ಮುಂಬೈ: ವೋಗ್ ಇಂಡಿಯಾದಲ್ಲಿ ಫ್ಯಾಷನ್ ನಿರ್ದೇಶಕರಾಗಿರುವ ಖ್ಯಾತ ಸ್ಟೈಲಿಸ್ಟ್ ಅನೈತಾ ಶ್ರಾಫ್ ಅದಜಾನಿಯಾ ಅವರು ತಮ್ಮನ್ನು ನಿಷೇಧಿಸಿದ ಹೊರತಾಗಿಯೂ ತಮ್ಮ ಚಿತ್ರಗಳನ್ನು ಬಳಸಿ ಪ್ರಚಾರ ಮಾಡಿಕೊಂಡಿದ್ದಾರೆ ಎಂದು ಕಂಗನಾ ರಣಾವತ್ ಆರೋಪಿಸಿದ್ದಾರೆ.
"ವೋಗ್ಇಂ ಡಿಯಾ ಕಂಗನಾರನ್ನ ನಿಷೇಧಿಸಿದೆ" ಏಕೆಂದರೆ "ಅನೈತಾ ಶ್ರಾಫ್ ಅದಜಾನಿಯಾ ಕರಣ್ ಜೋಹರ್‌ಗೆ ಬಹಳ ಹತ್ತಿರದಲ್ಲಿದ್ದಾರೆ." ಎಂದು ಕಂಗನಾ ಅವರ ತಂಡವು ಟ್ವಿಟರ್ನಲ್ಲಿ ಪೋಸ್ಟ್ ಮಾಡಿದೆ.
ಕಂಗನಾ ಅವರನ್ನು ವೋಗ್ನಿಂದ ನಿಷೇಧಿಸಿದ ಬಳಿಕವೂ ವೋಗ್ನೊಂದಿಗಿನ ಕಂಗನಾ ಅವರ ಹಳೆಯ ವಿಡಿಯೋಗಳನ್ನು ಬಳಸಿ ಹಣ ಸಂಪಾದಿಸುತ್ತಿದೆ ಎಂದು ಅನೈತಾ ಅವರನ್ನು ಸೋಶಿಯಲ್ ಮೀಡಿಯಾದಲ್ಲಿ ಕಂಗನಾ ತಂಡ ದೂಷಿಸಿದೆ.