ETV Bharat / sitara

ತಮ್ಮ ಪಾತ್ರಕ್ಕೆ ತಾವೇ ಕನ್ನಡದಲ್ಲಿ ಡಬ್ಬಿಂಗ್​ ಮಾಡ್ತಾರೆ ನಟಿ ಜಾಕ್ವೆಲಿನ್ ಫರ್ನಾಂಡೀಸ್! - ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್

ಸುದೀಪ್ ಅಭಿನಯದ 'ವಿಕ್ರಾಂತ್ ರೋಣ' ಚಿತ್ರದ ಹಾಡೊಂದರಲ್ಲಿ ಡ್ಯಾನ್ಸ್​ ಮಾಡುವುದಕ್ಕೆ ಬಂದಿದ್ದ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್ ಇದೀಗ ಹಾಡಿನ ಚಿತ್ರೀಕರಣ ಕೆಲಸ ಮುಗಿಸಿ ವಾಪಸ್​ ಮುಂಬೈಗೆ ತೆರಳಿದ್ದಾರೆ. ವಿಶೇಷ ಅಂದ್ರೆ ತಮ್ಮ ಪಾತ್ರವನ್ನು ತಾವೇ ಕನ್ನಡದಲ್ಲಿ ಡಬ್ ಮಾಡುವುದಾಗಿ ನಟಿ ಆಶ್ವಾಸನೆ ಸಹ ಕೊಟ್ಟಿದ್ದಾರಂತೆ.

Jacqueline Fernandez
ಜಾಕ್ವೆಲಿನ್ ಫರ್ನಾಂಡೀಸ್
author img

By

Published : Jul 17, 2021, 10:27 AM IST

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ಬಹುನಿರೀಕ್ಷಿತ ಚಿತ್ರ ‘ವಿಕ್ರಾಂತ್ ರೋಣ’ದ ಶೂಟಿಂಗ್​ ಬಹುತೇಕ ಮುಗಿದಿದ್ದು, ಸ್ಪೆಷಲ್ ಹಾಡೊಂದಕ್ಕೆ ಕಿಚ್ಚನ ಜೊತೆ ಹೆಜ್ಜೆ ಹಾಕಲು ಬೆಂಗಳೂರಿಗೆ ಬಂದಿದ್ದ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್ ಇದೀಗ ತಮ್ಮ ಕೆಲಸ ಮುಗಿಸಿ ವಾಪಸ್​ ಮುಂಬೈಗೆ ತೆರಳಿದ್ದಾರೆ.

ಜಾಕ್ವೆಲಿನ್ ವಿಶೇಷ ಹಾಡೊಂದರಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ಈಗಾಗಲೇ ಚಿತ್ರತಂಡ ಮಾಹಿತಿ ನೀಡಿದೆ. ಕೇವಲ ಡ್ಯಾನ್ಸ್​ ಮಾಡುವುದಷ್ಟೇ ಅಲ್ಲದೆ, ಜಾಕ್ವೆಲಿನ್ ಅವರಿಗೆ ಕೆಲವು ಸಂಭಾಷಣೆಗಳೂ ಇದ್ದು, ತಮ್ಮ ಪಾತ್ರಕ್ಕೆ ತಾವೇ ಡಬ್ ಮಾಡುತ್ತಾರಂತೆ. ನನ್ನ ಪಾತ್ರಕ್ಕೆ ಬೇರೆ ಯಾರಿಂದಲೂ ಡಬ್ಬಿಂಗ್ ಮಾಡಿಸಬೇಡಿ, ನಾನೇ ಮಾಡುತ್ತೇನೆ ಎಂದು ಆಶ್ವಾಸನೆ ಸಹ ಕೊಟ್ಟಿದ್ದಾರಂತೆ.

ಜಾಕ್ವೆಲಿನ್ ಕೊಂಡಾಡಿದ ನಿರ್ಮಾಪಕ ಮಂಜು:

ಪ್ರತಿ ದಿನ ಬೆಳಗ್ಗೆ 9 ಗಂಟೆಗೆ ಸೆಟ್​ನಲ್ಲಿ ಹಾಜರಿರುತ್ತಿದ್ದ ಜಾಕ್ವೆಲಿನ್ ಫರ್ನಾಂಡೀಸ್, ರಾತ್ರಿ 9.30ರ ವರೆಗೂ ಕೆಲಸ ಮಾಡುತ್ತಿದ್ದರು. ಅಷ್ಟೇ ಅಲ್ಲದೆ ತಮ್ಮ ಪಾತ್ರಕ್ಕೆ ಸಂಬಂಧಿಸಿದ ಸಂಭಾಷಣೆಯನ್ನು ಮೊದಲೇ ರಿಹರ್ಸಲ್ ಮಾಡಿಕೊಂಡು ಬಂದು ಸರಿಯಾಗಿ ಒಪ್ಪಿಸುವುದಕ್ಕೆ ಪ್ರಯತ್ನಿಸುತ್ತಿದ್ದರು. ಕನ್ನಡ ಮಾತನಾಡುತ್ತಾ ಭಾಷೆಯ ಬಗ್ಗೆ ಪ್ರೀತಿ ಬೆಳೆಸಿಕೊಂಡಿರುವ ಜಾಕ್ವೆಲಿನ್, ತಮ್ಮ ಪಾತ್ರಕ್ಕೆ ತಾವೇ ಡಬ್ ಮಾಡುವುದಾಗಿ ಹೇಳಿದ್ದಾರೆ. ಇದುವರೆಗೂ ನಾನು ಕೆಲಸ ಮಾಡಿರುವ ಜನರಲ್ಲೇ ಜಾಕ್ವೆಲಿನ್ ಪ್ರೊಫೆಶನಲ್ ನಟಿ ಎಂದು ನಿರ್ಮಾಪಕ ಜಾಕ್ ಮಂಜು ಕೊಂಡಾಡಿದ್ದಾರೆ.

ಇದನ್ನೂ ಓದಿ: ‘ವಿಕ್ರಾಂತ್ ರೋಣ’ನಿಗಾಗಿ ಹೆಜ್ಜೆ ಹಾಕಲು ಮುಂಬೈನಿಂದ ಬಂದ ಬಾಲಿವುಡ್​ ಬೆಡಗಿ ಜಾಕ್ವೆಲಿನ್​!

ಅನೂಪ್ ಭಂಡಾರಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರದಲ್ಲಿ ನಿರೂಪ್ ಭಂಡಾರಿ, ನೀತು ಅಶೋಕ್, ಶ್ರದ್ಧಾ ಶ್ರೀನಾಥ್ ಸೇರಿದಂತೆ ಅನೇಕ ಕಲಾವಿದರಿದ್ದಾರೆ. ವಿಕ್ರಾಂತ್ ರೋಣ ಸಿನಿಮಾ 3ಡಿ ವರ್ಷನ್​​ ​ನಲ್ಲಿ ಬರುತ್ತಿದ್ದು, ಜಾಕ್ ಮಂಜು ಈ ಚಿತ್ರವನ್ನ ನಿರ್ಮಾಣ ಮಾಡುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.