ETV Bharat / sitara

ಬಾಲಿವುಡ್​ ಬಾಕ್ಸ್ ಆಫೀಸ್​ ಫೈಟ್​: ರಾಧೆ v/s ಸತ್ಯಮೇವ ಜಯತೆ-2 - john abraham salman release clash

ಈದ್ ಹಬ್ಬದ ಪ್ರಯುಕ್ತ ಸಲ್ಮಾನ್ ಖಾನ್ ನಟನೆಯ 'ರಾಧೇ' ಮೇ 12 ರಂದು ತೆರೆಕಾಣಲಿದೆ. ಅದೇ ಒಂದು ದಿನದ ನಂತರ ಮೇ 13 ರಂದು ಜಾನ್ ಅಬ್ರಾಹಂ ನಟನೆಯ 'ಸತ್ಯಮೇವ ಜಯತೆ-2' ಸಿನಿಮಾನೂ ರಿಲೀಸ್ ಆಗುತ್ತಿದ್ದು, ಬಾಲಿವುಡ್​ ನಲ್ಲಿ ಸ್ಟಾರ್​ ಚಿತ್ರಗಳ ಪೈಪೋಟಿ ಶುರುವಾಗಲಿದೆ.

john abraham salman release clash
ಜಾನ್​ ಅಬ್ರಹಾಂ ಹಾಗೂ ಸಲ್ಮಾನ್ ಖಾನ್​
author img

By

Published : Mar 17, 2021, 1:25 PM IST

ಹೈದರಾಬಾದ್: ಬಾಲಿವುಡ್​ ನಟ ಜಾನ್ ಅಬ್ರಹಾಂ ಅಭಿನಯದ ಆಕ್ಷನ್​ ಚಿತ್ರ ಸತ್ಯಮೇವ ಜಯತೆ-2 ಮೇ 13 ರಂದು ಚಿತ್ರ ಮಂದಿರದಲ್ಲಿ ಬಿಡುಗಡೆಯಾಗಲಿದೆ.

2018ರಲ್ಲಿ ಬಿಡುಗಡೆಯಾಗಿದ್ದ ಸತ್ಯಮೇವ ಜಯತೆ ಮೊದಲ ಭಾಗ ಸಕತ್​ ಹಿಟ್​ ನೀಡಿತ್ತು, ಅದರ ಮುಂದವರಿದ ಭಾಗವಾದ ಮಿಲಾಪ್​ ಜಾವೇರಿ ನಿರ್ದೇಶನದ ಸತ್ಯಮೇವ ಜಯತೆ-2 ಈದ್​ ಹಬ್ಬಕ್ಕೆ ಬಿಡುಗಡೆಯಾಗುತ್ತಿದ್ದು, ಒಂದು ದಿನ ಮುಂಚೆ ಸಲ್ಮಾನ್​ ಖಾನ್​ ಚಿತ್ರ ರಾಧೆ ಕೂಡ ರಿಲೀಸ್​ ಆಗುತ್ತಿದ್ದು, ಯಾವುದು ಬಾಕ್ಸ್​ ಆಫೀಸ್​ನಲ್ಲಿ ಕಮಾಲ್​ ಮಾಡುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ಚಿತ್ರದಲ್ಲಿ ಡಬಲ್ ರೋಲ್​​​​ನಲ್ಲಿ ಕಾಣಿಸಿಕೊಂಡಿರುವ ಜಾನ್​ ಅಬ್ರಹಾಂ ಟ್ವಿಟರ್​ನಲ್ಲಿ ಚಿತ್ರದ ಹೊಸ ಪೋಸ್ಟರ್ ಹಂಚಿಕೊಂಡು ಮೇ 13 ರಂದು ಚಿತ್ರ ಬಿಡುಗಡೆಯಾಗುವುದಾಗಿ ಟ್ವೀಟ್​​​ ಮಾಡಿದ್ದಾರೆ.

ಭೂಷಣ್ ಕುಮಾರ್ ಅವರ ಟಿ - ಸೀರೀಸ್ ಮತ್ತು ಎಮ್ಮೆ ಎಂಟರ್‌ಟೈನ್‌ಮೆಂಟ್ ನಿರ್ಮಿಸಿರುವ ಸತ್ಯಮೇವ ಜಯತೆ 2 ಚಿತ್ರದಲ್ಲಿ ದಿವ್ಯಾ ಖೋಸ್ಲಾ ಕುಮಾರ್ ನಟಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.