ಜೈಪುರ(ರಾಜಸ್ಥಾನ): ಬಾಲಿವುಡ್ ತಾರಾ ಜೋಡಿ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ವಿವಾಹ ಸಮಾರಂಭದಲ್ಲಿ ಭಾಗವಹಿಸಿದ್ದ ಅತಿಥಿಗಳು ಮತ್ತು ಸಂಬಂಧಿಕರು ಮುಂಬೈಗೆ ಮರಳುತ್ತಿದ್ದಾರೆ.
ಡಿಸೆಂಬರ್ 9ರಂದು ಮಾಧೋಪುರದಲ್ಲಿರುವ ಸಿಕ್ಸ್ ಸೆನ್ಸ್ ಫೋರ್ಟ್ ಬರ್ವಾರಾದಲ್ಲಿ ಕತ್ರಿನಾ-ವಿಕ್ಕಿ ವಿವಾಹ ಸಪ್ತಪದಿ ತುಳಿದಿದ್ದಾರೆ. ಮದುವೆ ಸಮಾರಂಭದಲ್ಲಿ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಅವರ ಕುಟುಂಬ ಸದಸ್ಯರು ಮತ್ತು ಸಂಬಂಧಿಕರು ಸಂಭ್ರಮಿಸಿ ನವಜೋಡಿಗೆ ಶುಭ ಹಾರೈಸಿದರು.
ನಟ ವಿಕ್ಕಿ ಕೌಶಲ್ ಅವರ ಪೋಷಕರು ಜೈಪುರ ವಿಮಾನ ನಿಲ್ದಾಣ ತಲುಪಿದ್ದು, ಈ ವೇಳೆ ಕತ್ರಿನಾ- ವಿಕ್ಕಿ ವಿವಾಹದ ಸಿಹಿ ತಿಂಡಿಗಳನ್ನು ಮಾಧ್ಯಮದವರಿಗೆ ಹಂಚಿದರು. ವಿಕ್ಕಿ ಕೌಶಲ್ ಸಹೋದರ ಸನ್ನಿ ಕೌಶಲ್ ಕೂಡ ಜೈಪುರ ವಿಮಾನ ನಿಲ್ದಾಣದಿಂದ ಮುಂಬೈಗೆ ತೆರಳಿದ್ದಾರೆ. ಅದೇ ವೇಳೆ, ನಿರ್ದೇಶಕ ಕಬೀರ್ ಖಾನ್, ಅವರ ಪತ್ನಿ ಮಿನಿ ಮಾಥುರ್, ನಟಿ ಸಿಮ್ರಾನ್, ಸರ್ವಾರಿ ವಾಘ್, ಕತ್ರಿನಾ ಅವರ ಮೇಕಪ್ ಕಲಾವಿದರು ಮತ್ತು ಜಿಮ್ ತರಬೇತುದಾರರು ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಚೌತ್ ಕಾ ಬರ್ವಾಡದಿಂದ ಜೈಪುರ ವಿಮಾನ ನಿಲ್ದಾಣವನ್ನು ತಲುಪಿದರು.
ಇತ್ತ ಕತ್ರಿನಾ ಕೈಫ್ ಅವರ ಪೋಷಕರು, ಸಹೋದರಿಯರು ಮತ್ತು ಸಹೋದರ ಜೈಪುರ ವಿಮಾನ ನಿಲ್ದಾಣವನ್ನು ತಲುಪಿದ್ದು, ಅಲ್ಲಿಂದ ಮುಂಬೈಗೆ ತೆರಳುತ್ತಿದ್ದಾರೆ. ಈ ವೇಳೆ ಎಲ್ಲಾ ಅಥಿತಿಗಳು ವಿಕ್ಕಿ-ಕತ್ರಿನಾ ಮದುವೆ ಸಿಹಿ ತಿಂಡಿಗಳ ಬಾಕ್ಸ್ಗಳೊಂದಿಗೆ ತೆರಳಿದರು. ಸಿಹಿತಿಂಡಿಗಳ ಬಾಕ್ಸ್ನಲ್ಲಿ ಧನ್ಯವಾದದ ಪತ್ರ ಕೂಡ ಕಂಡು ಬಂದಿತು.
ಇಂದು ಬೆಳಗ್ಗೆ ಜೈಪುರ ವಿಮಾನ ನಿಲ್ದಾಣದಲ್ಲಿ ಕತ್ರಿನಾ ಕೈಫ್- ವಿಕ್ಕಿ ಕೌಶಲ್ ಜೈಪುರ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದಲ್ಲಿ ಮುಂಬೈಗೆ ತೆರಳಿದ್ದಾರೆ.
ಇದನ್ನೂ ಓದಿ: ರಿಲೀಸ್ಗೂ ಮುನ್ನವೇ ಸಂಕಷ್ಟ.. '83' ಸಿನಿಮಾ ವಿರುದ್ಧ ವಂಚನೆ ಪ್ರಕರಣ ದಾಖಲು