ಹೈದರಾಬಾದ್ (ತೆಲಂಗಾಣ): ಬಾಲಿವುಡ್ ನಟ ಹೃತಿಕ್ ರೋಷನ್ ಯುವತಿಯೋರ್ವಳ ಜೊತೆ ಕಾಣಿಸಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.
ವೈರಲ್ ವಿಡಿಯೋದಲ್ಲಿ ಹೃತಿಕ್ ಯುವತಿಯ ಕೈಯನ್ನು ಹಿಡಿದುಕೊಂಡು ರೆಸ್ಟೋರೆಂಟ್‌ನಿಂದ ಹೊರಬರುತ್ತಿರುವುದನ್ನು ಕಾಣಬಹುದು. ಇವರ ಹಾವಭಾವವು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.
- " class="align-text-top noRightClick twitterSection" data="
">
ಶುಕ್ರವಾರ ರಾತ್ರಿ ಹೃತಿಕ್ ರೋಷನ್ ಮುಂಬೈನ ರೆಸ್ಟೋರೆಂಟ್‌ನ ಹೊರಗೆ ಕಾಣಿಸಿಕೊಂಡಿದ್ದಾರೆ. ನಟನ ಜೊತೆಯಲ್ಲಿ ಗೆಳೆಯರ ದಂಡೇ ಇತ್ತು. ಆದರೆ ಹೃತಿಕ್ ಅಪರಿಚಿತ ಯುವತಿ ಕೈಯನ್ನು ಹಿಡಿದು ತನ್ನ ಕಾರಿಗೆ ಕರೆದೊಯ್ದ ರೀತಿ ಅವರ ಡೇಟಿಂಗ್ ಜೀವನದ ಬಗ್ಗೆ ಊಹಾಪೋಹಗಳನ್ನು ಹುಟ್ಟುಹಾಕಿದೆ.
ಇದನ್ನೂ ಓದಿ: ಅಕ್ಷಯ್ ಕುಮಾರ್ ಅವರನ್ನು 'ಅಪ್ನಾ ಮಾಲ್' ಎಂದ ಟ್ವಿಂಕಲ್ ಖನ್ನಾ
ಈ ವಿಡಿಯೋ ವೈರಲ್ ಆದ ನಂತರ ಸಾಮಾಜಿಕ ಜಾಲತಾಣದಲ್ಲಿ ಡೇಟಿಂಗ್ ಕುರಿತ ಊಹಾಪೋಹಗಳು, ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಆಕೆ ಮಾಸ್ಕ್ ಧರಿಸಿದ್ದರಿಂದ ಅವರ ಗುರುತನ್ನು ಊಹಿಸುವುದರಲ್ಲಿ ಅಭಿಮಾನಿಗಳು ಬ್ಯುಸಿಯಾಗಿದ್ದಾರೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