ETV Bharat / sitara

ಸುಶಾಂತ್ ಆತ್ಮಹತ್ಯೆ ಪ್ರಕರಣ...ಮತ್ತೊಂದು ವಿಡಿಯೋ ಬಿಡುಗಡೆ ಮಾಡಿದ ಕಂಗನಾ ರಣಾವತ್ - Bollywood actor Sushant Singh Rajput

ಬಾಲಿವುಡ್ ನಟಿ ಕಂಗನಾ ರಣಾವತ್ ಕೆಲವೊಂದು ಮಾಧ್ಯಮಗಳ ವಿರುದ್ಧ ಕಿಡಿ ಕಾರಿದ್ದಾರೆ. ಸುಶಾಂತ್ ಸಿಂಗ್ ಅವರ ಬಗ್ಗೆ ಕೆಲವೊಂದು ಪತ್ರಿಕೆಗಳು ಅವಹೇಳನಾಕಾರಿ ಲೇಖನಗಳನ್ನು ಬರೆದಿದ್ದು ಇದು ಕೂಡಾ ಸುಶಾಂತ್ ಅವರ ಮನಸ್ಸಿಗೆ ಬಹಳ ಘಾಸಿಯಾಗಿತ್ತು ಎಂದು ಆರೋಪಿಸಿದ್ದಾರೆ.

Kangana about Sushant death
ಮಾಧ್ಯಮಗಳ ಬಗ್ಗೆ ಕಂಗನಾ ಗರಂ
author img

By

Published : Jun 20, 2020, 12:01 PM IST

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಮಾಡಿಕೊಂಡ ನಂತರ ಅವರ ಸಾವಿನ ಬಗ್ಗೆ ದೇಶಾದ್ಯಂತ ಚರ್ಚೆಯಾಗುತ್ತಿದೆ. ಕೆಲವರು ಆತ ಖಿನ್ನತೆಯಿಂದ ಬಳಲುತ್ತಿದ್ದರಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದರೆ ಮತ್ತೆ ಕೆಲವರು ಆತನನ್ನು ಕೆಲವರು ಉದ್ದೇಶಪೂರ್ವಕವಾಗಿ ಆತ್ಮಹತ್ಯೆ ಮಾಡಿಕೊಳ್ಳುವಂತೆ ಪ್ರಚೋದಿಸಿದ್ದಾರೆ ಎನ್ನುತ್ತಿದ್ದಾರೆ.

ನಟಿ ಕಂಗನಾ ರಣಾವತ್ ಕೂಡಾ ಸುಶಾಂತ್ ಅವರದ್ದು ಪೂರ್ವ ಯೋಜಿತ ಕೊಲೆ ಎಂದು ಆರೋಪ ಮಾಡಿದ್ದರು. ಇದೀಗ ಕಂಗನಾ ರಣಾವತ್ ಮತ್ತೊಂದು ವಿಡಿಯೋವನ್ನು ಬಿಡುಗಡೆ ಮಾಡಿದ್ದಾರೆ. "ಸುಶಾಂತ್ ಸಿಂಗ್ ರಜಪೂತ್ ಸಾವಿನ ನಂತರ ಎಷ್ಟೋ ವಿಚಾರಗಳು ಹೊರಬರುತ್ತಿವೆ. ಚಿತ್ರರಂಗದ ಇತ್ತೀಚಿನ ಬೆಳವಣಿಗೆ ವಿಚಾರದಲ್ಲಿ ಸುಶಾಂತ್ ಸಿಂಗ್ ಬಹಳ ಚಿಂತೆ ಮಾಡುತ್ತಿದ್ದರು ಎಂದು ಸುಶಾಂತ್ ಸಿಂಗ್ ತಂದೆ ಕೆ.ಕೆ. ಸಿಂಗ್ ಹೇಳಿದ್ದಾರೆ. ಸುಶಾಂತ್ ಅವರನ್ನು ಚಿತ್ರರಂಗಕ್ಕೆ ಪರಿಚಯಿಸಿದ ಅಭಿಷೇಕ್ ಸಿಂಗ್ ಕೂಡಾ ಚಿತ್ರರಂಗದಲ್ಲಿ ನಡೆಯುವ ವಿಚಾರಗಳು ದುರ್ಬಲ ಮನಸ್ಸುಗಳಿಗೆ ಹೇಗೆ ನೋವು ನೀಡುತ್ತದೆ ಎಂಬುದನ್ನು ತಿಳಿಸಿದ್ದರು. ಅಲ್ಲದೆ ಸುಶಾಂತ್ ಗೆಳತಿ ಅಂಕಿತಾ ಲೋಕಂಡೆ ಕೂಡಾ ಸುಶಾಂತ್ ಅವರು ಬಾಲಿವುಡ್​​​ನಲ್ಲಿ ಅನುಭವಿಸಿದ ಅಪಮಾನಗಳು ಹಾಗೂ ಅವರಿಗೆ ಹೇಗೆ ಅಗೌರವ ನೀಡಲಾಗುತ್ತಿತ್ತು ಎಂಬ ವಿಚಾರವನ್ನು ತಿಳಿಸಿದ್ದರು."

