ETV Bharat / sitara

ಬಡಗಾಯಕನಿಗೆ ಬೆಳಕಾದ ನೇಹಾ ಕಕ್ಕರ್: ಸ್ಪರ್ಧಿಯ ಕಣ್ಣೀರ ಕಹಾನಿಗೆ ಲಕ್ಷ ರೂ. ನೀಡಿದ ಗಾಯಕಿ - Indian Idol 11 latest news

ಖಾಸಗಿ ಚಾನೆಲ್​ ಒಂದರಲ್ಲಿ ಪ್ರಸಾರವಾಗುತ್ತಿರುವ ಇಂಡಿಯನ್ ಐಡಲ್​-11 ಶೋ ಸ್ಪರ್ಧಿಯೊಬ್ಬರಿಗೆ ನೇಹಾ ಕಕ್ಕರ್ ದೀಪಾವಳಿ ಆಚರಿಸಲು ಒಂದು ಲಕ್ಷ ರೂ. ನೀಡಿ ಬಡ ಸ್ಪರ್ಧಿಯ ಬಾಳಿಗೆ ಬೆಳಕು ಚೆಲ್ಲಿದ್ದಾರೆ.

ಸ್ಪರ್ಧಿಯ ಕಣ್ಣೀರಿಗೆ ನೇಹಾ ಕಕ್ಕರ್ ಭಾವುಕ
author img

By

Published : Oct 27, 2019, 12:46 PM IST

ಮುಂಬೈ: ತನ್ನ ಇಂಪಾದ ದನಿಯ ಮೂಲಕ ಅಸಂಖ್ಯಾತ ಅಭಿಮಾನಿ ಬಳಗವನ್ನು ಹೊಂದಿರುವ ಬಾಲಿವುಡ್ ಗಾಯಕಿ ನೇಹಾ ಕಕ್ಕರ್ ಮಾನವೀಯತೆ ವಿಚಾರವೊಂದಕ್ಕೆ ಸುದ್ದಿಯಾಗಿದ್ದಾರೆ.

ಖಾಸಗಿ ಚಾನೆಲ್​ ಒಂದರಲ್ಲಿ ಪ್ರಸಾರವಾಗುತ್ತಿರುವ ಇಂಡಿಯನ್ ಐಡಲ್​-11 ಶೋ ಸ್ಪರ್ಧಿಯೊಬ್ಬರಿಗೆ ನೇಹಾ ಕಕ್ಕರ್ ದೀಪಾವಳಿ ಆಚರಿಸಲು ಒಂದು ಲಕ್ಷ ರೂ. ನೀಡಿ ಬಡ ಸ್ಪರ್ಧಿಯ ಬಾಳಿಗೆ ಬೆಳಕು ತಂದಿದ್ದಾರೆ.

ಜಾರ್ಖಂಡ್ ಮೂಲಕ ಪುಟ್ಟ ಹಳ್ಳಿಯ ದಿವಸ್ ಹೆಸರಿನ ಸ್ಪರ್ಧಿ ವೇದಿಕೆ ಆಗಮಿಸಿದ ವೇಳೆ ಕಾರ್ಯಕ್ರಮದ ಜಡ್ಜ್​ ಆತನ ಬಳಿ ದೀಪಾವಳಿ ಹೇಗೆ ಆಚರಿಸುತ್ತೀರಿ ಎಂದು ಪ್ರಶ್ನಿಸುತ್ತಾರೆ. ಈ ಪ್ರಶ್ನೆಗೆ ಉತ್ತರಿಸುವ ವೇಳೆ ಕಣ್ಣೀರಾದ ದಿವಸ್, ತನ್ನ ಕಷ್ಟಗಳನ್ನು ಹೇಳಿಕೊಂಡಿದ್ದಾನೆ.

