ಬಾಲಿವುಡ್ ನಟಿ ಕಾಜೊಲ್ ದೇವ್ಗನ್ ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಇದ್ದು ಆಗ್ಗಾಗ್ಗೆ ತಮ್ಮ ಫೋಟೋ, ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇತ್ತೀಚೆಗೆ ಕಾಜೊಲ್ ಹೊಸ ಫೋಟೋಶೂಟ್ ಮಾಡಿಸಿದ್ದು ಆ ಫೋಟೋಗಳನ್ನು ಕೂಡಾ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ.
- " class="align-text-top noRightClick twitterSection" data="
">
ಈ ಫೋಟೋದಲ್ಲಿ ಕಾಜೊಲ್ ಸರಳವಾಗಿ ಮೇಕಪ್ ಮಾಡಿಕೊಂಡಿದ್ದಾರೆ. ಕಪ್ಪು ಹಾಗೂ ನೀಲಿ ಮಿಶ್ರಿತ ಸಿಂಪಲ್ ಔಟ್ಫಿಟ್ ಜೊತೆಗೆ ಚಿನ್ನದ ಬಣ್ಣದ ದೊಡ್ಡ ರಿಂಗ್ ಕಿವಿಗೆ ಧರಿಸಿದ್ದಾರೆ. ಈ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿರುವ ಕಾಜೊಲ್, "ಒಂದು ಚಿಕ್ಕ ಫೋಟೋಶೂಟ್, ಯಾರನ್ನೂ ಇದು ನೋಯಿಸುವುದಿಲ್ಲ ಎನ್ನಿಸುತ್ತದೆ" ಎಂದು ಕ್ಯಾಪ್ಷನ್ ನೀಡಿದ್ದಾರೆ. ಜೊತೆಗೆ ಶೈ ಮಂಕಿ ಎಮೋಜಿ ಹಾಕಿಕೊಂಡಿದ್ದಾರೆ. ಕಾಜೊಲ್ ಈ ಫೋಟೋಗಳನ್ನು ಅಪ್ಲೋಡ್ ಮಾಡಿ ಕೆಲವೇ ಗಂಟೆಗಳಲ್ಲಿ 2 ಲಕ್ಷಕ್ಕೂ ಹೆಚ್ಚು ಲೈಕ್ಸ್ ಪಡೆದಿದೆ.
- " class="align-text-top noRightClick twitterSection" data="
">
ಇದನ್ನೂ ಓದಿ: ತಮಿಳಿನ ಆ ಸಿನಿಮಾದಲ್ಲಿ ನಟಿಸಲ್ಲ ಅಂದ್ರಂತೆ ಶಿವಣ್ಣ!
ಕರಿಯರ್ ವಿಚಾರಕ್ಕೆ ಬರುವುದಾದರೆ ಕಾಜಲ್ 'ತ್ರಿಭಂಗ' ಚಿತ್ರದ ಸಕ್ಸಸ್ ಖುಷಿಯಲ್ಲಿದ್ದಾರೆ. ಜನವರಿ 15 ರಂದು ನೆಟ್ಫ್ಲಿಕ್ಸ್ನಲ್ಲಿ ಬಿಡುಗಡೆಯಾದ ಈ ಚಿತ್ರಕ್ಕೆ ಸಿನಿಪ್ರಿಯರಿಂದ ಉತ್ತಮ ಪ್ರತಿಕ್ರಿಯೆ ದೊರೆತಿದೆ. ತನ್ವಿ ಅಜ್ಮಿ ಹಾಗೂ ಮಿಥಿಲ ಪಲ್ಕರ್ ಕೂಡಾ ಈ ಸೀರಿಸ್ನಲ್ಲಿ ನಟಿಸಿದ್ದಾರೆ. ಮೂರು ವಿಭಿನ್ನ ಪಾತ್ರಗಳ ಸುತ್ತ ಈ ಕಥೆ ಸುತ್ತಲಿದೆಯಂತೆ. ತನ್ವಿ ಅಜ್ಮಿ ಬರಹಗಾರ್ತಿಯಾಗಿ ನಟಿಸಿದರೆ, ಕಾಜಲ್, ಬಾಲಿವುಡ್ ನಟಿ ಹಾಗೂ ಒಡಿಶಿ ನೃತ್ಯಕಲಾವಿದೆಯಾಗಿ ನಟಿಸಿದ್ದಾರೆ. ಇದು ಒಟಿಟಿ ಪ್ಲಾಟ್ಫಾರ್ಮ್ಗಾಗಿ ತಯಾರಾದ ಕಾಜೊಲ್ ಮೊದಲ ಸಿನಿಮಾ. ಚಿತ್ರವನ್ನು ಅಜಯ್ ದೇವ್ಗನ್ ಹಾಗೂ ಸ್ನೇಹಿತರು ನಿರ್ಮಿಸುತ್ತಿದ್ದು ರೇಣುಕಾ ಶಹಾನೆ ನಿರ್ದೇಶಿಸಿದ್ದಾರೆ.