ಮುಂಬೈ( ಮಹಾರಾಷ್ಟ್ರ): ಮಿ.ಫರ್ಫೆಕ್ಷನಿಸ್ಟ್ ಎಂದೇ ಹೆಸರಾಗಿರುವ ಅಮಿರ್ ಖಾನ್ ಇಂದು 57ನೇ ವರ್ಷ ಪೂರೈಸಿ 58ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಅಭಿಮಾನಿಗಳು ಶುಭಾಶಯಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.
ಅಮೀರ್ ಖಾನ್.. ಇವರು ವಿಭಿನ್ನ ವಯಸ್ಸಿನ ಪಾತ್ರಗಳಿಗಾಗಿ ತಮ್ಮನ್ನ ತಯಾರು ಮಾಡಿಕೊಂಡು, ಎಲ್ಲಾ ಸಿನಿಮಾಗಳು ಸೂಪರ್ ಹಿಟ್ ಆಗುತ್ತವೆ ಅನ್ನೋದನ್ನ ಸಾಬೀತು ಮಾಡುವ ನಟ. ಇಂದು ಬಾಲಿವುಡ್ನ ಈ ಮಿಸ್ಟರ್ ಪರ್ಫೆಕ್ಟ್ ತಮ್ಮ 57ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 'ಮಿಸ್ಟರ್ ಪರ್ಫೆಕ್ಷನಿಸ್ಟ್' ಎನ್ನುವುದಕ್ಕಿಂತ ತಾವೊಬ್ಬ 'ಮಿಸ್ಟರ್ ಪ್ಯಾಶನೇಟ್' ಎಂದು ಭಾವಿಸುತ್ತಾರೆ ಅಮೀರ್ ಖಾನ್.
ಸಂದೇಶಗಳ ಮೂಲಕ ಜನರ ಮನ ಗೆದ್ದ ನಟ: ನಟನಾಗಿರಲಿ ಅಥವಾ ನಿರ್ದೇಶಕನಾಗಿರಲಿ ಇಲ್ಲ ನಿರ್ಮಾಪಕನಾಗಿರಲಿ ಅಮೀರ್ ಪ್ರೇಕ್ಷಕರಿಗೆ ಮನರಂಜನೆ ಮಾತ್ರವಲ್ಲ, ಸಮಾಜಕ್ಕೆ ಒಂದು ಸಂದೇಶವನ್ಹು ನೀಡುವ ಕೆಲಸವನ್ನು ತಮ್ಮ ಚಿತ್ರಗಳ ಮೂಲಕ ಮಾಡುತ್ತಲೇ ಇರುತ್ತಾರೆ. ಅವರ ಲಗಾನ್ (2001), ಗಜಿನಿ (2008), 3 ಈಡಿಯಟ್ಸ್ (2009), PK (2014), ದಂಗಲ್ (2016), ಸೀಕ್ರೆಟ್ ಸೂಪರ್‌ಸ್ಟಾರ್ (2017) ಮುಂತಾದ ಚಿತ್ರಗಳಲ್ಲಿ ತಮ್ಮ ನಟನಾ ಕೌಶಲ್ಯವನ್ನು ಸಾಬೀತುಪಡಿಸಿದ್ದಾರೆ. ಅಷ್ಟೇ ಅಲ್ಲ ಈ ಚಿತ್ರಗಳ ಮೂಲಕ ಚಿತ್ರ ರಸಿಕರಿಗೆ ಜೀವನದ ಪಾಠ ಹಾಗೂ ಒಂದು ಉತ್ತಮ ಸಂದೇಶವನ್ನು ಸಾರಿದ್ದಾರೆ ಎಂಬುದು ಗಮನಾರ್ಹ
ಅಮೀರ್ ವೃತ್ತಿ ಜೀವನದ ಪ್ರಮುಖ ಅಂಶಗಳು: ಅಮೀರ್ ಅವರ ಯಶಸ್ವಿ ವೃತ್ತಿಜೀವನದ ಪ್ರಮುಖ ಅಂಶವೆಂದರೆ, ಅವರು ಕೇವಲ ಆಯ್ದ ಚಿತ್ರಗಳಲ್ಲಿ ಮಾತ್ರ ನಟನೆ ಮಾಡುತ್ತಾರೆ. ಕಡಿಮೆ ಚಲನಚಿತ್ರಗಳಲ್ಲಿ ನಟಿಸುವ ಮೂಲಕ, ಆ ಸಿನಿಮಾ ಜನರಿಗೆ ಮುಟ್ಟುವಂತೆ ಮಾಡುವುದು ಅಮೀರ್ ಖಾನ್ ವಿಶೇಷತೆ ಆಗಿದೆ. ಅಮೀರ್ ಖಾನ್ ಪ್ರೇಕ್ಷಕರ ಮೆಚ್ಚುಗೆ ಪಡೆಯುವಲ್ಲಿ ಹಾಗೂ ನೋಡುಗರ ಸಂತಸದ ಕಡೆ ಹೆಚ್ಚಿನ ಗಮನ ಕೇಂದ್ರೀಕರಿಸಿ ತಮ್ಮ ಚಿತ್ರಗಳನ್ನ ಆಯ್ಕೆ ಮಾಡಿಕೊಳ್ಳುತ್ತಾರೆ. ಇದಕ್ಕೆ ನಾನು ಮೊದಲ ಆದ್ಯತೆ ನೀಡುತ್ತೇನೆ ಎಂದೂ ಹೇಳಿಕೊಂಡಿದ್ದಾರೆ.
ಇದನ್ನು ಓದಿ:'ಅನಿಮಲ್' ಸಿನಿಮಾದ ಸ್ಪೆಷಲ್ ಸಾಂಗ್‍ಗೆ ರಶ್ಮಿಕಾ ಸ್ಟೆಪ್ !