Indian Idol 11
ಇಂಡಿಯನ್ ಐಡಲ್ ಸ್ಪರ್ಧಿ ದಿವಸ್

ಕಳೆದ ಆರು ವರ್ಷಗಳಲ್ಲಿ ಹಬ್ಬವನ್ನೇ ಆಚರಿಸಿಲ್ಲ, ಒಂದರ್ಥದಲ್ಲಿ ಯಾವಾಗ ಹಬ್ಬ ಎನ್ನುವ ವಿಚಾರವೇ ನನ್ನ ಅರಿವಿಗೆ ಬಂದಿಲ್ಲ. ಹೋಟೆಲ್​ಗಳಲ್ಲಿ ಪಾತ್ರೆ ತೊಳೆಯುತ್ತಾ ಕಷ್ಟದ ದಿನಗಳನ್ನು ದೂಡಿದೆ. ಈ ಸಂದರ್ಭದಲ್ಲಿ ಬದುಕಲ್ಲಿ ಬೆಳಕೇ ಇರಲಿಲ್ಲ ಎಂದು ದುಃಖತಪ್ತನಾಗಿ ಹೇಳಿದ್ದಾನೆ.

ದಿವಸ್ ಗಾಯನವನ್ನು ಮೆಚ್ಚಿ ಕ್ರಿಕೆಟ್ ದೇವರು ಸಚಿನ್ ತೆಂಡುಲ್ಕರ್ ಸಹ ಟ್ವೀಟ್ ಮಾಡಿದ್ದರು. ಈ ವಿಚಾರವನ್ನು ಪ್ರಸ್ತಾಪಿಸಿದ ದಿವಸ್, ನಾನು ಸಚಿನ್ ಅವರಿಗೆ ಕೊನೆತನಕ ಆಭಾರಿಯಾಗಿರುತ್ತೇನೆ ಎಂದಿದ್ದಾರೆ.

Indian Idol 11
ಖ್ಯಾತ ಗಾಯಕಿ ಹಾಗೂ ಇಂಡಿಯನ್ ಐಡಲ್ ಜಡ್ಜ್​ ನೇಹಾ ಕಕ್ಕರ್

ದಿವಸ್ ಮಾತನ್ನು ಕೇಳಿ ಭಾವುಕರಾದ ಶೋನ ಮತ್ತೋರ್ವ ಜಡ್ಜ್​ ನೇಹಾ ಕಕ್ಕರ್, ಆ ಕ್ಷಣವೇ ಒಂದು ಲಕ್ಷ ನಾನು ನೀಡುತ್ತಿದ್ದೇನೆ ಎಂದು ಘೋಷಿಸಿದ್ದಾರೆ. ನೀವು ಆ ಹಣದಲ್ಲಿ ವಿಮಾನದ ಮೂಲಕ ಊರಿಗೆ ತೆರಳಿ, ಇಷ್ಟದ ಬಟ್ಟೆ ಹಾಗೂ ಸಿಹಿತಿನಿಸನ್ನು ಖರೀದಿಸಿ ಮನೆಯವರೊಂದಿಗೆ ಹಬ್ಬ ಆಚರಿಸಿ ಎಂದು ಹೇಳಿದ್ದಾರೆ.

ಇಂಡಿಯನ್ ಐಡಲ್​ನ ಈ ಭಾವುಕ ಪ್ರೋಮೋ ಶನಿವಾರ ರಿಲೀಸ್ ಆಗಿದ್ದು, ದಿವಸ್ ಕಣ್ಣೀರು ಹಾಗೂ ನೇಹಾ ಕಕ್ಕರ್ ಮಾನವೀಯ ನಡೆಗೆ ಸಾಮಾಜಿಕ ಜಾಲತಾಣಿಗರು ಮೆಚ್ಚುಗೆ ಸೂಚಿಸಿದ್ದಾರೆ.

Intro:Body:

ಮುಂಬೈ: ತನ್ನ ಇಂಪಾದ ದನಿಯ ಮೂಲಕ ಅಂಸಖ್ಯಾತ ಅಭಿಮಾನಿ ಬಳಗವನ್ನು ಹೊಂದಿರುವ ಬಾಲಿವುಡ್ ಗಾಯಕಿ ನೇಹಾ ಕಕ್ಕರ್ ಮಾನವೀಯತೆ ವಿಚಾರವೊಂದಕ್ಕೆ ಸುದ್ದಿಯಾಗಿದ್ದಾರೆ.