"ಇದರೊಂದಿಗೆ ಕೆಲವೊಂದು ಮಾಧ್ಯಮಗಳು ಕೂಡಾ ಸುಶಾಂತ್ ಬಗ್ಗೆ ಆಧಾರರಹಿತ, ಅವಹೇಳನಾಕಾರಿ ಲೇಖನಗಳನ್ನು ಬರೆದು ಅವರ ಮನಸ್ಸನ್ನು ಮತ್ತಷ್ಟು ದುರ್ಬಲಗೊಳ್ಳುವಂತೆ ಮಾಡಿದ್ದವು. ಈ ಮೂಲಕ ಮಾಧ್ಯಮಗಳು ಕೂಡಾ ಮೂವಿ ಮಾಫಿಯಾಗೆ ಸಹಾಯ ಮಾಡಿವೆ. ಹಾವೂ ಸಾಯಬಾರದು ಕೋಲೂ ಮುರಿಯಬಾರದು ಎನ್ನುವಂತೆ ಕೆಲವೊಂದು ಮಾಧ್ಯಮಗಳು ಯಾವುದೇ ನಟ-ನಟಿಯ ಬಗ್ಗೆ ಬರೆಯುವಾಗ ಅವರ ಹೆಸರನ್ನು ಬರೆಯುವುದಿಲ್ಲ. ಇದರಿಂದ ಆ ಮಾಧ್ಯಮಗಳ ಮೇಲೆ ಮೊಕದ್ದಮೆ ಹೂಡಲು ಕೂಡಾ ಸಾಧ್ಯವಿಲ್ಲ. ಉದಾಹರಣೆಗೆ ನನ್ನ ಬಗ್ಗೆ ಏನಾದರೂ ಬರೆಯಬೇಕೆಂದರೆ ಬಾಲಿವುಡ್​​​ನ ಗುಂಗುರು ಕೂದಲಿನ ನಟಿ, ರಾಷ್ಟ್ರಪ್ರಶಸ್ತಿ ವಿಜೇತೆ, ಮನಾಲಿಯ ಹುಡುಗಿ ಎಂದೆಲ್ಲಾ ವಿವರ ಬರೆಯುತ್ತಾರೆಯೇ ವಿನ: ನನ್ನ ಹೆಸರನ್ನು ಬರೆಯುವುದಿಲ್ಲ."

