ವಾಷಿಂಗ್ಟನ್: ಗಾಯಕಿ ಹಾಗೂ ಗೀತರಚನೆಕಾರ್ತಿ ಬಿಲ್ಲಿ ಎಲಿಶ್ ಅವರು ಜೇಮ್ಸ್ ಬಾಂಡ್ ಥೀಮ್ ಸಾಂಗ್ 'ನೋ ಟೈಮ್ ಟು ಡೈ' ಗಾಗಿ ಗ್ರ್ಯಾಮಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಅಕ್ಟೋಬರ್ 8 ರಂದು ಬಿಡುಗಡೆ ಆಗುವ ಮುನ್ನ ಅವರು ಈ ಟ್ರೋಫಿಯನ್ನು ಪಡೆದರು. ಫೆಬ್ರವರಿ 13 ರಂದು ಎಲಿಶ್ 'ನೋ ಟೈಮ್ ಟು ಡೈ' ಬಿಡುಗಡೆ ಮಾಡಿದ್ದರು. ಟ್ರ್ಯಾಕ್ ಬಿಲ್ಬೋರ್ಡ್ ಹಾಟ್ 100 ಪಟ್ಟಿಯಲ್ಲಿ 16 ನೇ ಸ್ಥಾನದಲ್ಲಿದೆ. ಐಕಾನಿಕ್ 007 ಫ್ರ್ಯಾಂಚೈಸ್‌ಗಾಗಿ ಥೀಮ್ ಸಾಂಗ್ ಅನ್ನು ಬರೆದು ರೆಕಾರ್ಡ್ ಮಾಡಿದ ಅತ್ಯಂತ ಕಿರಿಯ ಕಲಾವಿದೆ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ. ಎಲಿಶ್ ಅವರ 'ಎವೆರಿಥಿಂಗ್ ಐ ವಾಂಟೆಡ್' ವರ್ಷದ ಅತ್ಯುತ್ತಮ ವಿಭಾಗಗಳಲ್ಲಿ ಮತ್ತು ಅತ್ಯುತ್ತಮ ಹಾಡುಗಳಲ್ಲಿ ನಾಮ ನಿರ್ದೇಶನಗೊಂಡಿದೆ.
ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ 63 ನೇ ವಾರ್ಷಿಕ ಗ್ರ್ಯಾಮಿ ಪ್ರಶಸ್ತಿಗಳು ವಿಳಂಬವಾಗಿದ್ದವು. ಜನವರಿ 31 ರಂದು ನಡೆಯಬೇಕಿದ್ದ ಸಮಾರಂಭ ಮಾರ್ಚ್ 14ಕ್ಕೆ ಮುಂದೂಡಿಕೆಯಾಗಿತ್ತು. ಹಾಸ್ಯನಟ ಮತ್ತು ಟಾಕ್ ಶೋ ಹೋಸ್ಟ್ ಟ್ರೆವರ್ ನೋವಾ ಈ ವರ್ಷದ ಗ್ರ್ಯಾಮಿಸ್ ಅನ್ನು ನಡೆಸಿಕೊಟ್ಟಿದ್ದಾರೆ. ಈ ವರ್ಷದ ಗ್ರಾಮ್ಯಿ ಸಮಾರಂಭ ಲಾಸ್ ಏಂಜಲೀಸ್ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆಯಿತು.