ETV Bharat / sitara

'ದಿ ಕಾಶ್ಮೀರ್​ ಫೈಲ್ಸ್​​' ಚಿತ್ರದಿಂದ ಬಾಲಿವುಡ್ ಮಾಡಿದ ಎಲ್ಲ ಪಾಪ ಕಳೆದಿದೆ: ಕಂಗನಾ ರಣಾವತ್​ - ದಿ ಕಾಶ್ಮೀರಿ ಫೈಲ್ಸ್​ ನೋಡಿದ ಕಂಗನಾ

'ದಿ ಕಾಶ್ಮೀರ್​ ಫೈಲ್ಸ್​' ಚಿತ್ರ ತೆರೆ ಕಾಣುವ ಮೂಲಕ ಬಾಲಿವುಡ್ ಮಾಡಿರುವ ಎಲ್ಲ ಪಾಪ ಕಳೆದಂತಾಗಿದೆ ಎಂದು ನಟಿ ಕಂಗನಾ ರಣಾವತ್​ ಹೇಳಿಕೆ ನೀಡಿದ್ದಾರೆ.

kangana ranaut on kashmir files
kangana ranaut on kashmir files
author img

By

Published : Mar 15, 2022, 9:04 PM IST

ಮುಂಬೈ(ಮಹಾರಾಷ್ಟ್ರ): 'ದಿ ಕಾಶ್ಮೀರ್​ ಫೈಲ್ಸ್'​ ಚಿತ್ರದ ಬಗ್ಗೆ ಎಲ್ಲೆಡೆಯಿಂದಲೂ ಮೆಚ್ಚುಗೆಯ ಮಾತು ಕೇಳಿ ಬರ್ತಿದ್ದು, ಈ ಸಿನಿಮಾ ವೀಕ್ಷಣೆ ಮಾಡಿರುವ ಬಹುತೇಕ ಎಲ್ಲರೂ ಚಿತ್ರತಂಡಕ್ಕೆ ಶಹಬ್ಬಾಸ್​​ಗಿರಿ ನೀಡಿದ್ದಾರೆ. ಇದೀಗ ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಕಂಗನಾ ರಣಾವತ್ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದು, ಚಿತ್ರವನ್ನ ಬೆಂಬಲಿಸಿದ್ದಾರೆ.

ಈ ಸಿನಿಮಾ ತೆರೆ ಕಾಣುವ ಮೂಲಕ ಬಾಲಿವುಡ್​ ಮಾಡಿರುವ ಎಲ್ಲ ಪಾಪ ಕಳೆದಂತಾಗಿದೆ. ಈ ಸಿನಿಮಾ ನಿರ್ಮಾಣ ಮಾಡಿರುವ ವಿವೇಕ್ ಅಗ್ನಿಹೋತ್ರಿ ಹಾಗೂ ಚಿತ್ರತಂಡಕ್ಕೆ ಅಭಿನಂದನೆಗಳು ಎಂದಿದ್ದಾರೆ. ಜೊತೆಗೆ ಈ ಚಿತ್ರವನ್ನ ಎಲ್ಲರೂ ಬೆಂಬಲಿಸಬೇಕು ಎಂಬ ಮಾತು ಹೇಳಿದ್ದಾರೆ.

ದಿ ಕಾಶ್ಮೀರ್​ ಫೈಲ್ಸ್​ ಸಿನಿಮಾ ವೀಕ್ಷಣೆ ಮಾಡಿದ ನಟಿ ಕಂಗನಾ ರಣಾವತ್​

ಚಿತ್ರ ವೀಕ್ಷಣೆ ಮಾಡಿದ ಬಳಿಕ ಮಾತನಾಡಿರುವ ಕಂಗನಾ ರಣಾವತ್​, ದಿ ಕಾಶ್ಮೀರ್​ ಫೈಲ್ಸ್​​ ಚಿತ್ರವನ್ನ ದೇಶದ ಪ್ರತಿಯೊಬ್ಬರು ಬೆಂಬಲಿಸಬೇಕು. ಇಂತಹ ಚಿತ್ರಗಳು ಹೆಚ್ಚೆಚ್ಚು ತೆರೆ ಕಾಣಬೇಕು ಎಂದಿರುವ ಅವರು, ಪ್ರತಿಯೊಬ್ಬರು ಇದನ್ನ ವೀಕ್ಷಣೆ ಮಾಡುವಂತೆ ಮನವಿ ಮಾಡಿದ್ದಾರೆ.

ಇದನ್ನೂ ಓದಿರಿ: 'ದಿ ಕಾಶ್ಮೀರ್​​ ಫೈಲ್ಸ್​​' ಸಿನಿಮಾ ವೀಕ್ಷಣೆಗೆ ಪೊಲೀಸರಿಗೆ ರಜೆ ನೀಡಿದ ಮಧ್ಯಪ್ರದೇಶ

ದಿ ಕಾಶ್ಮೀರ್​ ಫೈಲ್ಸ್​ ಚೆನ್ನಾಗಿ ಮೂಡಿ ಬಂದಿದ್ದು, ಇಂತಹ ಚಿತ್ರಗಳು ಆಸ್ಕರ್​ಗೆ ಹೋಗಬೇಕು. ಈ ಚಿತ್ರವನ್ನ ವೀಕ್ಷಣೆ ಮಾಡ್ತಿದ್ದ ವೇಳೆ ನಾನು ನಡುಗುತ್ತಿದೆ ಎಂದಿದ್ದಾರೆ.

ಮಾರ್ಚ್​​ 11ರಂದು ತೆರೆ ಕಂಡಿರುವ ಈ ಚಿತ್ರ ಈಗಾಗಲೇ 2 ಸಾವಿರಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಯಶಸ್ವಿಯಾಗಿ ಪ್ರದರ್ಶನ ಕಾಣ್ತಿದ್ದು, ಈಗಾಗಲೇ ₹40 ಕೋಟಿಗೂ ಅಧಿಕ ಗಳಿಕೆ ಮಾಡಿದೆ. ಈ ಚಿತ್ರಕ್ಕೆ ಕರ್ನಾಟಕ, ಗುಜರಾತ್​, ಮಧ್ಯಪ್ರದೇಶ ಸೇರಿದಂತೆ ಅನೇಕ ರಾಜ್ಯಗಳು ತೆರಿಗೆ ಸಹ ಘೋಷಣೆ ಮಾಡಿವೆ. ವಿವೇಕ್​ ಅಗ್ನಿಹೋತ್ರಿ ನಿರ್ದೇಶನ ಮಾಡಿರುವ ದಿ ಕಾಶ್ಮೀರ್​ ಫೈಲ್ಸ್​ ಚಿತ್ರದಲ್ಲಿ 1990ರಲ್ಲಿ ಕಾಶ್ಮೀರಿ ಪಂಡಿತರ ಮೇಲೆ ನಡೆದ ದೌರ್ಜನ್ಯದ ವಿಷಯವಾಗಿದೆ. ಈ ಚಿತ್ರಕ್ಕೆ ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ ಸಹ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.