"ಅದೇ ರೀತಿ ಸುಶಾಂತ್ ಅವರ ಬಗ್ಗೆಯೂ ಕೆಲವೊಂದು ಮಾಧ್ಯಮಗಳು ಕೆಟ್ಟದಾಗಿ ಬಿಂಬಿಸಿದ್ದವು. ಸುಶಾಂತ್ ಸಿಂಗ್ ರಜಪೂತ್ ನೋಡಲು ಟ್ರಕ್ ಡ್ರೈವರ್​ನಂತೆ ಕಾಣುತ್ತಾರೆ ಎಂದು ಒಂದು ಮಾಧ್ಯಮ ಬರೆದರೆ ಮತ್ತೊಂದು ಮಾಧ್ಯಮ ಸುಶಾಂತ್ ಪಾರ್ಟಿಯೊಂದರಲ್ಲಿ ಕುಡಿದ ಅಮಲಿನಲ್ಲಿ ನಿರ್ದೇಶರೊಬ್ಬರ ತಲೆಗೆ ಬಾಟಲ್​​ನಲ್ಲಿ ಹೊಡೆದಿದ್ದರು ಎಂದು ಬರೆದಿದೆ. ಇನ್ನೊಂದು ಪತ್ರಿಕೆ ಸುಶಾಂತ್​ ತನ್ನ ಸಹನಟಿಯೊಬ್ಬರನ್ನು ಅತ್ಯಾಚಾರ ಮಾಡಿದ್ದು ಮಿ ಟೂ ಆರೋಪದ ಅಡಿಯಲ್ಲಿ ಆತ ಜೈಲಿಗೆ ಹೋಗುವ ಸಂಭವವಿದೆ ಎಂದು ಬರೆದಿತ್ತು. ಆದರೆ ಇದನ್ನೆಲ್ಲಾ ಉದ್ದೇಶಪೂರಕವಾಗಿ ಬರೆಯಲಾಗಿದೆಯೇ ಹೊರತು ಇಲ್ಲಿ ಬರೆದಿರುವುದು ಯಾವುದೂ ನಿಜವಲ್ಲ. ಈ ಲೇಖನಗಳಿಂದ ಕೂಡಾ ಸುಶಾಂತ್ ಬಹಳ ನೊಂದಿದ್ದರು" ಎಂದು ಕಂಗನಾ ರಣಾವತ್ ಆರೋಪಿಸಿದ್ದಾರೆ.

ನನ್ನ ಬಗ್ಗೆ ಕೂಡಾ ಇದೇ ರೀತಿ ಕೆಲವೊಂದು ಲೇಖನಗಳು ಪ್ರಕಟವಾಗಿದ್ದವು. ಇದಾದ ನಂತರ ನಾನು ಆ ಪತ್ರಕರ್ತರನ್ನು ಕರೆದು ಮಾತನಾಡಿದ್ದೆ. ಏನಾದರೂ ಬರೆಯಬೇಕು ಎಂದಾದಲ್ಲಿ ವಿಚಾರವನ್ನು ಸಂಪೂರ್ಣ ತಿಳಿದು, ಆಧಾರ ಇದ್ದರೆ ಮಾತ್ರ ಬರೆಯಿರಿ ಎಂದು ಅವರಿಗೆ ಎಚ್ಚರಿಕೆ ಕೂಡಾ ನೀಡಿದ್ದೆ. ಇದಾದ ಕೆಲವೇ ದಿನಗಳಲ್ಲಿ ಆ ನಾಲ್ವರು ಪತ್ರಕರ್ತರೂ ಸೇರಿ ನನ್ನ ಮೇಲೆ ಕತ್ತಿ ಮಸೆಯಲು ಆರಂಭಿಸಿದರು. ಎಲ್ಲರೂ ಸೇರಿ ಒಂದು ಗಿಲ್ಡ್ ರಚಿಸಿ ನನ್ನ ಸಿನಿಮಾಗಳನ್ನು ಬಹಿಷ್ಕರಿಸಲು ಆರಂಭಿಸಿದರು. ಇದರಿಂದ ನನ್ನ ಕೆಲವು ಸಿನಿಮಾಗಳು ಫ್ಲಾಪ್ ಆದವು" ಎಂದು ಕಂಗನಾ ಕೆಲವೊಂದು ಮಾಧ್ಯಮಗಳ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

