ETV Bharat / sitara

ಸರೋಜ್ ಖಾನ್ ಪರಂಪರೆ ಒಪ್ಪಿಕೊಳ್ಳದೆ ಹಿಂದಿ ಚಿತ್ರಗೀತೆ ಕೇಳಲು ಸಾಧ್ಯವಿಲ್ಲ: ಸೈಫ್​ ಅಲೀ ಖಾನ್

ಸಂಗೀತಗಳಿಗೆ ನೃತ್ಯ ಸಂಯೋಜಿಸುವ ಮೂಲಕ ಅಮಿತಾಬ್ ಬಚ್ಚನ್, ಶ್ರೀದೇವಿ, ಶಾರುಖ್ ಖಾನ್​ರಿಂದ ಮಾಧುರಿ ದೀಕ್ಷಿತ್ ವರೆಗೆ ಬಾಲಿವುಡ್​ನಲ್ಲಿ ಸರೋಜ್​ ಖಾನ್​ ಹೇಗೆ ಒಳ್ಳೆಯ ಹೆಸರು ಮಾಡಿದ್ದಾರೆ ಎಂಬುವುದನ್ನು ನೆನೆಸಿಕೊಳ್ಳದೆ ಹಿಂದಿ ಚಿತ್ರಗೀತೆ ಕೇಳಲು ಸಾಧ್ಯವಿಲ್ಲ ಎಂದು ನಟ ಸೈಫ್​ ಅಲೀ ಖಾನ್ ಹೇಳಿದ್ದಾರೆ.

saif ali khan on sarij khan
ಸರೋಜ್​ ಖಾನ್ ನೆನೆಸಿಕೊಂಡ ಸೈಫ್​ ಅಲೀ ಖಾನ್
author img

By

Published : Jul 5, 2020, 2:15 PM IST

ಮುಂಬೈ : ಬಾಲಿವುಡ್ ನೃತ್ಯ ಲೋಕದಲ್ಲಿ ಅತಿ ದೊಡ್ಡ ಹೆಸರು ತಂದು ಕೊಟ್ಟ ನೃತ್ಯ ಸಂಯೋಜಕಿ ಸರೋಜ್ ಖಾನ್ ಅವರ ಪರಂಪರೆಯನ್ನು ಒಪ್ಪಿಕೊಳ್ಳದೆ ಹಿಂದಿ ಚಲನಚಿತ್ರ ಗೀತೆ ಕೇಳಲು ಸಾಧ್ಯವಿಲ್ಲ ಎಂದು ನಟ ಸೈಫ್ ಅಲಿ ಖಾನ್ ಹೇಳಿದ್ದಾರೆ.

ಮೂರು ಬಾರಿ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತಗೊಂಡಿರುವ ಸರೋಜ್​ ಖಾನ್ "ಶ್ರೇಷ್ಠ ಮತ್ತು ಅತ್ಯಂತ ಕಲಾತ್ಮಕ ನೃತ್ಯ ಸಂಯೋಜಕಿ ಎಂದು ಸೈಫ್ ಬಣ್ಣಿಸಿದ್ದು, ಚಿತ್ರಕ್ಕೆ ಸರೋಜ್​ ಖಾನ್ ಸೇರಿಕೊಳ್ಳುವುದು ನಿರ್ಮಾಪಕರಿಗೆ ಅದೊಂದು ಅರ್ಹತೆಯಾಗಿದೆ ಎಂದು ತಿಳಿಸಿದ್ದಾರೆ.

ಅವರೊಂದಿಗೆ ಒಂದು ಹಾಡು ಅದು ನಿಜವಾದ ಕಲೆಯಾಗಿತ್ತು. ಪ್ರತೀ ಬೀಟ್​ ಮತ್ತು ಹೆಜ್ಜೆಯೊಂದಿಗೆ ಭಾವನೆ ಮತ್ತು ಅಭಿವ್ಯಕ್ತಿ ಅಗತ್ಯವಿರುತ್ತದೆ. ಈಗ ಆ ಯುಗವು ಕಳೆದು ಹೋಗಿದೆ ಮತ್ತು ಸಂಗೀತವು ಮುಗಿದಿದೆ. ಆದರೆ ಸೆಟ್​​ನಲ್ಲಿ ಆ ಮಹಾನ್ ಮಹಿಳೆಯಿಂದ ಸೂಚನೆಗಳನ್ನು ಪಡೆಯುವ ಭಾಗ್ಯ ನಮಗೆಲ್ಲರಿಗೂ ದೊರೆತಿದೆ. ಅಮಿತಾಬ್ ಬಚ್ಚನ್, ಶ್ರೀದೇವಿ, ಶಾರುಖ್ ಖಾನ್​ರಿಂದ ಮಾಧುರಿ ದೀಕ್ಷಿತ್ ವರೆಗೆ ಬಾಲಿವುಡ್​ನಲ್ಲಿ ಅವರು ಹೇಗೆ ಒಳ್ಳೆಯ ಹೆಸರು ಮಾಡಿದ್ದಾರೆ ಎಂಬವುದನ್ನು ನೆನೆಸಿಕೊಳ್ಳದೆ ಹಿಂದಿ ಚಿತ್ರಗೀತೆ ಕೇಳಲು ಸಾಧ್ಯವಿಲ್ಲ ಎಂದು ಸೈಫ್ ಹೇಳಿದ್ದಾರೆ. ​​

ತನ್ನ ಚೊಚ್ಚಲ ಚಿತ್ರ 1993 ರ ಪರಂಪರಾ ಮತ್ತು ಅದೇ ವರ್ಷದ ಆಶಿಕ್​ನಲ್ಲಿ ಸರೋಜ್​ ಖಾನ್ ಕೆಲಸ ಮಾಡಿದ್ದರು. ಈ ಚಿತ್ರಗಳ ಟೈಟಲ್ ಸಾಂಗ್​ ಹಿಟ್​ ಆಯಿತು. ಮತ್ತು ನನ್ನ ವೃತ್ತಿ ಜೀವನವನ್ನು ಸ್ಥಿರಗೊಳಿಸಿತು ಎಂದು ಸೈಫ್​ ನೆನಪಿಸಿಕೊಂಡಿದ್ದಾರೆ.

ದಕ್​ ದಕ್​ ಮತ್ತು ಏಕ್ ದೋ ತೀನ್​ನಂತಹ ಬಾಲಿವುಡ್‌ನ ಪ್ರಸಿದ್ಧ ಹಾಡುಗಳಿಗೆ ನೃತ್ಯ ಸಂಯೋಜನೆ ಮಾಡಿದ್ದ ಖ್ಯಾತ ನೃತ್ಯ ಸಂಯೋಜಕಿ ಸರೋಜ್​ ಖಾನ್​​ ಶುಕ್ರವಾರ ಮುಂಜಾನೆ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.