ಮುಂಬೈ: ಜೀವ ಬೆದರಿಕೆ ಎದುರಿಸುತ್ತಿರುವ ಬಾಲಿವುಡ್ ನಟಿ ಕಂಗನಾ ರನೌತ್ಗೆ ಸಂಪೂರ್ಣ ಭದ್ರತೆ ಒದಗಿಸುವುದಾಗಿ ಹಿಮಾಚಲ ಪ್ರದೇಶ ಸರ್ಕಾರ ಭರವಸೆ ನೀಡಿದ ಬೆನ್ನಲ್ಲೇ ಕೇಂದ್ರ ಸರ್ಕಾರ ‘Y’ ಪ್ಲಸ್ ಲೆವೆಲ್ ಭದ್ರತೆ ನೀಡಲು ಒಪ್ಪಿಗೆ ನೀಡಿದೆ.
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ವಿಚಾರ, ಡ್ರಗ್ಸ್ ಹಾಗೂ ಮೂವಿ ಮಾಫಿಯಾ ವಿರುದ್ಧ ದನಿ ಎತ್ತಿರುವ ನಟಿ ಕಂಗನಾ ರನೌತ್ಗೆ ಜೀವ ಬೆದರಿಕೆ ಆರೋಪ ಕೇಳಿ ಬಂದಿತ್ತು. ನಾನು ಮನಾಲಿಯಿಂದ ಮುಂಬೈಗೆ ಹಿಂದಿರುಗದಂತೆ ಶಿವಸೇನೆ ನಾಯಕ ಸಂಜಯ್ ರಾವತ್ ಬಹಿರಂಗವಾಗಿ ಬೆದರಿಕೆ ಹಾಕಿದ್ದಾರೆ ಎಂದು ಕಂಗನಾ ಟ್ವೀಟ್ ಮಾಡಿದ್ದರು. ಈ ಸಂಬಂಧ ಕಂಗನಾ ತಂದೆ ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಜೈ ರಾಮ್ ಠಾಕೂರ್ ಪತ್ರ ಬರೆದು, ತಮ್ಮ ಮಗಳಿಗೆ ಭದ್ರತೆ ಒದಗಿಸುವಂತೆ ಕೋರಿದ್ದರು. ಮನವಿಗೆ ಸ್ಪಂದಿಸಿದ್ದ ಹಿಮಾಚಲ ಪ್ರದೇಶ ಸರ್ಕಾರ ಕಂಗನಾಗೆ ಸಂಪೂರ್ಣ ಭದ್ರತೆ ಒದಗಿಸುವುದಾಗಿ ಭರವಸೆ ನೀಡಿತ್ತು.
-
ये प्रमाण है की अब किसी देशभक्त आवाज़ को कोई फ़ासीवादी नहीं कुचल सकेगा,मैं @AmitShah जी की आभारी हूँ वो चाहते तो हालातों के चलते मुझे कुछ दिन बाद मुंबई जाने की सलाह देते मगर उन्होंने भारत की एक बेटी के वचनों का मान रखा, हमारे स्वाभिमान और आत्मसम्मान की लाज रखी, जय हिंद 🙏 https://t.co/VSbZMG66LT
— Kangana Ranaut (@KanganaTeam) September 7, 2020 " class="align-text-top noRightClick twitterSection" data="
">ये प्रमाण है की अब किसी देशभक्त आवाज़ को कोई फ़ासीवादी नहीं कुचल सकेगा,मैं @AmitShah जी की आभारी हूँ वो चाहते तो हालातों के चलते मुझे कुछ दिन बाद मुंबई जाने की सलाह देते मगर उन्होंने भारत की एक बेटी के वचनों का मान रखा, हमारे स्वाभिमान और आत्मसम्मान की लाज रखी, जय हिंद 🙏 https://t.co/VSbZMG66LT
— Kangana Ranaut (@KanganaTeam) September 7, 2020ये प्रमाण है की अब किसी देशभक्त आवाज़ को कोई फ़ासीवादी नहीं कुचल सकेगा,मैं @AmitShah जी की आभारी हूँ वो चाहते तो हालातों के चलते मुझे कुछ दिन बाद मुंबई जाने की सलाह देते मगर उन्होंने भारत की एक बेटी के वचनों का मान रखा, हमारे स्वाभिमान और आत्मसम्मान की लाज रखी, जय हिंद 🙏 https://t.co/VSbZMG66LT
— Kangana Ranaut (@KanganaTeam) September 7, 2020
ಇದೀಗ ‘Y’ ಪ್ಲಸ್ ಲೆವೆಲ್ ಭದ್ರತೆ ನೀಡಲು ಕೇಂದ್ರ ಒಪ್ಪಿಗೆ ಸೂಚಿಸಿರುವುದಕ್ಕೆ ಕಂಗನಾ ಗೃಹ ಸಚಿವ ಅಮಿತ್ ಶಾಗೆ ಕೃತಜ್ಞತೆ ತಿಳಿಸಿದ್ದಾರೆ. "ಯಾವುದೇ ದಬ್ಬಾಳಿಕೆಗಳು ದೇಶಭಕ್ತಿಯ ಧ್ವನಿಯನ್ನು ಹತ್ತಿಕ್ಕಲು ಸಾಧ್ಯವಾಗುವುದಿಲ್ಲ ಎಂಬುದಕ್ಕೆ ಇದು ಸಾಕ್ಷಿಯಾಗಿದೆ. ಅಮಿತ್ ಶಾ ಜೀ ಅವರಿಗೆ ನಾನು ಕೃತಜ್ಞಳಾಗಿದ್ದೇನೆ. ಅಮಿತ್ ಶಾ ಅವರು ನನ್ನ ಮುಂಬೈ ಭೇಟಿಯನ್ನು ಮುಂದೂಡುವಂತೆ ಹೇಳಬಹುದಿತ್ತು. ಆದರೆ ಅವರು ಭಾರತದ ಮಗಳ ಕಾರ್ಯವನ್ನು ಗೌರವಿಸಿದ್ದಾರೆ" ಎಂದು ಕಂಗನಾ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.
ಏನಿದು ‘Y’ ಲೆವೆಲ್ ಸೆಕ್ಯುರಿಟಿ?
ಭಾರತದಲ್ಲಿ Z+, Z, Y+ ಹಾಗೂ X ಎಂಬ ನಾಲ್ಕು ಬಗೆಯ ಭದ್ರತಾ ವಿಭಾಗಗಳಿವೆ. ರಾಜಕಾರಣಿಗಳು, ಸಿನಿಮಾ- ಕ್ರೀಡಾ ತಾರೆಗಳು ಸೇರಿದಂತೆ ಹೈ-ಪ್ರೊಫೈಲ್ ಸೆಲೆಬ್ರಿಟಿಗಳು ಬೆದರಿಕೆ ಎದುರಿಸುತ್ತಿರುವ ಸಂದರ್ಭದಲ್ಲಿ ವಿಶೇಷ ಭದ್ರತೆಯನ್ನು ನೀಡಲಾಗುತ್ತದೆ. ‘Y’ ಪ್ಲಸ್ ಲೆವೆಲ್ ಭದ್ರತೆಯಲ್ಲಿ ಒಬ್ಬರು ಅಥವಾ ಇಬ್ಬರು ಕಮಾಂಡೋಗಳು, ಪೊಲೀಸರು ಸೇರಿದಂತೆ 11 ಸಿಬ್ಬಂದಿ ಬೆದರಿಕೆಗೊಳಗಾದ ವ್ಯಕ್ತಿಗೆ ಭದ್ರತೆ ನೀಡಲಿದ್ದಾರೆ.