ಪ್ರತಿದಿನ ನೀವು ಪತ್ರಿಕೆಯಲ್ಲಿ ಇದನ್ನೆಲ್ಲಾ ಓದುತ್ತೀರಿ ಹಾಗೂ ಟಿವಿ ಮಾಧ್ಯಮಗಳಲ್ಲಿ ನೋಡುತ್ತೀರಿ. ಆದರೆ ಈ ರೀತಿಯ ಕಾರ್ಯಕ್ರಮಗಳು ಹಾಗೂ ಲೇಖನಗಳು ಸ್ಟಾರ್ ಹೀರೋಗಳು, ಸ್ಟಾರ್​​ಗಳ ಮಕ್ಕಳ ಬಗ್ಗೆ ಏಕೆ ಬರೆಯುವುದಿಲ್ಲ ಎಂದು ಒಂದು ದಿನವಾದರೂ ಯೋಚಿಸಿದ್ದೀರಾ" ಎಂದು ಕಂಗನಾ ಜನರಿಗೆ ಪ್ರಶ್ನೆ ಮಾಡಿದ್ದಾರೆ. ಕಂಗನಾ ಈ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಷೇರ್ ಮಾಡಿಕೊಂಡಿದ್ದಾರೆ.

ಮತ್ತೊಂದೆಡೆ, ಸುಶಾಂತ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೂಲಂಕುಶವಾಗಿ ತನಿಖೆ ನಡೆಸಲಾಗುವುದು ಎಂದು ಮಹಾರಾಷ್ಟ್ರ ಗೃಹಸಚಿವ ಅನಿಲ್ ದೇಶ್​​​ಮುಖ್ ತಿಳಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಸುಶಾಂತ್ ಗೆಳತಿ ರಿಯಾ ಚಕ್ರವರ್ತಿ ಅವರ ಹೇಳಿಕೆ ಅನ್ವಯ ಸುಶಾಂತ್ ಅವರನ್ನು ರಿಜೆಕ್ಟ್ ಮಾಡಲಾಗಿದ್ದ ಹಾಗೂ ಅವರು ಒಪ್ಪಿಕೊಂಡಿದ್ದ ಹೊಸ ಸಿನಿಮಾಗಳ ನಿರ್ಮಾಪಕರನ್ನು ಸಂಪರ್ಕಿಸಿ ಸಂಪೂರ್ಣ ಮಾಹಿತಿಯನ್ನು ಪೊಲೀಸರು ಕಲೆ ಹಾಕುತ್ತಿದ್ದಾರೆ ಎನ್ನಲಾಗಿದೆ. ಸಂಸತ್​​ನಲ್ಲಿ ಕೂಡಾ ಸುಶಾಂತ್ ಆತ್ಮಹತ್ಯೆ ವಿಚಾರ ಚರ್ಚೆಯಾಗಿದ್ದು ಪೊಲೀಸರು ಯಾವುದೇ ಭಯವಿಲ್ಲದೆ ತಮ್ಮ ಕಾರ್ಯ ನಿರ್ವಹಿಸಲು ಬಿಜೆಪಿ ಸಂಸದ ನಿಶಿಕಾಂತ್ ದುಬೆ ಸೂಚಿಸಿದ್ದಾರೆ ಎನ್ನಲಾಗಿದೆ.

ಜೂನ್ 14 ರಂದು ಸುಶಾಂತ್ ಸಿಂಗ್ ರಜಪೂತ್ ದೇಹ ಮುಂಬೈನ ಬಾಂದ್ರಾದ ಅವರ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಜೂನ್ 15 ರಂದು ನಡೆದ ಅವರ ಅಂತ್ಯಕ್ರಿಯೆಯಲ್ಲಿ ಕೆಲವೇ ಕೆಲವು ಬಾಲಿವುಡ್ ಸ್ನೇಹಿತರು ಭಾಗಿಯಾಗಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.