ಮುಂಬೈ (ಮಹಾರಾಷ್ಟ್ರ): ಮುಂಬರುವ ವೆಬ್ ಸರಣಿ "ದಿ ಫ್ಯಾಮಿಲಿ ಮ್ಯಾನ್ 2"ನ ಟ್ರೈಲರ್ನಲ್ಲಿ ದಕ್ಷಿಣದ ತಾರೆ ಸಮಂತಾ ಅಕ್ಕಿನೇನಿ ಅವರನ್ನು ಕಂಗನಾ ರಣಾವತ್ ಹೊಗಳಿದ್ದು, ಈ ಕುರಿತು ಇನ್ಸ್ಟಾಗ್ರಾಮ್ನಲ್ಲಿ ಬರೆದಿದ್ದಾರೆ.
ನಿನ್ನೆ ದಿ ಫ್ಯಾಮಿಲಿ ಮ್ಯಾನ್ 2ನ ಟ್ರೈಲರ್ ಬಿಡುಗಡೆಯಾಗಿದೆ. "ಈ ಹುಡುಗಿ ನನ್ನ ಹೃದಯ ಗೆದ್ದಿದ್ದಾಳೆ" ಎಂದು ಸಮಂತಾಳನ್ನು ಒಳಗೊಂಡ ಟ್ರೈಲರ್‌ನ ಸ್ನ್ಯಾಪ್‌ಶಾಟ್ ಹಂಚಿಕೊಳ್ಳುತ್ತಾ ಕಂಗನಾ ಬರೆದಿದ್ದಾರೆ.

ಜನಪ್ರಿಯ ವೆಬ್ ಸರಣಿ "ದಿ ಫ್ಯಾಮಿಲಿ ಮ್ಯಾನ್"ನ ಎರಡನೇ ಸೀಸನ್ ಜೂನ್ 4ರಂದು ಅಮೆಜಾನ್ ಪ್ರೈಮ್ನಲ್ಲಿ ರಿಲೀಸ್ ಆಗಲಿದೆ.
ಮನೋಜ್ ಬಾಜಪೇಯಿ, ಪ್ರಿಯಮಣಿ ರಾಜ್, ಶರೀಬ್ ಹಶ್ಮಿ, ಸೀಮಾ ಬಿಸ್ವಾಸ್, ದರ್ಶನ್ ಕುಮಾರ್, ಶರದ್ ಕೇಲ್ಕರ್, ಸನ್ನಿ ಹಿಂದೂಜಾ ಮತ್ತು ಶ್ರೇಯಾ ಧನ್ವಂತರಿ ಅವರು ಸೀರೀಸ್ನಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.