ಹೈದರಾಬಾದ್: ಬಾಲಿವುಡ್ನ ಮೋಸ್ಟ್ ಫೇಮಸ್ ನಟಿ ಅಂದರೆ ಅದು ಕತ್ರಿನಾ ಕೈಫ್. ಇತ್ತೀಚೆಗಷ್ಟೇ ಹಸೆಮಣೆ ಏರಿರುವ ಅವರು, ಮಾಲ್ಡೀವ್ಸ್ ಪ್ರವಾಸ ಕೈಗೊಂಡಿದ್ದಾರೆ. ಪ್ರವಾಸಿಗರ ಸ್ವರ್ಗ ಎಂದು ಪ್ರಖ್ಯಾತಿಯಾಗಿರುವ ಮಾಲ್ಡೀವ್ಸ್ನಲ್ಲಿ ಕೈಫ್ ಸಂತಸದ ಕ್ಷಣಗಳನ್ನು ಕಳೆಯುತ್ತಿದ್ದಾರೆ. ಎಜಾಯ್ ಮೂಡ್ನಲ್ಲಿರುವ ಕತ್ರಿನಾ ಕೈಫ್ಗೆ ಅಲ್ಲಿ ಹೊಸ ಜತೆಗಾರರು ಸಿಕ್ಕಿದ್ದಾರೆ. ಹೊಸ ಫ್ರೆಂಡ್ಸ್ ಜತೆ ಅವರು ವಿಡಿಯೋ ಸಹ ಮಾಡಿಕೊಂಡಿದ್ದಾರೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ಇನ್ಸ್ಟಾಗ್ರಾಂನಲ್ಲಿ ಮಾಲ್ಡೀವ್ಸ್ ಪ್ರವಾಸದ ಕೆಲ ವಿಡಿಯೋಗಳನ್ನು ನಟಿ ಶೇರ್ ಮಾಡಿಕೊಂಡಿದ್ದು, ಇವು ಅಭಿಮಾನಿಗಳಿಗೆ ರಸದೌತಣ ನೀಡುತ್ತಿವೆ. ವಿಡಿಯೋದಲ್ಲಿ ಕೈಫ್ ಪಕ್ಷಿಗಳಿಗೆ ಆಹಾರ ನೀಡುತ್ತಿರುವ ದೃಶ್ಯಗಳಿವೆ. ಪ್ರಕಾಶಮಾನವಾದ ಗುಲಾಬಿ ಬಣ್ಣದ ಟೀ ಶರ್ಟ್ ಮತ್ತು ಕಪ್ಪು ಡೆನಿಮ್ ಧರಿಸಿರುವ ಕತ್ರಿನಾ ಸುಂದರವಾಗಿ ಕಾಣಿಸುತ್ತಿದ್ದಾರೆ.
ನಿನ್ನೆಯಷ್ಟೇ ಅವರು ಬೀಚ್ನಲ್ಲಿರುವ ಫೋಟೋಗಳನ್ನು ಹಂಚಿಕೊಂಡಿದ್ದರು. ಇಂದು ಪಕ್ಷಿಗಳಿಗೆ ಆಹಾರ ನೀಡುತ್ತಿರುವ ವಿಡಿಯೋ ಹಂಚಿಕೊಂಡು ಅಭಿಮಾನಿಗಳಿಗೆ ಖುಷಿ ಕೊಟ್ಟಿದ್ದಾರೆ. ಒಂದು ಮಾಹಿತಿ ಪ್ರಕಾರ ಕತ್ರಿನಾ ಕೈಫ್ ಜಾಹೀರಾತು ಚಿತ್ರೀಕರಣಕ್ಕಾಗಿ ಮಾಲ್ಡೀವ್ಸ್ಗೆ ತೆರಳಿದ್ದಾರಂತೆ.
ಇದನ್ನು ಓದಿ:ಸೆನ್ಸಾರ್ನಲ್ಲಿ ಪಾಸ್ ಆದ '777 ಚಾರ್ಲಿ'