ನವದೆಹಲಿ: ಆತ್ಮಹತ್ಯೆ ಮಾಡಿಕೊಂಡ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಜೀವನ ಆಧರಿಸಿದ 'ನ್ಯಾಯ್: ದಿ ಜಸ್ಟೀಸ್' ಚಿತ್ರದ ಬಿಡುಗಡೆಯನ್ನು ತಡೆಯಲು ದೆಹಲಿ ಹೈಕೋರ್ಟ್ ಗುರುವಾರ ನಿರಾಕರಿಸಿದೆ. ಚಿತ್ರವು ಓಟಿಟಿಯಲ್ಲಿ ಇದೇ ಶುಕ್ರವಾರ (ಜೂನ್ 11) ಬಿಡುಗಡೆಯಾಗಲಿದೆ. ರಜಪೂತ ತಂದೆ ಕೃಷ್ಣ ಕಿಶೋರ್ ಸಿಂಗ್ ಅವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಸಂಜೀವ್ ನರುಲಾ ಅವರಿದ್ದ ಪೀಠ ವಜಾ ಮಾಡಿದೆ.
ಇದನ್ನೂ ಓದಿ: ಬಹುಕಾಲದ ಗೆಳತಿ ಜೊತೆ ರಿಜಿಸ್ಟರ್ ಮದುವೆ ಆದ 'ಹಂಬಲ್ ಪೊಲಿಟಿಷಿಯನ್ ನೊಗರಾಜ್' ನಟ ದಾನೀಶ್ ಸೇಠ್
ಚಿತ್ರದಲ್ಲಿ ತಮ್ಮ ಮಗನ ಹೆಸರನ್ನು ಬಳಸಿಕೊಳ್ಳಲಿದೆ ಎನ್ನಲಾಗುತ್ತಿದೆ. ಅಲ್ಲದೇ ಚಿತ್ರದ ಬಿಡುಗಡೆಯಿಂದ ತನಿಖೆಗೆ ತೊಂದರೆಯಾಗಲಿದೆ. ಹಾಗಾಗಿ ಚಿತ್ರವನ್ನು ಬಿಡುಗಡೆ ಮಾಡದಂತೆ ತಡೆಕೋರಿ ಮೃತ ರಜಪೂತ ಅವರ ತಂದೆ ಕೃಷ್ಣ ಕಿಶೋರ್ ಸಿಂಗ್ ಅರ್ಜಿ ಸಲ್ಲಿಸಿದ್ದರು. ಆದರೆ, ಕೋರ್ಟ್ ಅವರ ಅರ್ಜಿಯನ್ನು ವಜಾ ಮಾಡಿದ್ದಲ್ಲದೇ ಚಿತ್ರದ ಬಿಡುಗಡೆಗೆ ಗ್ರೀನ್ ಸಿಗ್ನಲ್ ನೀಡಿದೆ. ಇತ್ತ ಚಿತ್ರದ ಬಿಡುಗಡೆಗೆ ಒಪ್ಪಿಗೆ ಸೂಚಿಸುತ್ತಿದ್ದಂತೆ ಬಾಲಿವುಡ್ ಅಂಗಳದಲ್ಲಿ ಕೂತೂಹಲ ಹೆಚ್ಚಾಗಿದೆ.
ನಾಳೆ (ಶುಕ್ರವಾರ) ಬಿಡುಗಡೆಯಾಗಲಿರುವ "ನ್ಯಾಯ್: ದಿ ಜಸ್ಟೀಸ್" ಚಿತ್ರದ ಜೊತೆ ಜೊತೆಗೆ, ಸುಶಾಂತ್ ರಜಪೂತ್ ಅವರ ಜೀವನವನ್ನು ಆಧರಿಸಿದ, ಸೂಸೈಡ್ ಆರ್ ಮರ್ಡರ್: ಎ ಸ್ಟಾರ್ ವಾಸ್ ಲಾಸ್ಟ್’, ‘ಶಶಾಂಕ್’ ಮತ್ತು ಇನ್ನೂ ಹೆಸರಿಡದ ಹಲವು ಚಿತ್ರಗಳು ತೆರೆಗೆ ಬರಲು ತಯಾರಿ ಮಾಡಿಕೊಂಡಿದೆ ಎನ್ನಲಾಗುತ್ತಿದೆ. ಆದರೆ, ಯಾವಾಗ ತೆರೆಗೆ ಬರಲಿವೆ ಅನ್ನೋದರ ಬಗ್ಗೆ ಇನ್ನೂ ಮಾಹಿತಿ ಲಭ್ಯವಾಗಿಲ್ಲ. ಹಲವು ಬಗೆಯ ಕಾನೂನುಗಳ ಹೋರಾಟದ ಬಳಿಕ ನಾಳೆ ಚಿತ್ರ ತೆರೆಗೆ ಬರುವುದು ಖಚಿತವಾಗಿದೆ.
ಇದನ್ನೂ ಓದಿ: ಪ್ರಭಾಸ್ ಅಭಿನಯದ ಪೌರಾಣಿಕ ಚಿತ್ರ ನಿರ್ದೇಶಿಸಲಿದ್ದಾರಾ ಕೆಜಿಎಫ್ ಮಾಂತ್ರಿಕ ನೀಲ್?
ಚಿತ್ರದ ನಿರ್ಮಾಪಕರು ತಮ್ಮ ಲಾಭಕ್ಕಾಗಿ ಪರಿಸ್ಥಿತಿಯ ಲಾಭವನ್ನು ಪಡೆದುಕೊಳ್ಳುತ್ತಿದ್ದಾರೆ. ಸಿನಿಮಾ ಅಲ್ಲದೇ ಅಲ್ಲದೇ ಹಲವು ವೆಬ್ ಸಿರೀಸ್, ಪುಸ್ತಕಗಳು ಹೊರ ಬರುತ್ತಿದೆ. ಇದು ನಮ್ಮ ಕುಟುಂಬದ ಪ್ರತಿಷ್ಠೆಗೆ ಧಕ್ಕೆ ತರಬಹುದು ಎಂದು ಹಿರಿಯ ವಕೀಲ ವಿಕಾಸ್ ಸಿಂಗ್ ಮತ್ತು ವಕೀಲ ವರುಣ್ ಸಿಂಗ್ ಅವರ ಮೂಲಕ ಚಿತ್ರದ ತಡೆ ಕೋರಿ ರಜಪೂತ್ ಅವರ ತಂದೆ ಕೋರ್ಟ್ ಮೊರೆ ಹೋಗಿದ್ದರು. ಅಲ್ಲದೇ ಸಿನಿಮಾ ನಿರ್ದೇಶಕರು ನಷ್ಟ ಭರಿಸುವಂತೆಯೂ ಈ ಅರ್ಜಿಯಲ್ಲಿ ಕೋರಲಾಗಿತ್ತು.
ಇನ್ನು ಈ ಅರ್ಜಿ ವಜಾ ಪ್ರಶ್ನಿಸಿ ಮೃತ ಸುಶಾಂತ್ ರಜಪೂತ್ ಅವರ ತಂದೆ ಹಾಗೂ ಅವರ ಪರ ವಕೀಲರು ಹೈಕೋರ್ಟ್ ಬಾಗಿಲು ತಟ್ಟಲು ಸಿದ್ಧತೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.