ಸುಮಾರು 350 ಕೋಟಿ ವೆಚ್ಚದಲ್ಲಿ ಅತ್ಯಂತ ಪ್ರತಿಷ್ಟಾತ್ಮಕ ನಿರ್ಮಾಣವಾಗಿತ್ತಿರುವ ಚಿತ್ರ ‘ಆರ್ಆರ್ಆರ್’. ಈ ಸಿನಿಮಾದಲ್ಲಿ ರಾಮ್ ಚರಣ್ ಅಲ್ಲೂರಿ ಸೀತಾರಾಮ ರಾಜು ಪಾತ್ರ ಮತ್ತು ಜ್ಯೂ. ಎನ್ಟಿಆರ್ ಕೋಮರಂ ಭೀಮ್ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.
ಇನ್ನು ರಾಮ್ ಚರಣ್ ಜೋಡಿಯಾಗಿ ಆಲಿಯಾ ಭಟ್ ನಟಿಸುತ್ತಿದ್ದಾರೆ. ಸಿನಿಮಾದಲ್ಲಿ ಅವರ ಪಾತ್ರ ಚಿಕ್ಕದಾಗಿರುವುದರಿಂದ ಮುಕ್ತಾಯವಾಗಿದೆ. ಹೀಗಾಗಿ ರಾಜಮೌಳಿಯವರು ಆಲಿಯಾ ಭಟ್ರನ್ನು ಸಂತೋಷದಿಂದ ಕಳುಹಿಸಿಕೊಟ್ಟಿದ್ದಾರೆ.
ಇಲ್ಲಿಯವರೆಗೆ ಶೇಕಡ 70ರಷ್ಟು ಚಿತ್ರ ಮುಗಿದಿದೆ. ಆದಷ್ಟು ಬೇಗ ಎನ್ಟಿಆರ್ ಮತ್ತು ಒಲೀವಿಯಾ ಮಾರಿನ್ ಕಿಲಕ ಸನ್ನಿವೇಶದ ಚಿತ್ರೀಕರಣ ಪ್ರಾರಂಭವಾಗಲಿದೆ. ಇದಾದ ಬಳಿಕ ಕ್ಲೈಮ್ಯಾಕ್ಸ್ ಚಿತ್ರೀಕರಣ ಶುರು ಮಾಡಲಿದ್ದಾರೆ.
ಇನ್ನು ಈ ಚಿತ್ರ 10 ಭಾಷೆಯಲ್ಲಿ ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಈ ಚಿತ್ರ 2020 ಜುಲೈ 30ರಂದು ಬಿಡುಗಡೆ ಮಾಡಲು ಚಿತ್ರತಂಡ ಪ್ಲಾನ್ ಮಾಡಿದೆ.