ಖಾಸಗಿ ಚಾನೆಲ್​ ಒಂದರಲ್ಲಿ ಪ್ರಸಾರವಾಗುತ್ತಿರುವ ಇಂಡಿಯನ್ ಐಡಲ್​-11 ಶೋ ಸ್ಪರ್ಧಿಯೊಬ್ಬರಿಗೆ ನೇಹಾ ಕಕ್ಕರ್ ದೀಪಾವಳಿ ಆಚರಿಸಲು ಒಂದು ಲಕ್ಷ ರೂ. ನೀಡಿ ಬಡ ಸ್ಪರ್ಧಿಯ ಬಾಳಿಗೆ ಬೆಳಕು ತಂದಿದ್ದಾರೆ.

ಜಾರ್ಖಂಡ್ ಮೂಲಕ ಪುಟ್ಟ ಹಳ್ಳಿಯ ದಿವಸ್ ಹೆಸರಿನ ಸ್ಪರ್ಧಿ ವೇದಿಕೆ ಆಗಮಿಸಿದ ವೇಳೆ ಕಾರ್ಯಕ್ರಮದ ಜಡ್ಜ್​ ಆತನ ಬಳಿ ದೀಪಾವಳಿ ಹೇಗೆ ಆಚರಿಸುತ್ತೀರಿ ಎಂದು ಪ್ರಶ್ನಿಸುತ್ತಾರೆ. ಈ ಪ್ರಶ್ನೆಗೆ ಉತ್ತರಿಸುವ ವೇಳೆ ಕಣ್ಣೀರಾದ ದಿವಸ್, ತನ್ನ ಕಷ್ಟಗಳನ್ನು ಹೇಳಿಕೊಂಡಿದ್ದಾನೆ.

ಕಳೆದ ಆರು ವರ್ಷಗಳಲ್ಲಿ ಹಬ್ಬವನ್ನೇ ಆಚರಿಸಿಲ್ಲ, ಒಂದರ್ಥದಲ್ಲಿ ಯಾವಾಗ ಹಬ್ಬ ಅನ್ನುವ ವಿಚಾರವೇ ನನ್ನ ಅರಿವಿಗೆ ಬಂದಿಲ್ಲ. ಹೋಟೆಲ್​ಗಳಲ್ಲಿ ಪಾತ್ರೆ ತೊಳೆಯುತ್ತಾ ಕಷ್ಟದ ದಿನಗಳನ್ನು ದೂಡಿದೆ. ಈ ಸಂದರ್ಭದಲ್ಲಿ ಬದುಕಲ್ಲಿ ಬೆಳಕೇ ಇರಲಿಲ್ಲ ಎಂದು ದುಃಖತಪ್ತನಾಗಿ ಹೇಳಿದ್ದಾನೆ.

ದಿವಸ್ ಮಾತನ್ನು ಕೇಳಿ ಭಾವುಕರಾದ ಶೋನ ಮತ್ತೋರ್ವ ಜಡ್ಜ್​ ನೇಹಾ ಕಕ್ಕರ್, ಆ ಕ್ಷಣವೇ ಒಂದು ಲಕ್ಷ ನಾನು ನೀಡುತ್ತಿದ್ದೇನೆ ಎಂದು ಘೋಷಿಸಿದ್ದಾರೆ. ನೀವು ಆ ಹಣದಲ್ಲಿ ವಿಮಾನದ ಮೂಲಕ ಊರಿಗೆ ತೆರಳಿ, ಇಷ್ಟದ ಬಟ್ಟೆ ಹಾಗೂ ಸಿಹಿತಿನಿಸನ್ನು ಖರೀದಿಸಿ ಮನೆಯವರೊಂದಿಗೆ ಹಬ್ಬ ಆಚರಿಸಿ ಎಂದು ಹೇಳಿದ್ದಾರೆ.

ಇಂಡಿಯನ್ ಐಡಲ್​ನ ಈ ಭಾವುಕ ಪ್ರೋಮೋ ಶನಿವಾರ ರಿಲೀಸ್ ಆಗಿದ್ದು, ದಿವಸ್ ಕಣ್ಣೀರು ಹಾಗೂ ನೇಹಾ ಕಕ್ಕರ್ ಮಾನವೀಯ ನಡೆಗೆ ಸಾಮಾಜಿಕ ಜಾಲತಾಣಿಗರು ಮೆಚ್ಚುಗೆ ಸೂಚಿಸಿದ್ದಾರೆ.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.