ಹೈದರಾಬಾದ್: ಬಾಲಿವುಡ್ ನಟಿ ಕಂಗನಾ ರಣಾವತ್ ಜನ್ಮದಿನದಂದು ಅವರ ಬಹುನಿರೀಕ್ಷಿತ ಚಿತ್ರ ತಲೈವಿಯ ಟ್ರೈಲರ್ ರಿಲೀಸ್ ಆಗಿದೆ. ಎ.ಎಲ್.ವಿಜಯ್ ನಿರ್ದೇಶನದ ತಲೈವಿ ತಮಿಳುನಾಡಿನ ದಿವಂಗತ ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ಜೀವನ ಕುರಿತು ತಯಾರಾದ ಸಿನಿಮಾ ಆಗಿದೆ.
ಈ ಟ್ರೇಲರ್ ಮನರಂಜನೆ ಎಂಬ ಉದ್ಯಮದಲ್ಲಿ ಜಯಲಲಿತಾ ಅವರ ಹೋರಾಟಗಳ ಒಂದು ನೋಟವನ್ನು ಹೊರಹಾಕುತ್ತದೆ. ಮತ್ತು ಅತ್ಯಂತ ಪ್ರಬಲ ಮತ್ತು ಅಪ್ರತಿಮ ಮಹಿಳಾ ರಾಜಕಾರಣಿಗಳಲ್ಲಿ ಒಬ್ಬರಾಗಲು ಅವರು ನಟಿಯಾಗಿ ಪಟ್ಟ ಹರಸಾಹಸದ ಬಗ್ಗೆಯೂ ಬೆಳಕು ಚೆಲ್ಲುತ್ತದೆ.
- " class="align-text-top noRightClick twitterSection" data="">
ಇನ್ನು ನಟಿ ಕಂಗನಾ ಈ ಸಿನಿಮಾದ ಜಯಲಲಿತಾ ಪಾತ್ರಕ್ಕಾಗಿ ಬರೋಬ್ಬರಿ 20 ಕೆಜಿ ತೂಕ ಹೆಚ್ಚಿಸಿಕೊಂಡಿದ್ದಾರೆ. ತಲೈವಿ ಟ್ರೈಲರ್ ಉತ್ತಮವಾಗಿ ಮೂಡಿ ಬಂದಿದ್ದು, ಚಿತ್ರ ಗೆಲ್ಲುವ ಭರವಸೆ ಮೂಡಿಸಿದೆ.
ಈ ಸಿನಿಮಾ ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಇದೇ ಏಪ್ರಿಲ್ 23 ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ತಲೈವಿಯನ್ನು ಎ.ಎಲ್.ವಿಜಯ್ ನಿರ್ದೇಶಿಸಿದ್ದು, ಇದರಲ್ಲಿ ಅರವಿಂದ ಸ್ವಾಮಿ, ಪ್ರಕಾಶ್ ರಾಜ್, ಮಾಧು ಮತ್ತು ಭಾಗ್ಯಶ್ರೀ ಪ್ರಮುಖ ಪಾತ್ರಗಳಲ್ಲಿದ್ದಾರೆ.