ನವವಸಂತಕ್ಕೆ ಕಾಲಿಟ್ಟಿರುವ ಬಾಲಿವುಡ್ ಬೆಡಗಿ ಜಾಕ್ವೆಲಿನ್ ಫರ್ನಾಂಡಿಸ್ ಕಡಲ ತೀರದಲ್ಲಿ ಬಿಂದಾಸ್ ಆಗಿ ಬರ್ತ್ಡೇ ಆಚರಿಸಿಕೊಂಡಿದ್ದಾರೆ.
ಶ್ರೀಲಂಕಾ ಸುಂದರಿ ಜಾಕ್ವೆಲಿನ್ ಹುಟ್ಟುಹಬ್ಬ ಆಚರಿಸಲು ತಮ್ಮ ತವರಿಗೆ ಹಾರಿದ್ದಾರೆ. ಅಲ್ಲಿಯ ಸುಂದರ ಕಡಲ ಕಿನಾರೆಯಲ್ಲಿ ಸ್ನೇಹಿತರೊಂದಿಗೆ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ. 34ನೇ ವಸಂತಕ್ಕೆ ಕಾಲಿರಿಸಿರುವ ಸಂಭ್ರಮವನ್ನು ಸುಂದರವಾಗಿ ಅನುಭವಿಸಿದ್ದಾರೆ.
- " class="align-text-top noRightClick twitterSection" data="
">
ಜಾಕ್ವೆಲಿನ್ ತಮ್ಮ ಬರ್ತ್ಡೇ ಪಾರ್ಟಿಯ ಅದ್ಭುತ ಕ್ಷಣಗಳನ್ನು ಕ್ಯಾಮೆರಾಗಳಲ್ಲಿ ಸೆರೆ ಹಿಡಿದಿದ್ದಾರೆ. ಅವುಗಳನ್ನು ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಸ್ನೇಹಿತರ ಬಳಗ ಹೊಂದಿರುವ ಈ ಬ್ಯೂಟಿಯ ಬರ್ತ್ಡೇ ಪೋಟೊಗಳಿಗೆ 20 ಲಕ್ಷ ಜನರು ಲೈಕ್ ಮಾಡಿದ್ದಾರೆ. ಕೆಲವೊಂದಿಷ್ಟು ಬರ್ತ್ಡೇ ಶುಭಾಶಯಗಳು ಕೂಡ ಹರಿದು ಬಂದಿವೆ.