ಮುಂಬೈ: ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್ ಸದ್ಯ ಮಾಲ್ಡೀವ್ಸ್ನಲ್ಲಿ ಕುಟುಂಬದ ಜತೆ ಸಂತಸದಿಂದ ದಿನಗಳನ್ನು ಕಳೆಯುತ್ತಿದ್ದಾರೆ. ಪತಿ ಸೈಫ್ ಅಲಿ ಖಾನ್ರ ಹುಟ್ಟುಹಬ್ಬವನ್ನೂ ಅಲ್ಲೇ ಆಚರಿಸಿರುವ ಕರೀನಾ, ಕುಟುಂಬದೊಂದಿಗೆ ತೆಗೆಸಿಕೊಂಡ ಚಿತ್ರಗಳನ್ನು ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ಇನ್ಸ್ಟಾದಲ್ಲಿ ಮಗ ಜಹಾಂಗೀರ್ ತನ್ನ ಎದೆ ಮೇಲೆ ನಿದ್ರೆಗೆ ಜಾರಿರುವ ಫೋಟೋವೊಂದನ್ನು ಕರೀನಾ ಕಪೂರ್ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: Video : ಪಾಪರಾಜಿಗಳ ಕ್ಯಾಮೆರಾದಲ್ಲಿ ಡಿಪ್ಪಿ ಸೆರೆ ಸಿಕ್ಕಿದ್ದು ಹೀಗೆ..
ಮತ್ತೊಂದು ಫೋಟೋದಲ್ಲಿ ಕಪ್ಪು ಬಣ್ಣದ ಈಜುಡುಗೆಯಲ್ಲಿ ಮಿಂಚುತ್ತಿರುವ ಕರೀನಾ, ಬಿಸಿಲಿಗೆ ಮುಖ ಮಾಸಿರುವುದನ್ನೂ ಕಾಣಿಸುತ್ತಾ ಸೆಲ್ಫಿ ತೆಗೆದು ಹಂಚಿಕೊಂಡಿದ್ದಾರೆ. ಜೊತೆಗೆ ಅದಕ್ಕೆ ‘ಸೆಲ್ಫಿ ಸಿರೀಸ್ ಕಂಟಿನ್ಯೂಯಸ್’ ಎಂದು ಶೀರ್ಷಿಕೆ ಕೊಟ್ಟಿದ್ದಾರೆ.