ETV Bharat / sitara

ಫುಟ್ಬಾಲ್​​ ಆಟಗಾರನಿಂದ ದೂರಾದ ಕೃಷ್ಣ ಶ್ರಾಫ್​​...ಬ್ರೇಕಪ್​​ಗೆ ಕಾರಣವೇನು...? - Jackie Shroff daughter love break up

ಫುಟ್ಬಾಲ್ ಆಟಗಾರ ಇಬಾನ್ ಹಮ್ಸ್ ಜೊತೆಗೆ ಬ್ರೇಕಪ್ ಆಗಿರುವ ವಿಚಾರವನ್ನು ಕೃಷ್ಣ ಶ್ರಾಫ್ ಹೇಳಿಕೊಂಡಿದ್ದಾರೆ. ನಾವಿಬ್ಬರೂ ಈಗ ಜೊತೆಗೆ ಇಲ್ಲ, ದಯವಿಟ್ಟು ನಮ್ಮಿಬ್ಬರ ಫೋಟೋಗಳನ್ನು ನನಗೆ ಟ್ಯಾಗ್ ಮಾಡಬೇಡಿ ಎಂದು ಕೃಷ್ಣ ಶ್ರಾಫ್ ತಮ್ಮ ಸೋಷಿಯಲ್ ಮೀಡಿಯಾ ಮೂಲಕ ತಿಳಿಸಿದ್ದರು.

Krishna Shroff Break up
ಕೃಷ್ಣ ಶ್ರಾಫ್ ಬ್ರೇಕಪ್
author img

By

Published : Nov 17, 2020, 10:36 AM IST

ಬಾಲಿವುಡ್​​ನಲ್ಲಿ ಆಗ್ಗಾಗ್ಗೆ ಬ್ರೇಕ್​​​ ಅಪ್ ಸುದ್ದಿಗಳನ್ನು ಕೇಳುತ್ತಿರುತ್ತೇವೆ. ಇದೀಗ ಮತ್ತೊಂದು ಬ್ರೇಕ್​​​ ಅಪ್ ಸುದ್ದಿ ಹೊರಬಿದ್ದಿದೆ. ಬಹಳ ವರ್ಷಗಳಿಂದ ಕೃಷ್ಣ ಶ್ರಾಫ್, ಆಸ್ಟ್ರೇಲಿಯಾ ಫುಟ್ಬಾಲ್ ಆಟಗಾರ ಇಬಾನ್ ಹಮ್ಸ್​​ ಜೊತೆ ಡೇಟಿಂಗ್​​ನಲ್ಲಿದ್ದರು. ಕೃಷ್ಣ ಇದೀಗ ಆ ಸಂಬಂಧದಿಂದ ಹೊರಬಂದಿದ್ದಾರೆ.

Krishna Shroff Break up
ಕೃಷ್ಣ ಶ್ರಾಫ್, ಇಮಾನ್ ಹಮ್ಸ್

ಕೃಷ್ಣ ಶ್ರಾಫ್, ಬಾಲಿವುಡ್ ಖ್ಯಾತ ನಟ ಜಾಕಿ ಶ್ರಾಫ್​​​ ಪುತ್ರಿ. ಲಾಕ್​ಡೌನ್ ಸಮಯದಲ್ಲಿ ಕೃಷ್ಣ ತನ್ನ ಪ್ರಿಯತಮ ಇಬಾನ್​​​​ ಹಮ್ಸ್ ಜೊತೆ ಬಿಲ್ಡಿಂಗ್ ಮೇಲೆ ನಿಂತು ಕಿಸ್ ಮಾಡಿದ್ದ ಫೋಟೋಗಳನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಆದರೆ ಇದೀಗ ಆತನ ಜೊತೆ ಬ್ರೇಕ್​ ಅಪ್​ ಆಗಿದೆ ಎನ್ನುತ್ತಿದ್ದಾರೆ. ಸೆಲಬ್ರಿಟಿಗಳ ಸೋಷಿಯಲ್ ಮೀಡಿಯಾಗೆ ಅಭಿಮಾನಿಗಳು ಪೋಸ್ಟ್​​​​ಗಳನ್ನು ಟ್ಯಾಗ್ ಮಾಡುವುದು ಸಾಮಾನ್ಯ. ಅದೇ ರೀತಿ ಕೃಷ್ಣ ಶ್ರಾಫ್​​ಗೆ ಕೂಡಾ ಅಭಿಮಾನಿಗಳು ಇಬಾನ್ ಜೊತೆಗೆ ಇರುವ ಫೋಟೋಗಳನ್ನು ಟ್ಯಾಗ್ ಮಾಡಿದ್ದಾರೆ. ಈ ವಿಚಾರಕ್ಕೆ ಪ್ರತಿಕ್ರಿಯಿಸಿರುವ ಕೃಷ್ಣ, ''ದಯವಿಟ್ಟು ಇಬಾನ್ ಜೊತೆಗಿರುವ ಫೋಟೋಗಳನ್ನು ನನಗೆ ಟ್ಯಾಗ್ ಮಾಡಬೇಡಿ. ನಾವು ಈಗ ಜೊತೆಗಿಲ್ಲ, ನಮ್ಮಿಬ್ಬರದ್ದೂ ಬ್ರೇಕ್​​ ಅಪ್ ಆಗಿದೆ ಎಂದು ಹೇಳಿದ್ದಾರೆ'' ಕಳೆದ 2-3 ವರ್ಷಗಳಿಂದ ಕೃಷ್ಣ ಶ್ರಾಫ್ ಹಾಗೂ ಇಬಾನ್ ಹಮ್ಸ್ ರಿಷೇನಲ್​​​​​​​ಶಿಪ್​​​ನಲ್ಲಿದ್ದರು.

Krishna Shroff Break up
ಬ್ರೇಕಪ್ ವಿಚಾರ ರಿವೀಲ್ ಮಾಡಿದ ಕೃಷ್ಣ ಶ್ರಾಫ್

ಇವರ ಬ್ರೇಕಪ್​​ಗೆ ಕಾರಣ ಏನು ಎಂಬುದು ತಿಳಿದಿಲ್ಲ. ಆದರೆ ಇಬ್ಬರ ಆಪ್ತರು ಮಾತ್ರ ಇಬ್ಬರ ನಡುವಿನ ಈಗೋ ಈ ಬ್ರೇಕಪ್​​​ಗೆ ಕಾರಣ ಎನ್ನಲಾಗುತ್ತಿದೆ. ಬ್ರೇಕಪ್​​​​​​ ವಿಚಾರವನ್ನು ರಿವೀಲ್ ಮಾಡಿದ ನಂತರ ಕೃಷ್ಣ ಶ್ರಾಫ್, ಇಬಾನ್ ಜೊತೆಗಿದ್ದ ಎಲ್ಲಾ ವಿಡಿಯೋ ಹಾಗೂ ಫೋಟೋಗಳನ್ನು ಡಿಲೀಟ್ ಮಾಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.