ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಸದ್ಯ 'ಗೆಹ್ರೈಯಾನ್' ಚಿತ್ರವು ಸದ್ಯ ಬೋಲ್ಡ್ ದೃಶ್ಯಗಳಿಂದಾಗಿ ಸುದ್ದಿಯಲ್ಲಿದೆ. ಈಗಾಗಲೇ ಚಿತ್ರದ ಟ್ರೈಲರ್ ಹಾಗೂ ಹಾಡೊಂದು ರಿಲೀಸ್ ಆಗಿದ್ದು, ಸಿನಿಪ್ರಿಯರ ಮೆಚ್ಚುಗೆಗೆ ಪಾತ್ರವಾಗಿದೆ. ಅದರಲ್ಲೂ ನಟ ಸಿದ್ಧಾಂತ್ ಚತುರ್ವೇದಿ ಹಾಗೂ ದೀಪಿಕಾರ ಬೋಲ್ಡ್ ಸೀನ್ಗಳು ಎಲ್ಲರ ಹುಬ್ಬೇರುವಂತೆ ಮಾಡಿವೆ.
ಚಿತ್ರದಲ್ಲಿನ ಚುಂಬನದ ದೃಶ್ಯಗಳ ಬಗ್ಗೆ ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿರುವ ದೀಪಿಕಾ, ನಾನು ಸಿದ್ಧಾಂತ್ ಚತುರ್ವೇದಿ ಜೊತೆ 'ಗೆಹ್ರೈಯಾನ್' ಚಿತ್ರದಲ್ಲಿ ಇಂಟಿಮೇಟ್ ದೃಶ್ಯಗಳಲ್ಲಿ ನಟಿಸಿದ್ದೇನೆ. ಆದರೆ, ಚುಂಬನದ ದೃಶ್ಯಗಳು ಪ್ರೇಕ್ಷಕರನ್ನು ಪ್ರಚೋದಿಸುವ ಮತ್ತು ಚಿತ್ರದತ್ತ ಸೆಳೆಯುವ ಉದ್ದೇಶದಿಂದ ಮಾಡಿದ್ದಲ್ಲ ಎಂದಿದ್ದಾರೆ.
ಈ ರೋಮ್ಯಾಂಟಿಕ್ ದೃಶ್ಯಗಳು ಚಿತ್ರದ ಕಥೆಯ ಒಂದು ಭಾಗವಾಗಿವೆ. ಅಂತಹ ಸೀನ್ಗಳು ಒಂದು ವಯಸ್ಸು ಅಥವಾ ಒಂದು ಲಿಂಗಕ್ಕೆ ಸೀಮಿತ ಎಂಬ ಮಾತನ್ನು ನಾನು ಒಪ್ಪುವುದಿಲ್ಲ. ಸಿನಿಮಾದ ಕಥೆಗೆ ಅಗತ್ಯವಿದ್ದರೆ, ಅಂತಹ ದೃಶ್ಯಗಳಲ್ಲಿ ನಟಿಸಲು ನಾನು ಸದಾ ಸಿದ್ಧಳಿದ್ದೇನೆ. ಇದು ನನ್ನ ವೈಯಕ್ತಿಕ ಅಭಿಪ್ರಾಯವಾಗಿದ್ದು, ಎಲ್ಲರೂ ಈ ಬಗ್ಗೆ ಭಿನ್ನವಾಗಿ ಯೋಚಿಸುತ್ತಾರೆ ಎನ್ನುತ್ತಾರೆ ದೀಪಿಕಾ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ಯಾವುದೇ ನಿರ್ದೇಶಕರಿಂದಲೂ ನಾನು ಸಿನಿಮಾ ಸ್ಕ್ರಿಪ್ಟ್ ಕೇಳಿದಾಕ್ಷಣ, ಕಂಫರ್ಟ್ ಅನ್ನಿಸಿದ್ರೆ, ಆತ್ಮವಿಶ್ವಾಸವಿದ್ದರೆ ಮಾತ್ರ ನಟಿಸಲು ಒಪ್ಪುತ್ತೇನೆ. ಒಂದು ವೇಳೆ ಶಕುನ್ ಬಾತ್ರಾ ಈ ಸಿನಿಮಾ ಮಾಡದಿದ್ದರೆ ನಾನು ಒಪ್ಪುತ್ತಿರಲಿಲ್ಲ. ಚಿತ್ರಕ್ಕೆ ಬೇಕಾದ ದೃಶ್ಯಗಳನ್ನು ಅಗತ್ಯದಂತೆ ಚಿತ್ರೀಕರಿಸಲಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ.
'ಗೆಹ್ರಾಯನ್'ನಲ್ಲಿ ನನ್ನ ಪಾತ್ರ ಮನಸ್ಸಿಗೆ ತುಂಬಾ ಹತ್ತಿರವಾಗಿದೆ. ಜತೆಗೆ ನಾನು ತೆರೆಯ ಮೇಲೆ ನಟಿಸಿದ ಅತ್ಯಂತ ಸವಾಲಿನ ಪಾತ್ರಗಳಲ್ಲಿ ಒಂದಾಗಿದೆ. ಸವಾಲಿನ ಪಾತ್ರವನ್ನು ನಿರ್ವಹಿಸುವ ಅವಕಾಶವನ್ನು ಪಡೆದಿದ್ದಕ್ಕಾಗಿ ನಾನು ಕೃತಜ್ಞಳಾಗಿದ್ದೇನೆ ಎಂದು ಈ ಹಿಂದೆಯೇ ಹೇಳಿದ್ದರು.
ಶಕುನ್ ಬಾತ್ರಾ ನಿರ್ದೇಶನದ 'ಗೆಹ್ರೈಯಾನ್' ಚಿತ್ರದಲ್ಲಿ ದೀಪಿಕಾ ಪಡುಕೋಣೆ, ಸಿದ್ಧಾಂತ್ ಚತುರ್ವೇದಿ, ಅನನ್ಯ ಪಾಂಡೆ, ಧೈರ್ಯ ಕರ್ವಾ, ನಾಸೆರುದ್ದೀನ್ ಶಾ ಮತ್ತು ರಜತ್ ಕಪೂರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಆನಂದ್ ಎಲ್. ರಾಯ್ ನಿರ್ದೇಶನದ ಈ ಚಿತ್ರವನ್ನು ಕರಣ್ ಜೋಹರ್ ಅವರ ಧರ್ಮ ಪ್ರೊಡಕ್ಷನ್ಸ್ ಮತ್ತು ವಯಾಕಾಮ್ 18 ಸ್ಟುಡಿಯೋಸ್ ಮತ್ತು ಬಾತ್ರಾ ಅವರ ಜೌಸ್ಕಾ ಫಿಲ್ಮ್ಸ್ ಸಹಯೋಗದೊಂದಿಗೆ ಜಂಟಿಯಾಗಿ ನಿರ್ಮಿಸಲಾಗಿದೆ. ಈ ಚಿತ್ರವು ಫೆಬ್ರವರಿ 11 ರಂದು ಅಮೆಜಾನ್ ಪ್ರೈಮ್ನಲ್ಲಿ ತೆರೆ ಕಾಣಲಿದೆ.
ಇದನ್ನೂ ಓದಿ: ಗೆಹ್ರೈಯಾನ್ ಚಿತ್ರ ಪ್ರಚಾರದ ವೇಳೆ ಧರಿಸಿದ್ದ ಉಡುಪಿನ ವಿಚಾರ: ಟ್ರೋಲ್ಗೆ ಒಳಗಾದ ಅನನ್ಯಾ ಪಾಂಡೆ