ETV Bharat / sitara

14ನೇ ವಯಸ್ಸಿನಲ್ಲಿ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ರಾ ಇರಾ? - ಇರಾ 14 ನೇ ವಯಸ್ಸಿನಲ್ಲಿ ಲೈಂಗಿಕ ಕಿರುಕುಳ

ಕಂಗನಾ ರನೌತ್ ಅವರ 'ಮುರಿದ ಕುಟುಂಬ' ಹೇಳಿಕೆಗೆ ಸೂಪರ್ ಸ್ಟಾರ್ ಅಮೀರ್ ಖಾನ್ ಅವರ ಪುತ್ರಿ ಇರಾ ಖಾನ್ ಪ್ರತಿಕ್ರಿಯಿಸಿದ್ದಾರೆ. ಅವರ ಇತ್ತೀಚಿನ ಇನ್ಸ್ಟಾಗ್ರಾಮ್ ಪೋಸ್ಟ್​​ನಲ್ಲಿ, 14ನೇ ವಯಸ್ಸಿನಲ್ಲಿ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದೇನೆ ಎಂದು ಬಹಿರಂಗಪಡಿಸಿದ್ದಾರೆ.

ಇರಾ
ಇರಾ
author img

By

Published : Nov 2, 2020, 6:44 PM IST

Updated : Nov 2, 2020, 7:16 PM IST

ಮುಂಬೈ: ಖ್ಯಾತ ನಟ ಅಮೀರ್​​​ ಖಾನ್​ ಅವರ ಪುತ್ರಿ ಇರಾ ಖಾನ್ ಅವರು 14ನೇ ವಯಸ್ಸಿನಲ್ಲಿ ನಾನು ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದೇನೆ ಎಂದು ಹೇಳಿದ್ದಾರೆ. 2002ರಲ್ಲಿ ನಡೆದ ಆಕೆಯ ಪೋಷಕರಾದ ಅಮೀರ್ ಖಾನ್ ಮತ್ತು ರೀನಾ ದತ್ತಾ ಅವರ ವಿಚ್ಛೇದನದ ಬಗ್ಗೆ ಮಾತನಾಡುವಾಗ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ.

"ನನಗೆ 14 ವರ್ಷವಿದ್ದಾಗ ಲೈಂಗಿಕ ಕಿರುಕುಳ ನೀಡಲಾಗಿತ್ತು. ಆ ವ್ಯಕ್ತಿ ಏನು ಮಾಡುತ್ತಿದ್ದಾನೆ ಎಂಬುದು ನನಗೆ ತಿಳಿದಿರಲಿಲ್ಲ, ಆದ್ರೆ ಆ ವ್ಯಕ್ತಿಗೆ ಅದು ತಿಳಿದಿತ್ತು. ಇದು ಪ್ರತಿದಿನ ನಡೆಯುತ್ತಿರಲಿಲ್ಲ. ನನಗೆ ಅವರು ಏನು ಮಾಡುತ್ತಿದ್ದಾರೆ ಮತ್ತು ಏನಾಗುತ್ತಿದೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಒಂದು ವರ್ಷಬೇಕಾಯಿತು. ಒಮ್ಮೆ ನಾನು ಆ ಪರಿಸ್ಥಿತಿಯಿಂದ ಹೊರಬಂದಾಗ, ಮತ್ತೆ ಮುಂದೆ ಕೆಟ್ಟದ್ದನ್ನು ಅನುಭವಿಸಲಿಲ್ಲ. ಇದು ನನಗೆ ಜೀವನಕ್ಕೆ ಕಳಂಕವನ್ನುಂಟುಮಾಡಿದ ಸಂಗತಿಯಲ್ಲ ಮತ್ತು ನನಗೆ ಕೆಟ್ಟ ಭಾವನೆ ಉಂಟುಮಾಡುವ ಸಂಗತಿಯಲ್ಲ "ಎಂದು ಇರಾ ಅವರು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ ಹೊಸ ವೀಡಿಯೊದಲ್ಲಿ ಹೇಳಿದ್ದಾರೆ.

"ನಾನು ಯಾರೊಂದಿಗೂ ಯಾವುದರ ಬಗ್ಗೆಯೂ ಮಾತನಾಡಿಲ್ಲ. ಏಕೆಂದರೆ ಇದು ನನ್ನ ವಿಷಯ, ಅದನ್ನು ನನ್ನದೇ ಆದ ರೀತಿಯಲ್ಲಿ ನಿಭಾಯಿಸಬೇಕು, ಅಥವಾ ಏನಾದರೂ ದೊಡ್ಡದಾಗಿದ್ದರೆ,ಅದಕ್ಕೆ ನಾನು ಉತ್ತರ ನೀಡಬೇಕಾಗುತ್ತದೆ ಎಂದಿದ್ದಾರೆ.

ಕಳೆದ ತಿಂಗಳು, ಇರಾ ನಾಲ್ಕು ವರ್ಷಗಳಿಂದ "ಪ್ರಾಯೋಗಿಕವಾಗಿ ಖಿನ್ನತೆಗೆ ಒಳಗಾಗುವ" ಬಗ್ಗೆ ಮಾತನಾಡಿದಾಗ, ಕಂಗನಾ ರನೌತ್ ಖಿನ್ನತೆಯೊಂದಿಗೆ ಹೋರಾಡುವುದು "ಮುರಿದ ಕುಟುಂಬಗಳ ಮಕ್ಕಳಿಗೆ ಕಷ್ಟ" ಎಂದು ಹೇಳಿದ್ದರು.

ಇದೀಗ ಇರಾ ತನ್ನ ಪೋಷಕರ ವಿಚ್ಛೇಧನದ ಬಗ್ಗೆ ವೀಡಿಯೊದಲ್ಲಿ ಮಾತನಾಡುವಾಗ "ನಾನು ಚಿಕ್ಕವಳಿದ್ದಾಗ, ನನ್ನ ಹೆತ್ತವರು ವಿಚ್ಛೇದನ ಪಡೆದರು. ಆದರೆ ನನ್ನ ಹೆತ್ತವರ ವಿಚ್ಛೇದನ ಸೌಹಾರ್ದಯುತವಾಗಿರುವುದರಿಂದ ಅದು ನನಗೆ ಆಘಾತವನ್ನುಂಟು ಮಾಡುವಂತೆ ಕಾಣಲಿಲ್ಲ. ಅವರು ಸ್ನೇಹಿತರು, ಇಡೀ ಕುಟುಂಬ ಇನ್ನೂ ಸ್ನೇಹಿತರಾಗಿದ್ದಾರೆ. ನಮ್ಮದು ಮುರಿದ ಕುಟುಂಬವಲ್ಲ ಎಂದಿದ್ದಾರೆ."

Last Updated : Nov 2, 2020, 7:16 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.