ಅಭಿಮಾನಿಗಳಿಂದ ಪ್ರೀತಿಯಿಂದ 'ಕ್ಯಾಟ್' ಎಂದೇ ಕರೆಸಿಕೊಳ್ಳುವ ಕತ್ರೀನಾ ಕೈಫ್ಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಮೆಚ್ಚಿನ ನಟಿಯ ಹುಟ್ಟುಹಬ್ಬಕ್ಕೆ ಅಭಿಮಾನಿಗಳು, ಸ್ನೇಹಿತರು, ಬಾಲಿವುಡ್ ಮಂದಿ ಶುಭ ಕೋರಿದ್ದಾರೆ.
- View this post on Instagram
I mean u gotta respect the earnest posing in front of the forest wallpaper 😌😇#tbt #childhoodmemories
">
1983 ಜುಲೈ 16 ರಂದು ಕತ್ರೀನಾ ಹಾಂಕಾಂಗ್ನಲ್ಲಿ ಜನಿಸಿದರು. ತಂದೆ ಮೊಹಮ್ಮದ್ ಕೈಫ್ ಅಪ್ಪಟ ಕಾಶ್ಮೀರ ಮುಸಲ್ಮಾನರು. ತಾಯಿ ಸುಸಾನ್ ಬ್ರಿಟನ್ ಮೂಲದ ಕ್ರೈಸ್ತ ಕುಟುಂಬಕ್ಕೆ ಸೇರಿದವರು. ಕತ್ರೀನಾಗೆ ಮೂವರು ಅಕ್ಕಂದಿರು ಹಾಗೂ ಮೂವರು ತಂಗಿಯರಿದ್ದಾರೆ. ಕತ್ರೀನಾ ಚಿಕ್ಕವರಿರುವಾಗಲೇ ಅವರ ತಂದೆ-ತಾಯಿ ವಿಚ್ಚೇಧನ ಪಡೆದು ದೂರವಾದರು. ಅಂದಿನಿಂದ ತಾಯಿಯೊಂದಿಗೆ ಬಂದು ಇಂಗ್ಲೆಂಡ್ನಲ್ಲಿ ನೆಲೆಸಿದರು ಕತ್ರೀನಾ. ಮನೆಯಲ್ಲಿನ ಸಂಕಷ್ಟದ ಪರಿಸ್ಥಿತಿಯಿಂದ ಕಾಲೇಜು ಓದಲು ಆಗದ ಕತ್ರೀನಾ 14ನೇ ವಯಸ್ಸಿಗೆ ಮಾಡೆಲ್ ವೃತ್ತಿ ಆರಂಭಿಸಿದರು.
- " class="align-text-top noRightClick twitterSection" data="
">
ಕಾರ್ಯಕ್ರಮವೊಂದರಲ್ಲಿ ಕೈಝಾದ್ ಗುಸ್ತಾದ್ ಕಣ್ಣಿಗೆ ಬಿದ್ದ ಕತ್ರೀನಾ ಅವರನ್ನು 'ಬೂಮ್' ಚಿತ್ರದ ನಟನೆಗಾಗಿ ಆಹ್ವಾನಿಸಿದರು. 2003 ರಿಂದ ಕತ್ರೀನಾ ಬಾಲಿವುಡ್ನಲ್ಲಿ ತಮ್ಮ ಕರಿಯರ್ ಆರಂಭಿಸಿದರು. ಹಿಂದಿ ಮಾತನಾಡಲು ಬರದ ಕತ್ರೀನಾಗೆ ಸಲ್ಮಾನ್ ಖಾನ್, ಅಕ್ಷಯ್ ಖಾನ್ ನೆರವಾದರು. ಸರ್ಕಾರ್, ರೇಸ್, ರಾಜ್ನೀತಿ, ಅಗ್ನಿಪಥ್, ಏಕ್ ಥಾ ಟೈಗರ್, ಜಬ್ ತಕ್ ಹೆ ಜಾನ್, ಟೈಗರ್ ಜಿಂದಾ ಹೈ, ಜೀರೋ, ಭಾರತ್ ಸೇರಿ ಬಹಳಷ್ಟು ಸಿನಿಮಾಗಳಲ್ಲಿ ಕತ್ರೀನಾ ನಟಿಸಿದ್ದಾರೆ. ತೆಲುಗು, ತಮಿಳು, ಮಲಯಾಳಂ ಸಿನಿಮಾಗಳಲ್ಲೂ ಅವರು ನಟಿಸಿದ್ದಾರೆ.
- " class="align-text-top noRightClick twitterSection" data="
">
ವಿದ್ಯೆ ಸಂಪಾದಿಸದಿದ್ದರೂ ಕತ್ರೀನಾ ಈಗ ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಕ್ಯಾಟ್ ಸದ್ಯಕ್ಕೆ ಸೂರ್ಯವಂಶಿ, ರಾಜ್ನೀತಿ-2, ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ.