ಬಾಲಿವುಡ್ ಸೇರಿದಂತೆ ಕನ್ನಡ ಸಿನಿಮಾಗಳಲ್ಲಿ ನಟಿಸುವ ಮೂಲಕ ಜನಪ್ರಿಯತೆ ಗಳಿಸಿರುವ ನಟಿ ಯಾಮಿ ಗೌತಮ್ 32ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.
ಬಾಲಿವುಡ್ನಲ್ಲಿ ಸ್ಟಾರ್ ನಟರ ಜೊತೆ ಮಿಂಚುತ್ತಿರುವ ನಟಿ ಯಾಮಿ ಗೌತಮ್ ಬೆಳ್ಳಿತೆರೆಗೆ ಪರಿಚಯವಾಗಿದ್ದು ಸ್ಯಾಂಡಲ್ವುಡ್ನಿಂದ ಎಂಬುದು ವಿಶೇಷ. ಸಿನಿಮಾಗೆ ಕಾಲಿಡುವ ಮೊದಲು ಯಾಮಿ ಹಿಂದಿ ಕಿರುತೆರೆ ಧಾರಾವಾಹಿಗಳಲ್ಲಿ ನಟಿಸುತ್ತಿದ್ದರು. ಇದೀಗ ಯಾಮಿ ಹಿಂದಿ ಸಿನಿಮಾ ರಂಗದಲ್ಲಿ ಸತತ ಎಂಟು ವರ್ಷ ಪೂರೈಸಿದ್ದಾರೆ. ವಿನೂತನ ಕಥಾ ಹಂದರ ಹೊಂದಿರುವ ಸಿನಿಮಾಗಳಲ್ಲಿ ನಟಿಸುವ ಮೂಲಕ ತಮ್ಮದೇ ಆದ ನಟನೆಯ ಛಾಪು ಮೂಡಿಸಿದ್ದಾರೆ.
ಯಾಮಿ ಅವರು ಶೂಜಿತ್ ಸರ್ಕಾರ್ ನಿರ್ದೇಶನದ ವಿಕ್ಕಿ ಡೋನರ್ ಸಿನಿಮಾದ ಮೂಲಕ ಬಿ-ಟೌನ್ಗೆ ಎಂಟ್ರಿ ಕೊಟ್ಟರು. ಅಷ್ಟೇ ಅಲ್ಲದೆ ಹೃತಿಕ್, ವರುಣ್ ಧವನ್ ಹೀಗೆ ಹಲವಾರು ಸ್ಟಾರ್ಗಳ ಜೊತೆ ಸಿನಿಮಾಗಳಲ್ಲಿ ತೆರೆ ಹಂಚಿಕೊಂಡಿದ್ದಾರೆ. ಇಂದು ಯಾಮಿ 32ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.