದಾರೆ.
ಪ್ರಸ್ತುತ ಆಗಸ್ಟ್ 11, 2022 ರಂದು ಬಿಡುಗಡೆಯಾಗುತ್ತಿರುವ ಈ ಚಿತ್ರವು ಫೆಬ್ರವರಿಯಲ್ಲಿ ಚಿತ್ರೀಕರಣ ಪಾರಂಭಿಸಿದೆ.