ETV Bharat / sitara

ಆಟೋನಲ್ಲಿ ಶೂಟಿಂಗ್​​ಗೆ​ ತೆರಳಿದ ಕೈರಾ ಅಡ್ವಾಣಿ... ನಟಿ ಸರಳತೆಗೆ ನೆಟಿಜನ್​​ ಮೆಚ್ಚುಗೆ - ರಾಘವ ಲಾರೆನ್ಸ್

ಬಾಲಿವುಡ್ ನಟಿ ಕೈರಾ ಅಡ್ವಾಣಿ ಸದ್ಯಕ್ಕೆ ಅಕ್ಷಯ್ ಕುಮಾರ್ ಜೊತೆ 'ಲಕ್ಷ್ಮಿ ಬಾಂಬ್' ಸಿನಿಮಾದಲ್ಲಿ ಬ್ಯುಸಿ ಇದ್ದಾರೆ. ಶೂಟಿಂಗ್ ಸ್ಪಾಟ್​​​​ಗೆ ಕೈರಾ ಕಾರಿನ ಬದಲು ಆಟೋದಲ್ಲಿ ತೆರಳಿ ಎಲ್ಲರ ಮೆಚ್ಚುಗೆ ಗಳಿಸಿದ್ಧಾರೆ. ಸದ್ಯಕ್ಕೆ ಈ ವಿಡಿಯೋ ವೈರಲ್ ಆಗಿದ್ದು, ನೆಟಿಜನ್​​ಗಳು ಕೈರಾ ಸರಳತೆಯನ್ನು ಮೆಚ್ಚಿಕೊಂಡಿದ್ದಾರೆ.

ಕೈರಾ ಅಡ್ವಾಣಿ
author img

By

Published : Aug 24, 2019, 7:59 PM IST

ಮಹೇಶ್ ಬಾಬು ಅಭಿನಯದ 'ಭರತ್ ಅನೇ ನೇನು', ಶಾಹಿದ್ ಕಪೂರ್ ಜೊತೆ 'ಕಬೀರ್ ಸಿಂಗ್​'ನಲ್ಲಿ ನಟಿಸಿ ಎಲ್ಲರ ಮನ ಗೆದ್ದಿರುವ ಕೈರಾ ಅಡ್ವಾಣಿ ಹೆಚ್ಚಾಗಿ ಯುವಕರಿಗೆ ಅಚ್ಚುಮೆಚ್ಚು. ಇದೀಗ ಕೈರಾ ಕೈಯಲ್ಲಿ 4-5 ಸಿನಿಮಾಗಳಿವೆ.

kaira advani
ಕೊರಿಯೋಗ್ರಾಫರ್​​​ ಶಬೀನಾ ಖಾನ್​​ ಜೊತೆ ಕೈರಾ ಆಟೋ ಪ್ರಯಾಣ

ಗುಡ್​​​ನ್ಯೂಸ್, ಲಕ್ಷ್ಮಿಬಾಂಬ್, ಷೇರ್​ ಶಾ, ಮರ್​​ಜಾವಾ ಸೇರಿದಂತೆ ಇನ್ನಿತರ ಸಿನಿಮಾಗಳಿಗೆ ಕೈರಾ ಸಹಿ ಮಾಡಿದ್ದಾರೆ. ಸದ್ಯಕ್ಕೆ ಅಕ್ಷಯ್ ಕುಮಾರ್ ಜೊತೆ 'ಲಕ್ಷ್ಮಿ ಬಾಂಬ್' ಸಿನಿಮಾ ಶೂಟಿಂಗ್​​ನಲ್ಲಿ ಅವರು ಬ್ಯುಸಿಯಿದ್ದಾರೆ. ಈ ಸಿನಿಮಾವನ್ನು ರಾಘವ ಲಾರೆನ್ಸ್ ನಿರ್ದೇಶಿಸುತ್ತಿದ್ದಾರೆ. ಶೂಟಿಂಗ್ ಸೆಟ್​​​ಗೆ ಕೈರಾ ಆಟೋದಲ್ಲಿ ಪ್ರಯಾಣಿಸುವ ವಿಡಿಯೋ ವೈರಲ್ ಆಗಿದ್ದು, ನೆಟಿಜನ್ಸ್​​​​​​​​​ಗಳಿಂದ ಭಾರೀ ಪ್ರಶಂಸೆ ವ್ಯಕ್ತವಾಗಿದೆ. ಕೊರಿಯೋಗ್ರಾಫರ್​​​​ ಶಬೀನಾ ಖಾನ್​​ ಜೊತೆ ಕೈರಾ ಆಟೋ ಹತ್ತಿದ್ದಾರೆ. ಈ ವೇಳೆ ತೆಗೆದಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕೈರಾ ಈ ಸರಳತೆಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಇತ್ತಿಚೆಗೆ ಸೈಫ್ ಅಲಿಖಾನ್ ಪುತ್ರಿ ಸಾರಾ ಅಲಿ ಖಾನ್ ಜಿಮ್​ಗೆ ಹೋಗುವಾಗ ಕಾರಿನಲ್ಲಿ ಹೋಗದೆ ಆಟೋದಲ್ಲಿ ಪ್ರಯಾಣಿಸಿದ್ದರು. ಅಂದು ಕೂಡಾ ನೆಟಿಜನ್​​ಗಳು ಸಾರಾ ಅವರನ್ನು ಹೊಗಳಿದ್ದರು.

kaiara, akshya kumar
ಅಕ್ಷಯ್ ಕುಮಾರ್, ಕೈರಾ ಅಡ್ವಾಣಿ

Intro:Body:

kaira advani 

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.