ETV Bharat / sitara

ಹೆಸರಲ್ಲಷ್ಟೇ ಅಲ್ಲ ತೋಳಲ್ಲೂ ವಿದ್ಯುತ್ ಇದೆ.. ಸಿಲಿಂಡರ್​​ ಈ ನಟನ ಡಂಬಲ್ಸ್​, ಗಿರ ಗಿರ ತಿರುಗಿಸಿದ ಜಮ್ವಾಲ್​​​ - ಆ್ಯಕ್ಷನ್ ಹೀರೋ

ಬಾಲಿವುಡ್ ನಟ ವಿದ್ಯುತ್ ಜಮ್ವಾಲ್ ತುಂಬಿದ ಸಿಲಿಂಡರನ್ನು ಖಾಲಿ ಬಾಟಲ್​ ರೀತಿ ಎತ್ತಿ ತಿರುಗಿಸಿದ್ದಾರೆ. ಆ ಸಿಲಿಂಡರ್​​ ಎತ್ತಿಕೊಂಡು ವ್ಯಾಯಾಮ ಕೂಡಾ ಮಾಡಿದ್ದಾರೆ. ಈ ವಿಡಿಯೋವನ್ನು ಅವರು ತಮ್ಮ ಇನ್ಸ್​​ಟಾಗ್ರಾಂ ಪೇಜ್​​​ನಲ್ಲಿ ಷೇರ್ ಮಾಡಿಕೊಂಡಿದ್ದಾರೆ.

ವಿದ್ಯುತ್ ಜಮ್ವಾಲ್
author img

By

Published : Sep 6, 2019, 12:20 PM IST

ಗಟ್ಟಿಮುಟ್ಟು , ಕಟ್ಟುಮಸ್ತು ದೇಹವನ್ನು ತಮ್ಮದಾಗಿಸಿಕೊಳ್ಳಲು ಹುಡುಗರು ಮಾಡದ ವ್ಯಾಯಾಮಗಳಿಲ್ಲ. ಇನ್ನು ಮನೆಯಲ್ಲಿ ಗ್ಯಾಸ್ ಖಾಲಿ ಆ ಸಿಲಿಂಡರನ್ನು ಅಲ್ಲಿಂದ ಇಲ್ಲಿಗೆ ಎತ್ತಿಡಲು ಕೂಡಾ ನಾವು ಸರ್ಕಸ್ ಮಾಡುತ್ತೇವೆ. ಆದರೆ ಈ ಹೀರೋ ತುಂಬಿದ ಸಿಲಿಂಡರನ್ನು ಬಾಟಲ್ ರೀತಿ ಎತ್ತಿ ತಿರುಗಿಸಿದ್ದಾರೆ.

ಬಾಲಿವುಡ್ ನಟ ವಿದ್ಯುತ್ ಜಮ್ವಾಲ್​​​ಗೆ ಸಿಲಿಂಡರ್​​ ಎತ್ತುವುದು ಬಾಟಲ್ ಎತ್ತಿ ತಿರುಗಿಸಿದಷ್ಟೇ ಸುಲಭ. ಸಿನಿಮಾಗಳಲ್ಲಿ ಆ್ಯಕ್ಷನ್ ಹೀರೋ ಆಗಿ ತಮ್ಮನ್ನು ಗುರುತಿಸಿಕೊಂಡಿರುವ ವಿದ್ಯುತ್ ನಿನ್ನೆ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋವೊಂದನ್ನು ಷೇರ್ ಮಾಡಿದ್ದಾರೆ. ಸಮುದ್ರ ತಟದ ರೆಸಾರ್ಟ್ ಬಳಿ ಜಮ್ವಾಲ್ ತುಂಬಿದ ಸಿಲಿಂಡರ್ ಒಂದನ್ನು ಬಳಸಿಕೊಂಡು ಡಂಬಲ್ಸ್​​​​ನಂತೆ ಎಕ್ಸಸೈಸ್ ಮಾಡಿದ್ದಾರೆ. ಈ ವಿಡಿಯೋ ನೋಡಿ ಅಭಿಮಾನಿಗಳು ವಾರೆ..ವ್ಹಾ ಎಂದು ಆಶ್ಚರ್ಯಚಕಿತರಾಗಿದ್ದಾರೆ. ವಿದ್ಯುತ್ ಹೆಸರಿನಲ್ಲಿ ಮಾತ್ರವಲ್ಲ ಅವರ ತೋಳಿನಲ್ಲಿ ಕೂಡಾ ವಿದ್ಯುತ್ ಬಲವಿದೆ ಎಂದು ಅಭಿಮಾನಿಗಳು ಕಮೆಂಟ್ ಮಾಡಿದ್ದಾರೆ. ಜಮ್ವಾಲ್​ ಹಿಂದಿಯ ಫೋರ್ಸ್, ಬುಲೆಟ್ ರಾಜಾ, ಕಮಾಂಡೋ, ಜಂಗ್ಲಿ ಸೇರಿ ಕೆಲವೊಂದು ತೆಲುಗು ಸಿನಿಮಾದಲ್ಲಿ ನಟಿಸಿದ್ದಾರೆ. ಜೊತೆಗೆ ಮಾಡೆಲ್ ಆಗಿ ಕೂಡಾ ಹೆಸರು ಮಾಡಿದವರು. ಸಾಕಷ್ಟು ಜಾಹೀರಾತುಗಳಲ್ಲಿ ನೀವು ಜಮ್ವಾಲ್ ಅವರನ್ನು ನೋಡಬಹುದು.

Vidyut Jammwal

Intro:Body:

Cylinder

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.