ಮುಂಬೈ: ಬಾಲಿವುಡ್ ಸ್ಟಾರ್ ಜೋಡಿಯಾದ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಡಿಸೆಂಬರ್ನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಜೋಡಿ ತಮ್ಮ ನಡೆ - ನುಡಿಗಳಿಂದ ಎಲ್ಲರ ಮನ ಗೆಲ್ಲುತ್ತಿದ್ದಾರೆ.
ಹೊಸ ವರ್ಷಾಚರಣೆಯನ್ನು ಮುಂಬೈನಲ್ಲೇ ಆಚರಿಸಿದ ಈ ಜೋಡಿ, ಹೊಸ ವರ್ಷದ ದಿನ ಇಬ್ಬರೂ ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾಗಿದ್ದಾರೆ. ಈ ವೇಳೆ, ಇವರಿಬ್ಬರ ನಡುವಿನ ಪ್ರೀತಿ ನೋಡಿದ ಅಭಿಮಾನಿಗಳು ಮಾರು ಹೋಗಿದ್ದಾರೆ.
ಓದಿ: ಹೊಸವರ್ಷಕ್ಕೆ ಸಿಹಿ ಸುದ್ದಿ ಹಂಚಿಕೊಂಡ ಸಂಜನಾ ಗಲ್ರಾನಿ: ಶೀಘ್ರದಲ್ಲೇ ಮನೆಗೆ ಹೊಸ ಅತಿಥಿ ಆಗಮನ
ಹೌದು, ಹೊಸ ವರ್ಷದ ದಿನ ಶನಿವಾರ ರಾತ್ರಿ ವಿಕ್ಕಿ- ಕತ್ರಿನಾ ಮುಂಬೈ ಏರ್ಪೋರ್ಟ್ನಲ್ಲಿ ಕಾಣಿಸಿಕೊಂಡಿದ್ದಾರೆ. ವಿಕ್ಕಿ ಅವರನ್ನು ಡ್ರಾಪ್ ಮಾಡಲು ಸ್ವತಃ ಕತ್ರಿನಾ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾರೆ. ಇಬ್ಬರೂ ತಮ್ಮ ಕಾರಿನಿಂದ ಹೊರಡುವ ಮುನ್ನ ಪ್ರೀತಿಯ ಅಪ್ಪುಗೆ ಕೊಟ್ಟು, ತಾತ್ಕಾಲಿಕ ವಿದಾಯ ಹೇಳಿದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದ್ದು, ಅಭಿಮಾನಿಗಳ ಮನಗೆದ್ದಿದೆ.
ಕೋವಿಡ್ ವೈರಸ್ ಆತಂಕ ಉಂಟಾಗಿರುವ ಹಿನ್ನೆಲೆ ಕತ್ರಿನಾ ಮಾಸ್ಕ್ ಧರಿಸಿ, ಕಿತ್ತಳೆ ಬಣ್ಣದ ನೈಟ್ಸೂಟ್ನಲ್ಲಿ ಮಿಂಚಿದರು. ವಿಕ್ಕಿ ಡೆನಿಮ್ ಜೀನ್ಸ್ ಜೊತೆಗೆ ಕಂದು ಬಣ್ಣದ ಸ್ವೆಟ್‌ಶರ್ಟ್ ಧರಿಸಿದ್ದರು.