ಹೈದರಾಬಾದ್: ಬಾಲಿವುಡ್ ನಟಿ ಕತ್ರಿನಾ ಕೈಫ್ ಗೆಳೆಯ ವಿಕ್ಕಿ ಕೌಶಲ್ರ 33 ನೇ ಹುಟ್ಟುಹಬ್ಬದ ನಿಮಿತ್ತ ಸಾಮಾಜಿಕ ಜಾಲತಾಣದಲ್ಲಿ ಹಳೆ ಫೋಟೋ ಶೇರ್ ಮಾಡಿ ವಿಶ್ ಮಾಡಿದ್ದಾರೆ.
ವಿಕ್ಕಿಗೆ ವಿಶೇಷವಾಗಿ ವಿಶ್ ಮಾಡಲು ಕತ್ರಿನಾ ಬ್ಲಾಕ್ಬಸ್ಟರ್ ಚಿತ್ರ ಉರಿಯಿಂದ ವಿಕ್ಕಿಯ ಚಿತ್ರವನ್ನು ಆಯ್ಕೆ ಮಾಡಿಕೊಂಡಿದ್ದಾಳೆ. ಅದರಲ್ಲಿ ವಿಕ್ಕಿ ಸೈನಿಕರೊಂದಿಗೆ ಸಮಯ ಕಳೆಯುವಾಗ ಆಕರ್ಷಕ ಸ್ಮೈಲ್ ಮಾಡಿರುವುದನ್ನು ಕಾಣಬಹುದಾಗಿದೆ. "ಹ್ಯಾಪಿಸ್ಟ್ ಬರ್ತ್ಡೇ @ವಿಕ್ಕಿ ಕೌಶಲ್ 09 ಯಾವಾಗಲೂ ನಗುತ್ತಿರುವ ಎಂದು ಬರೆದುಕೊಂಡಿದ್ದಾಳೆ.
ಓದಿ:ಮಿಸ್ ಯೂನಿವರ್ಸ್ 2020: ಮೂರನೇ ರನ್ನರ್ ಅಪ್ ಆದ ಉಡುಪಿ ಮೂಲದ ಕುವರಿ
ಈ ವರ್ಷದ ಆರಂಭದಲ್ಲಿ ಕತ್ರಿನಾ ವಿಕ್ಕಿಯನ್ನು ತಬ್ಬಿಕೊಂಡ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ ಎಂದು ರೂಮರ್ಸ್ ಹಬ್ಬಿತ್ತು. ಇವರಿಬ್ಬರು ಪ್ರೀತಿಸುತ್ತಿದ್ದಾರೆ ಎಂಬ ಮಾತುಗಳು ಸಹ ಬಾಲಿವುಡ್ ಅಂಗಳದಲ್ಲಿ ಚಾಲ್ತಿಯಲ್ಲಿದೆ.