ಮುಂಬೈ: ಬಾಲಿವುಡ್ ಬ್ಯೂಟಿ ಪ್ರಿಯಾಂಕಾ ಚೋಪ್ರಾ ಬರ್ಲಿನ್‌ನಲ್ಲಿ ಚಿತ್ರೀಕರಣ ಮುಗಿಸಿ ಮತ್ತೆ ಲಾಸ್ ಏಂಜಲೀಸ್‌ಗೆ ಬಂದಿದ್ದಾರೆ. ಮನೆಗೆ ಮರಳಲು ಉತ್ಸುಕರಾಗಿದ್ದ ಪಿಗ್ಗಿ , ಪತಿ ನಿಕ್ ಜೋನಸ್ ಜೊತೆ ಲಾಂಗ್ ಡ್ರೈವ್ಗೆ ತೆರಳುವ ಮೊದಲು ತಮ್ಮ ಸಾಕುಪ್ರಾಣಿಗಳು ಮತ್ತು ಪತಿ ನಿಕ್ ಅವರೊಂದಿಗೆ ಕಾರಿನಲ್ಲಿ ಕೂತಿರುವ ಫೋಟೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾರೆ.
- " class="align-text-top noRightClick twitterSection" data="
">
ನಟಿ ಪ್ರಿಯಾಂಕಾ ಚೋಪ್ರಾ ಕಳೆದ ಕೆಲವು ದಿನಗಳಿಂದ ಶೂಟಿಂಗ್ ಹಿನ್ನೆಲೆ ಬರ್ಲಿನ್‌ನಲ್ಲಿದ್ದರು. ಶೂಟಿಂಗ್ ಮುಗಿಸಿ ಲಾಸ್ ಏಂಜಲೀಸ್‌ನಲ್ಲಿರುವ ಪತಿ ನಿಕ್ ಜೊನಾಸ್ ಮನೆಗೆ ಮರಳಿದ ಪಿಗ್ಗಿ,ತಮ್ಮ ಸಂತಸದ ಕ್ಷಣವನ್ನು ಫೋಟೋದಲ್ಲಿ ಸೆರೆ ಹಿಡಿದು , "Home is where the heart is" ಎಂದು ಕ್ಯಾಪ್ಶನ್ ಕೊಟ್ಟು ಅಪ್ಲೋಡ್ ಮಾಡಿದ್ದಾರೆ.
ಇಂದು ಬೆಳಿಗ್ಗೆ, ಈ ಬಾಲಿವುಡ್ ತಾರೆ ತಾನು ಲಾಸ್ ಏಂಜಲೀಸ್‌ಗೆ ಮರಳಿದ್ದೇನೆ ಎಂದು ಸಾಮಾಜಿಕ ಜಾಲತಾಣಗಳ ಮೂಲಕ ಅಭಿಮಾನಿಗಳಿಗೆ ತಿಳಿಸಿ, ನಂತರ ಇನ್ಸ್ಟಾಗ್ರಾಮ್ನಲ್ಲಿ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಡ್ರೈವರ್ ಸೀಟಿನಲ್ಲಿ ಪತಿ ನಿಕ್ ಜೊತೆ ಜಾಲಿ ರೈಡ್ ಗೆ ತೆರಳಲು ಪ್ರಿಯಾಂಕ ತಮ್ಮ ಸಾಕುಪ್ರಾಣಿಗಳನ್ನು ಕರೆದೊಯ್ದಿದ್ದಾರೆ. ಇನ್ನು ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪಿಗ್ಗಿ "Home is where the heart is" Idiariesofdiana @ginothegerman icknickjonas" ಎಂದು ಬರೆದಿದ್ದಾರೆ.
ಸದ್ಯ ಪ್ರಿಯಾಂಕ ಹಾಲಿವುಡ್ನ ಮ್ಯಾಟ್ರಿಕ್ಸ್-4 ಸಿನಿಮಾ ಶೂಟಿಂಗ್ನಲ್ಲಿ ಬ್ಯೂಸಿ ಆಗಿದ್ದು, ಹಿಂದಿಯಲ್ಲಿ ಹ್ಯಾಪಿನೆಸ್ ಕಂಟಿನ್ಯೂಸ್, ದಿ ವೈಟ್ ಟೈಗರ್ ಸಿನಿಮಾಗಳಲ್ಲಿ ಕೂಡ ಕಾಣಿಸಿಕೊಳ್ಳಲಿದ್ದಾರೆ.