ಮನಾಲಿ: ಸೋಷಿಯಲ್ ಮೀಡಿಯಾದಲ್ಲಿ ಪರ ಮತ್ತು ವಿರೊಧಿಗಳ ಬಣ ಕಟ್ಟಿಕೊಳ್ಳುವ ಬಾಲಿವುಡ್ ನಟಿ ಕಂಗನಾ ರಣಾವತ್ ಈಗ ಮನಾಲಿಯಲ್ಲಿ ತಮ್ಮ ಕುಟುಂಬದ ಸದಸ್ಯರೊಂದಿಗೆ ಕಾಲ ಕಳೆಯುತ್ತಿದ್ದಾರೆ. ಆಗಾಗ್ಗೆ ತಮ್ಮ ಅಭಿಪ್ರಾಯವನ್ನು ಬಹಿರಂಗವಾಗಿ ಹೇಳುವ ಮೂಲಕ ಸದಾ ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳುವ ಈ ಚೆಲುವೆ ಈಗ ಮತ್ತೆ ಅಂತಹದ್ದೇ ಕೆಲಸ ಮಾಡಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ ಹರಿದಾಡುವ ಕಂಗನಾಳ ಎರಡು ಪೋಸ್ಟ್ಗಳು ಮತ್ತೆ ಎಡವಟ್ಟಿಗೆ ದಾರಿ ಮಾಡಿಕೊಟ್ಟಿವೆ ಎನ್ನಲಾಗುತ್ತಿದೆ.
ಇದನ್ನೂ ಓದಿ: 'ನ್ಯಾಯ್; ದಿ ಜಸ್ಟಿಸ್' ಸುಶಾಂತ್ ಜೀವನಾಧಾರಿತ ಚಿತ್ರ ನಾಳೆಯೇ ಬಿಡುಗಡೆ
ತನ್ನದೇ ಎರಡು ಬೋಲ್ಡ್ ಪೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಕಂಗನಾ, ತನ್ನನ್ನು ತಾನೇ ಬಹಿಂಗವಾಗಿ ’ಹಾಟ್ ಸಂಘಿ’ (hot Sanghi) ಎಂದು ಬರೆದುಕೊಳ್ಳುವ ಮೂಲಕ ಟೀಕಾಕಾರರಿಗೆ ತಿರುಗೇಟು ನೀಡಿದ್ದಾಳೆ. ತನ್ನನ್ನು ಹಾಟ್ ಅಲ್ಲ ಎಂದು ಜರಿದವರಿಗೆ ಇದೇ ಉತ್ತರ ಎಂದು ಮತ್ತೊಂದು ಬಿಕಿನಿ ಫೋಟೋ ಹಾಕಿದ್ದಾರೆ. ಹಂಚಿಕೊಂಡಿರುವ ಎರಡೂ ಫೋಟೋಗಳು ಬೋಲ್ಡ್ ಆಗಿದ್ದು, ಅದಕ್ಕೆ ಈ ಶೀರ್ಷಿಕೆಗಳನ್ನು ಉಲ್ಲೇಖಿಸುವ ಮೂಲಕ ವಿರೋಧಿಗಳಿಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.
ಅವಿವೇಕತನದ ಕೆಲಸಕ್ಕೆ ಮುಂದಾಗುವುದು ಒಳ್ಳೆಯದಲ್ಲ. ಗೊತ್ತಿಲ್ಲದ ವ್ಯಕ್ತಿಗಳ ಬಗ್ಗೆ ಮಾತನಾಡುವುದು ಮೂರ್ಖತನ ಎಂದಿರುವ ಕಂಗನಾ ರಣಾವತ್, ತನ್ನಲ್ಲಿರುವ ಸೌಂದರ್ಯ ನಿಮಗೆ ಕಾಣಿಸದಿದ್ದರೆ ಹೇಗೆ ಎಂದು ಪ್ರಶ್ನಿಸುವ ಮೂಲಕ ಈ ಬೋಲ್ಡ್ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಓರ್ವ ಸ್ತ್ರೀ ಒಂದು ಚೌಕಟ್ಟಿನಲ್ಲಿರಬೇಕೆ ವಿನಃ ಅದನ್ನು ಮೀರುವಂತಹ ಕೆಲಸ ಮಾಡಬಾರದು ಎಂದು ಕೆಲವರು ಅದೇ ಸಾಮಾಜಿಕ ಜಾಲತಾಣದಲ್ಲಿ ಕಾಲೆಳೆದಿದ್ದಾರೆ.
ಇನ್ನು ಇಂತಹ ಟ್ವೀಟ್ ಮಾಡುವ ಮೂಲಕ ಆಗಾಗ್ಗೆ ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳುವ ಕಂಗನಾ ರಣಾವತ್ ವರ್ತನೆಯಿಂದ ಬೇರೆ ದಾರಿ ಇಲ್ಲದೇ ಅವರ ಟ್ವೀಟರ್ ಖಾತೆಯನ್ನು ಇತ್ತೀಚೆಗೆ ಅಮಾನತುಗೊಳಿಸಲಾಗಿದೆ.
ಇದನ್ನೂ ಓದಿ: ರಸ್ತೆ ಮೇಲೆ ಲ್ಯಾಂಡ್ ಆದ ವಿಮಾನ: ಅಚ್ಚರಿಯ ಅನುಭವ ಹಂಚಿಕೊಂಡ ಪ್ರೀತಿ ಜಿಂಟಾ
'ಪಶ್ಚಿಮ ಬಂಗಾಳದಲ್ಲಿ ಬಾಂಗ್ಲಾದೇಶಿ ಮತ್ತು ರೋಹಿಂಗ್ಯಾಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂದು ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆಯ ಫಲಿತಾಂಶದ ನಂತರ ಕಂಗನಾ ವಿವಾದಾತ್ಮಕ ಟ್ವೀಟ್ ಮಾಡಿದ್ದರು. ಅಲ್ಲದೇ ಮಾಹಿತಿಯ ಪ್ರಕಾರ ಹಿಂದೂಗಳು ಅಲ್ಲಿ ಬಹುಸಂಖ್ಯಾತರಾಗಿ ಉಳಿದಿಲ್ಲ ಎಂದು ಹೇಳುವುದಕ್ಕೆ ಯಾವುದೇ ಆಧಾರ ಬೇಕಿಲ್ಲ ಎಂದಿದ್ದರು. ಈ ತರಹದ ವಿವಾದಿತ ಟ್ವೀಟ್ಗಳ ನಂತರ ಅವರ ಖಾತೆಯನ್ನು ಅಮಾನತುಗೊಳಿಸಲಾಗಿದೆ.