ETV Bharat / sitara

ನಾನು ಮದುವೆಯಾಗುವ ವ್ಯಕ್ತಿಯಲ್ಲಿ ಈ 3 ಗುಣಗಳಿರಬೇಕು ; ಕತ್ರಿನಾ ಬಯಸಿದ್ದು ನಿಜವಾಯಿತಾ? - ಭಾವಿ ಪತಿ ಬಗ್ಗೆ ಕತ್ರಿನಾ ಕೈಫ್​ ಮಾತುಗಳು

ಕತ್ರಿನಾ ಕೈಫ್ ಅವರ ಹಳೆಯ ಸಂದರ್ಶನವೊಂದು ವೈರಲ್ ಆಗುತ್ತಿದೆ. ಅದರಲ್ಲಿ ಕತ್ರಿನಾ ತನ್ನ ಭಾವಿ ಪತಿಯಿಂದ ತಾನು ನಿರೀಕ್ಷಿಸುವ ಆ ಮೂರು ವಿಷಯಗಳ ಬಗ್ಗೆ ಹೇಳಿದ್ದಾರೆ. ಬಹುಶಃ ಈ ಮೂರು ಗುಣಗಳನ್ನು ಕತ್ರಿನಾ ವಿಕ್ಕಿ ಕೌಶಲ್‌ನಲ್ಲಿ ಕಂಡುಕೊಂಡಿರಬಹುದು ಎನ್ನಲಾಗುತ್ತಿದೆ..

Katrina kaif wants three things in her ideal man old interview viral

author img

By

Published : Dec 6, 2021, 6:21 PM IST

ಹೈದರಾಬಾದ್ : ಮದುವೆ ಸಂಭ್ರಮದಲ್ಲಿರುವ ಬಾಲಿವುಡ್​ ನಟಿ ಕತ್ರಿನಾ ಕೈಫ್ ಅವರ ಹಳೆಯ ಸಂದರ್ಶನವೊಂದು ಈಗ ಸಖತ್​ ವೈರಲ್ ಆಗುತ್ತಿದೆ. ಸಂದರ್ಶನದಲ್ಲಿ ಕತ್ರಿನಾ ತನ್ನ ಭಾವಿ ಪತಿ ಹೇಗೆ ಇರಬೇಕು ಎಂದು ಮೂರು ವಿಷಯಗಳನ್ನು ಪ್ರಸ್ತಾಪಿಸಿ ಮಾತನಾಡಿದ ವಿಡಿಯೋ ಇದಾಗಿದೆ.

ತಾನು ನಿರೀಕ್ಷಿಸಿದ ಈ ಗುಣಗಳನ್ನು ಯಾರು ಹೊಂದಿದ್ದಾರೋ ಅವನನ್ನೇ ಮದುವೆಯಾಗುವುದಾಗಿ ನಟಿ ಈ ಹಿಂದೆ ತನ್ನ ಮನದಾಳದ ಇಂಗಿತ ವ್ಯಕ್ತಪಡಿಸಿದ್ದರು. ಈ ಗುಣಗಳನ್ನು ನಟಿ ಕತ್ರಿನಾ ಕೈಫ್ ನಟ ವಿಕ್ಕಿ ಕೌಶಲ್ ಅವರಲ್ಲಿ ಕಂಡುಕೊಂಡಿರಬಹುದು. ಹಾಗಾಗಿ, ಈ ಮದುವೆ ಎನ್ನಲಾಗುತ್ತಿದೆ.

ಆ ಮೂರು ಸಂಗತಿಗಳು ಯಾವುದು ಗೊತ್ತಾ?

ಫಿಲ್ಮ್‌ಫೇರ್‌ಗೆ ನೀಡಿದ ಸಂದರ್ಶನದಲ್ಲಿ ತಮ್ಮ ಮದುವೆ ಬಗ್ಗೆ ಕೇಳಲಾದ ಪ್ರಶ್ನೆಗೆ ನಟಿಯು ಈ ರೀತಿಯಾಗಿ ಉತ್ತರಿಸಿದ್ದಾರೆ. ಮೊದಲ ಗುಣವೆಂದರೆ ನಾನು ಬಯಸಿದ ಆಸೆಯನ್ನು ಈಡೇಸುವ ಹಾಗೂ ತಿಳಿದುಕೊಳ್ಳುವ ಗುಣವಂತನಾಗಿರಬೇಕು. ಎರಡನೆಯದ್ದು ಅವನಲ್ಲಿರುವ ಹಾಸ್ಯಪ್ರಜ್ಞೆಯು ಎಲ್ಲರನ್ನು ಮೆಚ್ಚಿಸುವಂತಿರಬೇಕು.

ಮೂರನೆಯದ್ದು ಸಂದರ್ಭ ಮತ್ತು ಸದ್ಯದ ವಿಷಯಗಳನ್ನು ಅರ್ಥಮಾಡಿಕೊಳ್ಳುವ ಶಕ್ತಿವಂತನಾಗಿರಬೇಕು ಎಂದು ತಮಾಷೆ ಮಾಡುತ್ತಲೇ ತಮ್ಮ ಮನದಾಳದ ಮಾತುಗಳನ್ನು ಹೇಳಿದ್ದರು. ವಿಕ್ಕಿ ಕೌಶಲ್ ಅವರಲ್ಲಿ ಈ ಮೂರು ಗುಣಗಳನ್ನು ಕಂಡುಕೊಂಡಿರಬಹುದು.

ಹಾಗಾಗಿ, ಅವರನ್ನು ತಮ್ಮ ಬಾಳಸಂಗಾತಿಯನ್ನಾಗಿ ಆರಿಸಿಕೊಂಡಿರಬಹುದು. ಇದೇ ಡಿಸೆಂಬರ್ 9ರಂದು ರಾಜಸ್ಥಾನದ ಸಿಕ್ಸ್ ಸೆನ್ಸ್ ರೆಸಾರ್ಟ್‌ನಲ್ಲಿ ಈ ಜೋಡಿ ಮದುವೆಯಾಗಲಿದೆ. ಅದಕ್ಕಾಗಿಯೇ ಸದ್ಯ ಭರ್ಜರಿ ತಯಾರಿ ನಡೆದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.