ಮುಂಬೈ: ಬಾಲಿವುಡ್ ನಟಿ ಸೋಹಾ ಅಲಿ ಖಾನ್ ಮತ್ತು ಕುನಾಲ್ ಕೆಮ್ಮು ದಂಪತಿ ಪುತ್ರಿ ಇನಾಯಾ ಹುಟ್ಟುಹಬ್ಬದ ಸಮಾರಂಭದಲ್ಲಿ ನಟಿ ಕರೀನಾ ಕಪೂರ್ ಖಾನ್ ತಮ್ಮ ಇಬ್ಬರು ಪುತ್ರರೊಂದಿಗೆ ಪಾಲ್ಗೊಂಡಿದ್ದರು.
ಸೋಹಾ ಅಲಿ ಖಾನ್ ಪುತ್ರಿ ಇನಾಯಾಳ ನಾಲ್ಕನೇ ವರ್ಷದ ಬರ್ತ್ ಡೇ ಪಾರ್ಟಿಗೆ ಅನೇಕರಿಗೆ ಆಹ್ವಾನ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಕರೀನಾ ಪುತ್ರರಾದ ತೈಮೂರ್ ಅಲಿ ಖಾನ್ ಮತ್ತು ಜಹಾಂಗೀರ್ ಅಲಿ ಖಾನ್ರೊಂದಿಗೆ ಆಗಮಿಸಿದ್ದರು. ಈ ವೇಳೆ ಸೈಫ್ ಅಲಿ ಖಾನ್ ಮಗ ಇಬ್ರಾಹಿಂ ಕೂಡ ಪಾರ್ಟಿಯಲ್ಲಿ ಕಂಡು ಬಂದರು.
ಗುಲಾಬಿ ಬಣ್ಣದ ಕುರ್ತಾ ಪೈಜಾಮದಲ್ಲಿ ಕರೀನಾ ಹಾಗೂ ತೈಮೂರು ಕ್ಯಾಮೆರಾಗೆ ಪೋಸ್ ನೀಡಿದರು. ಸದ್ಯ ಕರೀನಾ ಅಮೀರ್ ಖಾನ್ ಮುಂದಿನ ಚಿತ್ರ ಲಾಲ್ ಸಿಂಗ್ ಚಡ್ಡಾ ಸಿನಿಮಾದಲ್ಲಿ ನಟಿಸುತ್ತಿದ್ದು, ಚಿತ್ರೀಕರಣ ನಡೆಯುತ್ತಿದೆ.
ಇದನ್ನೂ ಓದಿ: ಬ್ಲ್ಯಾಕ್ ಬಿಕಿನಿಯಲ್ಲಿ ಮೌನಿ ರಾಯ್ ಪೋಸ್: ಹಾಟ್ ಲುಕ್ಗೆ ನೆಟ್ಟಿಗರು ಫಿದಾ