ETV Bharat / sitara

ಕಾಮಿಡಿ-ಥ್ರಿಲ್ಲರ್ 'ಭೂಲ್ ಭುಲಯ್ಯ 2' ಬಿಡುಗಡೆಗೆ ದಿನಾಂಕ ಫಿಕ್ಸ್​​​​​​​ - Bhool Bhulaiyaa 2 release on November 19

ಟಿ-ಸೀರಿಸ್ ಹಾಗೂ ಸಿನಿ 1 ಸ್ಟುಡಿಯೋ ಬ್ಯಾನರ್ ಮೂಲಕ ಅನೀಸ್ ಬಜ್ಮಿ ನಿರ್ದೇಶನದಲ್ಲಿ ತಯಾರಾಗುತ್ತಿರುವ 'ಭೂಲ್ ಭುಲಯ್ಯ 2' ಸಿನಿಮಾ ಇದೇ ವರ್ಷ ನವೆಂಬರ್ 19 ರಂದು ಬಿಡುಡೆಯಾಗಲಿದೆ. ಚಿತ್ರದಲ್ಲಿ ಕಾರ್ತಿಕ್ ಆರ್ಯನ್ ಹಾಗೂ ಕೈರಾ ಅಡ್ವಾಣಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

Bhool Bhulaiyaa 2
'ಭೂಲ್ ಭುಲಯ್ಯ 2'
author img

By

Published : Feb 22, 2021, 1:38 PM IST

ಕಾರ್ತಿಕ್ ಆರ್ಯನ್ ಹಾಗೂ ಕೈರಾ ಅಡ್ವಾಣಿ ನಟಿಸಿರುವ 'ಭೂಲ್ ಭುಲಯ್ಯ 2' ಸಿನಿಮಾ ಬಿಡುಗಡೆಗೆ ಚಿತ್ರತಂಡ ದಿನಾಂಕ ನಿಗದಿಪಡಿಸಿದೆ. ಮೊದಲ ಸಿನಿಮಾದಲ್ಲಿ ನಟಿಸಿರುವ ಕಲಾವಿದರು ಈ ಚಿತ್ರದಲ್ಲಿ ನಟಿಸುತ್ತಿಲ್ಲ. ನವೆಂಬರ್ 19 ರಂದು ಚಿತ್ರವನ್ನು ಬಿಡುಗಡೆ ಮಾಡಲಿದ್ದೇವೆ ಎಂದು ಚಿತ್ರತಂಡ ಅಧಿಕೃತವಾಗಿ ಪ್ರಕಟಿಸಿದೆ.

ಇದನ್ನೂ ಓದಿ: ಕುಕ್ಕೆ ಸುಬ್ರಹ್ಮಣ್ಯಕ್ಕೆ ಚೆಲುವಿನ ಚಿತ್ತಾರದ ಬೆಡಗಿ ಅಮೂಲ್ಯ ಭೇಟಿ

'ಭೂಲ್ ಭುಲಯ್ಯ 2' ಚಿತ್ರವನ್ನು ಟಿ-ಸೀರೀಸ್ ಹಾಗೂ ಸಿನಿ 1 ಸ್ಟುಡಿಯೋ ಬ್ಯಾನರ್ ಅಡಿಯಲ್ಲಿ ನಿರ್ಮಾಪಕ ಭೂಷಣ್ ಕುಮಾರ್, ಮುರದ್ ಖೇತಾನಿ ಹಾಗೂ ಕೃಷ್ಣ ಕುಮಾರ್ ನಿರ್ಮಿಸುತ್ತಿದ್ದು ತಮ್ಮ ಟಿ -ಸೀರೀಸ್ ಅಧಿಕೃತ ಟ್ವಿಟ್ಟರ್ ಅಕೌಂಟ್​ನಲ್ಲಿ ಸಿನಿಮಾ ಬಿಡುಗಡೆ ದಿನಾಂಕವನ್ನು ಪ್ರಕಟಿಸಿದೆ. ಕಾಮಿಡಿ-ಸೈಕಲಾಜಿಕಲ್-ಥ್ರಿಲ್ಲರ್ ಕಥಾಹಂದರವುಳ್ಳ ಈ ಸಿನಿಮಾವನ್ನು ಅನೀಸ್ ಬಜ್ಮಿ ನಿರ್ದೇಶಿಸಿದ್ದಾರೆ. 'ಭೂಲ್ ಭುಲಯ್ಯ ' ಮೊದಲ ಭಾಗ 2007 ರಲ್ಲಿ ಬಿಡುಗಡೆಯಾಗಿತ್ತು. ಈ ಚಿತ್ರ ಯಶಸ್ವಿಯಾದ ಖುಷಿಗೆ ಚಿತ್ರತಂಡ ಎರಡನೇ ಭಾಗ ಮಾಡಲು ನಿರ್ಧರಿಸಿ ಈಗಾಗಲೇ ಚಿತ್ರೀಕರಣ ನಡೆಯುತ್ತಿದೆ. ಈ ಸಿನಿಮಾ ವಿಭಿನ್ನ ಕಲಾವಿದರು ಹಾಗೂ ವಿಭಿನ್ನ ಕಥೆಯನ್ನೊಂದಿದೆ. ಕಾರ್ತಿಕ್ ಕೈರಾ ಅಡ್ವಾಣಿ, ಟಬು ಹಾಗೂ ಇನ್ನಿತರರು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಅಕ್ಷಯ್ ಕುಮಾರ್, ಶೈನಿ ಅಹುಜಾ, ವಿದ್ಯಾ ಬಾಲನ್, ಅಮಿಷಾ ಪಾಟೀಲ್ ಮೊದಲ ಭಾಗದಲ್ಲಿ ನಟಿಸಿದ್ದರು. ಮೊದಲ ಭಾಗದ 2 ಹಾಡುಗಳನ್ನು ಈ ಚಿತ್ರದಲ್ಲಿ ಮತ್ತೆ ಬಳಸಿಕೊಳ್ಳಲಾಗುತ್ತಿದೆ ಎಂದು ನಿರ್ದೇಶಕ ಅನೀಸ್ ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.