ಬಾಲಿವುಡ್ ನಟಿ, ನೃತ್ಯ ತಾರೆ ಜಾಕ್ವೆಲಿನ್ ಫರ್ನಾಂಡಿಸ್ ತಮ್ಮ ಬಳಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರಿಗೆ ದಸರಾ ಹಬ್ಬದ ಉಡುಗೊರೆಯಾಗಿ ಕಾರು ನೀಡಿದ್ದಾರೆ.
- " class="align-text-top noRightClick twitterSection" data="
">
ಜಾಕ್ವೆಲಿನ್ ತಮ್ಮ ಕರಿಯರ್ ಆರಂಭಿಸಿದಾಗಿನಿಂದಲೂ ಆ ವ್ಯಕ್ತಿ ಆಕೆಯ ಜೊತೆಗೂಡಿ ಕೆಲಸ ಮಾಡುತ್ತಿದ್ದನಂತೆ. ಹೀಗಾಗಿ ಆತನ ಮೇಲಿನ ಅಭಿಮಾನವನ್ನು ದಸರಾ ಹಬ್ಬದ ಉಡುಗೊರೆ ರೂಪದಲ್ಲಿ ಮೆರೆದಿದ್ದಾರೆ.
ಕಾರ್ ಕೀಯನ್ನು ಆತನ ಕೈಗೆ ನೀಡಿ, ಸ್ವತಃ ತಾವೇ ಮುಂದೆ ನಿಂತು ಕಾರಿಗೆ ಪೂಜೆ ಮಾಡಿದ್ದಾರೆ. ಇನ್ನು ಈ ಪೂಜೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ.
- " class="align-text-top noRightClick twitterSection" data="
">
ನಟಿಯ ಒಳ್ಳೆತನ ನೆಟ್ಟಿಗರ ಪ್ರಶಂಸಗೆ ಪಾತ್ರವಾಗಿದೆ. ಈ ಹಿಂದೆ ತನ್ನ ಮೆಕಪ್ ಆರ್ಟಿಸ್ಗೆ ಕಾರು ನೀಡಿ ನೆಟ್ಟಿಗರ ಮನಸ್ಸು ದೋಚಿದ್ದರು.
2019ರಲ್ಲಿ ‘ಸಾಹೋ’, ‘ಡ್ರೈವ್’, ‘Mrs. ಸೀರಿಯಲ್ ಕಿಲ್ಲರ್’ ಚಿತ್ರದಲ್ಲಿ ನಟಿಸಿದ್ದರು. ಈಗ ಜಾನ್ ಅಬ್ರಹಾಂ ಅಭಿನಯದ ‘ಅಟ್ಯಾಕ್’, ಸೈಫ್ ಅಲಿ ಖಾನ್ ಅಭಿನಯದ ‘ಭೂತ್ ಪೊಲೀಸ್’, ಸಲ್ಮಾನ್ ಖಾನ್ ಅಭಿನಯದ ‘ ಕಿಕ್ 2’ ಮತ್ತು ರಣವೀರ್ ಸಿಂಗ್ ಅಭಿನಯದ ‘ಸರ್ಕಸ್’ ಚಿತ್ರದಲ್ಲಿ ನಟಿಸ್ತಿದ್ದಾರೆ.